ರಾಜ್ಯದಲ್ಲಿ ಗದ್ದುಗೆ ಗುದ್ದಾಟ! – ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ ಎಂದ ಕೆ.ಎನ್‌ ರಾಜಣ್ಣ!

ರಾಜ್ಯದಲ್ಲಿ ಗದ್ದುಗೆ ಗುದ್ದಾಟ! – ಡಿಕೆಶಿಗೆ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ ಎಂದ ಕೆ.ಎನ್‌ ರಾಜಣ್ಣ!

ರಾಜ್ಯದಲ್ಲಿ ಕುರ್ಚಿ ಫೈಟ್‌ ತಣ್ಣಗಾಗುವಂತೆ ಕಾಣುತ್ತಿಲ್ಲ. ಪದೇ ಪದೇ ಸಿಎಂ ಬದಲಾವಣೆ ಸುದ್ದಿ ಸದ್ದು ಮಾಡುತ್ತಲೇ ಇದೆ. ಇದೀಗ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾಜಿ ಸಚಿವ ಕೆ. ಎನ್‌ ರಾಜಣ್ಣ ಶಾಕಿಂಗ್‌ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸಿಎಂಗೆ ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಕೊಡಲಿ, ಇಲ್ಲ ಬದಲಾವಣೆ ಮಾಡ್ತೀವಿ ಅಂತಾದ್ರೂ ಹೇಳಲಿ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಕ್ಕದ್ಮನೆ ಆಂಟಿಯನ್ನ ಹಿಂಬಿದಿಯಿಂದ ತಬ್ಬಿಕೊಂಡ ಅಂಕಲ್‌! – ಆಮೇಲೆ ಆಗಿದ್ದೇನು ಗೊತ್ತಾ?

ಮೈಸೂರಿನಲ್ಲಿ ಮಾತನಾಡಿದ ಕೆ. ಎನ್‌ ರಾಜಣ್ಣ, ಕಾಂಗ್ರೆಸ್ ಹೈಕಮಾಂಡ್ ಅತಿ ಬೇಗ ಜಾಗರೂಕವಾಗಿ ನಿರ್ಧಾರ ಕೈಗೊಳ್ಳಲಿ. ನಿರ್ಧಾರ ತಡವಾದಷ್ಟು ಅದು ಪಕ್ಷಕ್ಕೆ ಮತ್ತು ಸರ್ಕಾರದ ಮೇಲೆ ಪರಿಣಾಮ ಬೀರುತ್ತದೆ. ಡಿಕೆ ಶಿವಕುಮಾರ್‌ಗೆ ಆಸೆ ಇರುವುದು ಸಹಜ. ಅವರು ನಮ್ಮ ಪಕ್ಷದ ಅಧ್ಯಕ್ಷರು. ಹೀಗಾಗಿ ಸಿಎಂ ಕುರ್ಚಿ ಮೇಲೆ ಜಾಸ್ತಿಯೇ ಆಸೆ ಇದೆ. ಅದು ತಪ್ಪು ಕೂಡ ಅಲ್ಲ ಎಂದು ತಿಳಿಸಿದ್ದಾರೆ.

ನಾನು ಸಿಎಂ ಬದಲಾಗುತ್ತಾರೆ ಅಂತಾನೂ ಹೇಳಲ್ಲ, ಇರುತ್ತಾರೆ ಅಂತಾನೂ ಹೇಳಲ್ಲ. ಆದರೆ ಹೈಕಮಾಂಡ್ ಸಿಎಂಗೆ ನೀವು ಪರಿಪೂರ್ಣ ಸ್ವತಂತ್ರರು ಅಧಿಕಾರ ಮುಂದುವರೆಸಿ ಎಂಬ ಗ್ರೀನ್ ಸಿಗ್ನಲ್ ಆದರೂ ಕೊಡಲಿ. ಇಲ್ಲ ಬದಲಾವಣೆ ಮಾಡುತ್ತೇವೆ ಎಂಬುದಾದರೂ ಹೇಳಲಿ. ಎರಡು ಬಿಟ್ಟು ಬರಿ ಗೊಂದಲವೇ ಇದ್ರೆ ಅದು ಎಲ್ಲಾ ರೀತಿಯ ಸಮಸ್ಯೆಗೆ ಕಾರಣವಾಗುತ್ತದೆ ಎಂದಿದ್ದಾರೆ.

Shwetha M