ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್! – ಕಾರಣವೇನು ಗೊತ್ತಾ?

ಗಾಂಜಾ ಪ್ರಕರಣ ಬೇಧಿಸಲು ಹೋದ ಕರ್ನಾಟಕ ಪೊಲೀಸ್​​​ ಒಡಿಶಾದಲ್ಲಿ ಅರೆಸ್ಟ್! – ಕಾರಣವೇನು ಗೊತ್ತಾ?

ಪೊಲೀಸರು ಒಂದು ಕೇಸ್‌ ಅನ್ನು ಜಾಡು ಹಿಡಿದು ಹೋದ್ರೆ ಆರೋಪಿಗಳನ್ನು ಪತ್ತೆ ಹಚ್ಚುವವರೆಗೂ ಬಿಡೋದಿಲ್ಲ. ರಾತ್ರಿ ಹಗಲೆನ್ನದೇ ಶೋಧ ಕಾರ್ಯ ಮಾಡುತ್ತಾರೆ. ಆರೋಪಿ ಎಲ್ಲಿ ಬಚ್ಚಿಟ್ಟುಕೊಂಡಿದ್ರೂ ಆತನನ್ನು ಪತ್ತೆಹಚ್ಚಲು ಏನಾದ್ರೂ ಕ್ಲೂ ಸಿಗುತ್ತಾ ಅಂತಾ ನೋಡ್ತಾರೆ. ಯಾವ ಮೂಲೆಯಲ್ಲಿ ಅಡಗಿದ್ರೂ ಅಲ್ಲಿಗೆ ತೆರಳಿ ಆತನನ್ನು ಹಿಡಿಯುತ್ತಾರೆ. ಇದೀಗ ಕರ್ನಾಟಕ ಪೊಲೀಸರು ಡ್ರಗ್ಸ್‌ ದಂಧೆಯನ್ನು ಪತ್ತೆಹಚ್ಚಲು ಹೊರಟಿದ್ದರು. ಒಡಿಶಾದಲ್ಲಿ ಆರೋಪಿಗಳ ಬಗ್ಗೆ ಕ್ಲೂ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸರು ಒಡಿಶಾಗೆ ತೆರಳಿದ್ದು, ಅಲ್ಲಿ ಅವರಿಗೆ ದೊಡ್ಡ ಶಾಕ್‌ ಎದುರಾಗಿದೆ. ಡ್ರಗ್ಸ್‌ ದಂಧೆಕೋರರನ್ನು ಹಿಡಿಯಲು ಹೋಗಿ ಪೊಲೀಸರೇ ಅರೆಸ್ಟ್‌ ಆಗಿದ್ದಾರೆ.

ಇದನ್ನೂ ಓದಿ: ಪಿಂಚಣಿ ಹಣಕ್ಕಾಗಿ 91 ವರ್ಷದ ದೊಡ್ಡಮ್ಮಳನ್ನೇ ಮದುವೆಯಾದ 23ರ ಯುವಕ!

ಅಷ್ಟಕ್ಕೂ ಆಗಿದ್ದೇನು?

ಗಾಂಜಾ ಪ್ರಕರಣ ಬೇಧಿಸಲು ಕರ್ನಾಟಕದಿಂದ ಪೊಲೀಸರು ಒಡಿಶಾಗೆ ತೆರಳಿದ್ದಾರೆ. ಈ ವೇಳೆ ಒಡಿಶಾದ ಪೊಲೀಸರು, ಕರ್ನಾಟಕದ ಅರೆಸ್ಟ್​ ಮಾಡಿರುವಂತಹ ಘಟನೆ ನಡೆದಿದೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಜಿಗಣಿ ಠಾಣೆ ಕಾನ್ಸ್‌ಸ್ಟೇಬಲ್​ ಆನಂದ್​ರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ASI ಅಪ್ಪಾಜಿಗೌಡ, ಸಿಬ್ಬಂದಿ ಆನಂದ್, ಚನ್ನಬಸಪ್ಪ ಮತ್ತು ದೀಪು ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಒಡಿಶಾಗೆ ತೆರಳಿದ್ದರು. ಆರೋಪಿಗಳನ್ನು ಪತ್ತೆಹಚ್ಚುವ ಭಾಗವಾಗಿ ಜಿಗಣಿ ಕಾನ್ಸ್‌ಟೇಬಲ್ ಆನಂದ್ ಫಾರೆಸ್ಟ್ ಒಳಗೆ ತೆರಳಿದ್ದಾರೆ. ಈ ವೇಳೆ ಅವರಿಗೆ ಫಾರೆಸ್ಟ್‌ ಒಳಗೆ ಗಾಂಜಾ ಸಿಕ್ಕಿದೆ. ಅವುಗಳನ್ನು ಸೀಸ್‌ ಹೊರಬರುತ್ತಿದ್ದಂತೆ ಆನಂದ್‌ ಅವರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ನಾವು ಪೊಲೀಸರು ಎಂದು ಹೇಳಿದರೂ ಒಡಿಶಾ ಪೊಲೀಸರು ಕೇಳಿಲ್ಲ. ಕಾನ್ಸ್‌ಟೇಬಲ್ ಆನಂದ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಬಂಧನ ಹಿನ್ನೆಲೆ ಜಿಗಣಿ ಇನ್ಸ್‌ಪೆಕ್ಟರ್‌ ಮಂಜುನಾಥ್ ಒಡಿಶಾಗೆ ತೆರಳಿದ್ದಾರೆ. ಆನಂದ್ ಬಿಡುಗಡೆಗೆ ಕಾನೂನು ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸುತ್ತಿದ್ದಾರೆ.

Shwetha M