ಕನ್ನಡಿಗರಿಗೆ RCBಗಿಂತ DC ಬೆಸ್ಟ್ – ಡೆಲ್ಲಿಯಲ್ಲಿ ಕನ್ನಡದ 3 ಪ್ಲೇಯರ್ಸ್

ಕನ್ನಡಿಗರಿಗೆ RCBಗಿಂತ DC ಬೆಸ್ಟ್ – ಡೆಲ್ಲಿಯಲ್ಲಿ ಕನ್ನಡದ 3 ಪ್ಲೇಯರ್ಸ್

17 ಸೀಸನ್ ಕಳೆದು 18ನೇ ಸೀಸನ್ ಶುರುವಾಗ್ತಿದ್ರೂ ಬೆಂಗಳೂರು ಟೀಂ ಐಪಿಎಲ್​ನಲ್ಲಿ ಒಂದೂ ಟ್ರೋಫಿ ಗೆದ್ದಿಲ್ಲ. ಆದ್ರೂ ಐಪಿಎಲ್​ನಲ್ಲಿ ಅತೀ ಹೆಚ್ಚು ಫ್ಯಾನ್​ಬೇಸ್ ಇರೋ ಟೀಂ ಯಾವ್ದು ಅಂದ್ರೆ ಅದು ಆರ್​ಸಿಬಿಯೇ. ಕಪ್ ಗೆಲ್ತಾರೋ ಬಿಡ್ತಾರೋ ಕನ್ನಡಿಗರಂತೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನ ತಲೆ ಮೇಲೆ ಹೊತ್ತು ಮೆರೆಸ್ತಾರೆ. ಹೀಗಿದ್ರೂ ಬೆಂಗಳೂರು ಟೀಮ್​ ಮೊದ್ಲಿಂದಲೂ ಕನ್ನಡಿಗರಿಗೆ ಅನ್ಯಾಯ ಮಾಡ್ತಾನೇ ಬಂದಿದೆ. ಕನ್ನಡಿಗರನ್ನ ತಂಡಕ್ಕೆ ಸೇರಿಸಿಕೊಳ್ಳಲ್ಲ ಸೇರಿಸ್ಕೊಂಡ್ರೂ ಬೆಂಚ್​ನಲ್ಲೇ ಕೂರಿಸ್ತಾರೆ. ಈ ಸಲ ಆರ್​ಸಿಬಿ ಫ್ರಾಂಚೈಸಿ ಕರ್ನಾಟಕದ ಇಬ್ಬರು ಆಟಗಾರರನ್ನ ಖರೀದಿ ಮಾಡಿದ್ರೂ ಕೂಡ ಅದೆಷ್ಟರ ಮಟ್ಟಿಗೆ ಮೈದಾನಕ್ಕೆ ಇಳಿಸ್ತಾರೋ ಗೊತ್ತಿಲ್ಲ. ಬಟ್ ಡೆಲ್ಲಿ ತಂಡದಲ್ಲೇ ಜಾಸ್ತಿ ಕನ್ನಡಿಗರಿದ್ದಾರೆ.

ಇದನ್ನೂ ಓದಿ : ಮೊದಲ ಪಂದ್ಯಕ್ಕೆ ಕೆಕೆಆರ್ & ಆರ್ ಸಿಬಿ ತಂಡಗಳು ರೆಡಿ – ಯಾವ ಟೀಂ ಸ್ಟ್ರಾಂಗ್?

ಕಳೆದ ನವೆಂಬರ್ ನಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕರ್ನಾಟಕದ ಒಟ್ಟು 24 ಆಟಗಾರರು ಭಾಗಿಯಾಗಿದ್ರು. ಈ ಪೈಕಿ ಬೆಂಗಳೂರು ಟೀಂ ಇಬ್ಬರನ್ನಷ್ಟೇ ಖರೀದಿ ಮಾಡಿತ್ತು. ಅದ್ರಲ್ಲೂ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದ ಕೆಎಲ್ ರಾಹುಲ್​ರನ್ನ ಕೈ ಬಿಟ್ಟಿತ್ತು. ಆದ್ರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಕೆಎಲ್ ರಾಹುಲ್ ಸೇರಿದಂತೆ ಮೂವರನ್ನು ಖರೀದಿಸಿತ್ತು. ಹೀಗೆ ಇಬ್ಬರನ್ನಷ್ಟೇ ತಂಡಕ್ಕೆ ಸೇರಿಸಿಕೊಂಡಿರೋ ಬೆಂಗಳೂರು ಫ್ರಾಂಚೈಸಿ ಅವ್ರನ್ನ ಪ್ಲೇಯಿಂಗ್ 11ಗೆ ಸೆಲೆಕ್ಟ್ ಮಾಡೋದೂ ಕೂಡ ಡೌಟ್ ಇದೆ. ಈ ಇಬ್ಬರೂ ಕೂಡ ಹಿಂದೆ ಇದೇ ಟೀಮ್​ನಲ್ಲೇ ಇದ್ದವ್ರು. ಹರಾಜಿನ ಮೂಲಕ ಆರ್​ಸಿಬಿ ಪರ ಆಡಿದ್ದ ದೇವದತ್ ಪಡಿಕ್ಕಲ್​ ಅವರನ್ನು ಮತ್ತೆ ತಂಡಕ್ಕೆ ಆಯ್ಕೆ ಮಾಡಿದ್ರು. ಹಾಗೇ ಕಳೆದ ಎರಡು ಸೀಸನ್​​ಗಳಿಂದ ಆರ್​ಸಿಬಿ ಬಳಗದಲ್ಲಿದ್ದ ಮನೋಜ್ ಭಾಂಡಗೆಯನ್ನು ಮತ್ತೆ ಖರೀದಿಸಿದ್ರು. ಅದರಂತೆ ಐಪಿಎಲ್​ 2025 ರಲ್ಲಿ ಆರ್​​ಸಿಬಿ ಪಡೆಯಲ್ಲಿ ಕನ್ನಡಿಗರಾಗಿ ದೇವದತ್ ಪಡಿಕ್ಕಲ್ ಹಾಗೂ ಮನೋಜ್ ಭಾಂಡಗೆ ಕಾಣಿಸಿಕೊಳ್ಳಲಿದ್ದಾರೆ. ಹೆಸ್ರಿಗಷ್ಟೇ ಟೀಮ್​ನಲ್ಲಿ ಇರುಸ್ಕೊಂಡು ಮ್ಯಾಚ್ ನೋಡೋಕೆ ಕೂರುಸ್ತಾರೆ ಅಷ್ಟೇ.

ಆರ್​ಸಿಬಿ ಕನ್ನಡಿಗರ ಹೋಂ ಟೀಮ್ ಆಗಿದ್ರೂ ಇಬ್ರನ್ನಷ್ಟೇ ಖರೀದಿಸಿದೆ. ಆದ್ರೆ ಆರ್​​ಸಿಬಿಗಿಂತ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಹೆಚ್ಚಿನ ಕನ್ನಡಿಗರಿಗೆ ಮಣೆ ಹಾಕಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನಲ್ಲಿ ಒಟ್ಟು 23 ಆಟಗಾರರಿದ್ದು, ಇವ್ರ ಪೂಕಿ ಮೂವರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕೆಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮನ್ವಂತ್ ಕುಮಾರ್ ಟೀಮ್​ನಲ್ಲಿದ್ದಾರೆ. ಇವ್ರ ಪೈಕಿ ರಾಹುಲ್ ಮತ್ತು ಕರುಣ್ ನಾಯರ್ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳೋದಂತೂ ಗ್ಯಾರಂಟಿ ಇದೆ. ಆದ್ರೆ ಆರ್​ಸಿಬಿಯಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆಯೇ ಮಾಡ್ತಿದ್ದಾರೆ. ಸದ್ಯ 2025ರ ಐಪಿಎಲ್​ನಲ್ಲಿ ಒಟ್ಟಾರೆ 13 ಕನ್ನಡಿಗರು ವಿವಿಧ ತಂಡಗಳಲ್ಲಿದ್ದಾರೆ

ಐಪಿಎಲ್ ಅಖಾಡದಲ್ಲಿ 13 ಕನ್ನಡಿಗರು!

ಆಟಗಾರ                                                        ತಂಡ                ಸಂಭಾವನೆ (INR)

ಕೆಎಲ್ ರಾಹುಲ್                                         ಡೆಲ್ಲಿ                   14 ಕೋಟಿ

ಪ್ರಸಿದ್ಧ್ ಕೃಷ್ಣ                                           ಗುಜರಾತ್              9.50 ಕೋಟಿ

ಅಭಿನವ್ ಮನೋಹರ್                      ಹೈದರಾಬಾದ್            3.2 ಕೋಟಿ

ದೇವದತ್ ಪಡಿಕ್ಕಲ್                               ಬೆಂಗಳೂರು            2 ಕೋಟಿ

ವಿಜಯ್ ಕುಮಾರ್ ವೈಶಾಕ್                   ಪಂಜಾಬ್             1.80ಕೋಟಿ

ಮನೀಶ್ ಪಾಂಡೆ                                       ಕೊಲ್ಕತ್ತಾ                   75 ಲಕ್ಷ

ಕರುಣ್ ನಾಯರ್                                     ಡೆಲ್ಲಿ                        50 ಲಕ್ಷ

ಕೃಷ್ಣನ್ ಶ್ರೀಜಿತ್                                        ಮುಂಬೈ                   30 ಲಕ್ಷ

ಶ್ರೇಯಸ್ ಗೋಪಾಲ್                                 ಚೆನ್ನೈ                    30 ಲಕ್ಷ

ಮನೋಜ್ ಭಾಂಡಗೆ                                 ಬೆಂಗಳೂರು             30ಲಕ್ಷ

ಲುವ್ನಿತ್ ಸಿಸೊಡಿಯಾ                               ಕೊಲ್ಕತ್ತಾ                30 ಲಕ್ಷ

ಪ್ರವೀಣ್ ದುಬೆ                                           ಪಂಜಾಬ್                30 ಲಕ್ಷ

ಮನ್ವಂತ್ ಕುಮಾರ್                                    ಡೆಲ್ಲಿ                     30 ಲಕ್ಷ

Shantha Kumari

Leave a Reply

Your email address will not be published. Required fields are marked *