ಕರ್ನಾಟಕವನ್ನೇ ಸೋಲಿಸಿದ ಕನ್ನಡಿಗ – ಪಡಿಕ್ಕಲ್ ಫೇಲ್.. ಎಡವಿದ್ದೆಲ್ಲಿ ಮಯಾಂಕ್?
ವಿಜಯ್ ಹಜಾರೆ ಚಾಂಪಿಯನ್ಸ್ ಯಾರು?

ಕರ್ನಾಟಕವನ್ನೇ ಸೋಲಿಸಿದ ಕನ್ನಡಿಗ – ಪಡಿಕ್ಕಲ್ ಫೇಲ್.. ಎಡವಿದ್ದೆಲ್ಲಿ ಮಯಾಂಕ್?ವಿಜಯ್ ಹಜಾರೆ ಚಾಂಪಿಯನ್ಸ್ ಯಾರು?

ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಸಕ್ಸಸ್​ಫುಲ್ ಟೀಂ ಆಗಿರುವ ಕರ್ನಾಟಕ ಈ ಬಾರಿಯೂ ಟ್ರೋಫಿ ಗೆಲ್ಲುವಂಥ ಮೋಸ್ಟ್ ಫೇವರೆಟ್ ಟೀಂ ಆಗಿತ್ತು. ಌಂಡ್ ಪರ್ಫಾಮೆನ್ಸ್ ಕೂಡ ನೆಕ್ಸ್​ಟ್ ಲೆವೆಲ್​ನಲ್ಲಿತ್ತು. ಟಾಪ್ ಆಫ್ ಟೇಬಲ್​ನಲ್ಲೇ ಸೆಮೀಸ್​ಗೂ ಕಾಲಿಟ್ಟಿದ್ರು. ಬಟ್ ಬ್ಯಾಡ್​ಲಕ್ ಸೆಮಿಫೈನಲ್​ನಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದ್ದಾರೆ.

ಇದನ್ನೂ ಓದಿ : ಟೀಮ್ ಇಂಡಿಯಾಕ್ಕೆ ಬಲ ಈ ಸ್ವಿಂಗ್ ಸ್ಟಾರ್ – U19 ವಿಶ್ವಕಪ್‌ನಲ್ಲಿ ಭಾರತದ ಬ್ರಹ್ಮಾಸ್ತ್ರ ಹೆನಿನ್ ಪಟೇಲ್

2024-25ರ ಟೂರ್ನಿಯ ಚಾಂಪಿಯನ್ಸ್ ಆಗಿದ್ದ ಕರ್ನಾಟಕ ಈ ಬಾರಿಯೂ ಚಾಂಪಿಯನ್​ ಆಗುತ್ತೆ ಅನ್ನೋದೇ ಎಲ್ಲರ ನಿರೀಕ್ಷೆಯಾಗಿತ್ತು. ಆದ್ರೆ ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಕರ್ನಾಟಕವನ್ನ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಪಂದ್ಯಕ್ಕೂ ಮುನ್ನ ಟಾಸ್ ಗೆದ್ದಿದ್ದು ಕರ್ನಾಟಕವೇ ಆದ್ರೂ ಕೂಡ ಫಸ್ಟ್ ಬ್ಯಾಟಿಂಗ್​ನ ಚೂಸ್ ಮಾಡಿಕೊಳ್ತಾರೆ. ಆದ್ರೆ ಬ್ಯಾಟಿಂಗ್​ನಲ್ಲಿ ಅಂದುಕೊಂಡಂತ ಪರ್ಫಾಮೆನ್ಸ್ ಬರ್ಲಿಲ್ಲ. ಲೀಗ್​ ಹಂತಗಳಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಗೆಲುವು ಸಾಧಿಸಿದ್ದ ಕರ್ನಾಟಕ ಫೈನಲ್​ಗೆ ಇನ್ನೊಂದೇ ಹೆಜ್ಜೆ ಬಾಕಿ ಇರುವಾಗ ಎಡವಿದೆ.

ಬ್ಯಾಟಿಂಗ್ ನಲ್ಲೇ ಲೋ ಸ್ಕೋರ್.. ಬೌಲಿಂಗ್ ಕೂಡ ವೀಕ್!

ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕದ ಪರ ನಾಯಕ ಮಯಾಂಕ್ ಅಗರ್ವಾಲ್ ಮತ್ತು ದೇವದತ್ ಪಡಿಕ್ಕಲ್ ಇನ್ನಿಂಗ್ಸ್ ಆರಂಭಿಸಿದ್ರು. ಬ್ಯಾಡ್​ಲಕ್ ಅಂದ್ರೆ ಆರಂಭದ ಓವರ್​ಗಳನ್ನೇ ರನ್ಸ್ ಬರ್ಲಿಲ್ಲ.  4ನೇ ಓವರ್​ನಲ್ಲೇ 9 ರನ್​ಗಳಿಸಿ ಮಯಾಂಕ್ ಔಟಾದ್ರೆ 19 ಬಾಲ್​ಗಳಲ್ಲಿ 1 ಫೋರ್ ಹೊಡೆದು ಪಡಿಕ್ಕಲ್ ವಿಕೆಟ್ ಒಪ್ಪಿಸಿದ್ರು. ನಾಯಕ ಮಯಾಂಕ್‌ ಅಗರ್ವಾಲ್‌ 9 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ದೇವದತ್‌ ಪಡಿಕ್ಕಲ್‌ ಕೇವಲ 4 ರನ್‌ಗೆ ಔಟ್‌ ಆದರು. ಆ ಮೂಲಕ ಕರ್ನಾಟಕ ತಂಡ ಕೇವಲ 20 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿತ್ತು. ಓಪನರ್​ಗಳು ಸಿಂಗಲ್ ಡಿಜಿಟ್​ಗೆ ಔಟ್ ಆದ್ಮೇಲೆ ಕರುಣ್ ನಾಯರ್ ಕ್ರೀಸ್ ಕಚ್ಚಿ ಆಡಿದ್ರು. 76 ರನ್ಸ್ ಹೊಡೆದು ಔಟ್ ಆದ್ರು. ಕೃಷ್ಣ ಶ್ರೀಜಿತ್ ಅರ್ಧಶತಕ ಬಾರಿಸಿದ್ರೆ ಶ್ರೇಯಸ್ ಗೋಪಾಲ್ 36 ರನ್ ಗಳಿಸಿ ಸಪೋರ್ಟ್ ನೀಡಿದ್ರು. ಅಂತಿಮವಾಗಿ ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ 280 ರನ್​ಗಳಿಗೆ ಆಲೌಟ್ ಆದ್ರು. ಸೋ ಅಲ್ಲಿಗೆ 281 ರನ್​ಗಳ ಟಾರ್ಗೆಟ್ ನೀಡಿದ್ರು.

ಟಾರ್ಗೆಟ್ ಬೆನ್ನತ್ತಿದ ವಿದರ್ಭ ಪರ ಕನ್ನಡಿಗನ ಅದ್ಭುತ ಪ್ರದರ್ಶನ!

ಕರ್ನಾಟಕ ನೀಡಿದ್ದಂತ 281 ರನ್​ಗಳ ಬೆನ್ನತ್ತಿದ ವಿದರ್ಭ ಪಡೆ ಪರ ಬ್ಯಾಟಿಂಗ್ ಪವರ್ ಚೆನ್ನಾಗಿತ್ತು.  ಅಮನ್ ಮೊಖಾಡೆ ಶತಕ ಸಿಡಿಸಿ ಮಿಂಚಿದ್ರು. 122 ಬಾಲ್​ಗಳಲ್ಲಿ 138 ರನ್ಸ್ ಕಲೆ ಹಾಕಿದ್ರು. ಹಾಗೇ  ರವಿಕುಮಾರ್ ಸಮರ್ಥ್‌ ಅರ್ಧಶತಕ ಬಾರಿಸಿದ್ರು. ಮೂರನೇ ವಿಕೆಟ್‌ಗೆ ಅಮನ್‌ ಹಾಗೂ ಆರ್‌ ಸಮರ್ಥ 147 ರನ್‌ಗಳ ಜೊತೆಯಾಟವನ್ನುಆಡಿದರು. ಧ್ರುವ್‌ ಶೋರೆ 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ಮೂಲಕ  46.2 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 284 ರನ್‌ ಬಾರಿಸಿ ಗೆಲುವು ಸಾಧಿಸಿತು. ಅಷ್ಟಕ್ಕೂ ವಿದರ್ಭ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ ಆರ್. ಸಮರ್ಥ್ ಕರ್ನಾಟಕದವರೇ ಆಗಿದ್ದಾರೆ. ಹಿಂದಿನ ಆವೃತ್ತಿಗಳಲ್ಲಿ ಕರ್ನಾಟಕದ ಪರ ಆಡಿ ಸೈ ಎನಿಸಿಕೊಂಡಿದ್ದ ರವಿಕುಮಾರ್‌ ಸಮರ್ಥ್ ಈಗ ವಿದರ್ಭ ತಂಡದ ಪರ ಆಡುತ್ತಿದ್ದಾರೆ. ತವರಿನ ತಂಡದ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿ 7 ಬೌಂಡರಿ ನೆರವಿನಿಂದ ಅಜೇಯ 76 ರನ್‌ ಸಿಡಿಸಿದರು. ಪಂದ್ಯದ ಗೆಲುವಿನಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ಮಾಡಿದ್ರು.

ದೇವದತ್ ಪಡಿಕ್ಕಲ್ ಹಿಂದಿಕ್ಕಿದ ಅಮನ್ ಮೊಖಡೆ!

ಌಕ್ಚುಲಿ ಈ ಸೀಸನ್​ನಲ್ಲಿ ಬ್ಯಾಟಿಂಗ್​ನಿಂದಲೇ ಸದ್ದು ಮಾಡಿದ್ದ ದೇವದತ್ ಪಡಿಕ್ಕಲ್ ಶತಕಗಳ ಮೂಲಕವೇ ಬಿಸಿಸಿಐ ಬಾಗಿಲು ಬಡಿದಿದ್ರು. ಹೈಯೆಸ್ಟ್ ಸ್ಕೋರರ್ ಆಗಿ ಸದ್ದು ಮಾಡಿದ್ರು. ಆದ್ರೆ ಸೆಮಿಫೈನಲ್ ಪಂದ್ಯದಲ್ಲಿ ಪಡಿಕ್ಕಲ್ ರೆಕಾರ್ಡ್​ನೇ ಬ್ರೇಕ್ ಮಾಡಿದ ವಿದರ್ಭ ತಂಡದ ಆಟಗಾರ ಅಮನ್ ಮೊಖಡೆ ಹೊಸ ದಾಖಲೆ ಬರೆದ್ರು. ದೇವದತ್ ಪಡಿಕ್ಕಲ್ 9 ಇನ್ನಿಂಗ್ಸ್ ಗಳಿಂದ 725 ರನ್ ಗಳಿಸಿದರೆ ಅಮನ್ ಈ ಆವೃತ್ತಿಯಲ್ಲಿ ಒಟ್ಟಾರೆಯಾಗಿ 781 ರನ್ ಗಳಿಸಿ ಪಡಿಕ್ಕಲ್ ರನ್ನೇ ಹಿಂದಿಕ್ಕಿದ್ರು. ಹಾಗೇ ಟೂರ್ನಿಯಲ್ಲಿ ಐದನೇ ಶತಕ ಬಾರಿಸಿದರು. ಇನ್ನು ಈ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ 4 ಶತಕ ಬಾರಿಸಿದ್ದಾರೆ.

ಸದ್ಯ ಸೆಮಿಫೈನಲ್​ನಲ್ಲಿ ಕರ್ನಾಟಕವನ್ನ ಸೋಲಿಸೋ ಮೂಲಕ ವಿದರ್ಭ ತಂಡ ಕಳೆದ ವರ್ಷದ ಸೇಡು ತೀರಿಸಿಕೊಂಡಿದೆ. ಅಂದ್ರೆ ಕಳೆದ ಆವೃತ್ತಿ ಕರ್ನಾಟಕ ಮತ್ತು ವಿದರ್ಭ ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಿದ್ವು. ಈ ಪಂದ್ಯದಲ್ಲಿ ಕರ್ನಾಟಕ ಗೆದ್ದು ಚಾಂಪಿಯನ್ ಆಗಿತ್ತು. ಈಗ ಕರ್ನಾಟಕವನ್ನ ಸೋಲಿಸಿ ವಿದರ್ಭ ಸೇಡು ತೀರಿಸಿಕೊಂಡಿದೆ. ಟಾಪ್ ಆರ್ಡರ್ ಬ್ಯಾಟರ್​ಗಳ ಫೇಲ್ಯೂರ್, ಬೌಲರ್ ಗಳನ್ನ ಕಳಪೆ ಪ್ರದರ್ಶನಕ್ಕೆ  ಮಯಾಂಕ್ ನಾಯಕತ್ವದ ಕರ್ನಾಟಕ ಟೂರ್ನಿಯಿಂದ ಹೊರ ಬಿದ್ದಿದೆ. ಪ್ರತಿಷ್ಠಿತ ರಾಷ್ಟ್ರೀಯ ಟೂರ್ನಿಯಲ್ಲಿ ಟ್ರೋಫಿ ಗೆಲ್ಲೋ ಚಾನ್ಸ್ ಮಿಸ್ ಮಾಡ್ಕೊಂಡಿದೆ.

Shantha Kumari