ನಂದಿನಿ ಗ್ರಾಹಕರಿಗೆ ಶಾಕ್ ಕೊಟ್ಟ ಕೆಎಂಎಫ್! ನಂದಿನಿ ತುಪ್ಪದ ಬೆಲೆ 90 ರೂ. ಏರಿಕೆ!

ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನತೆಗೆ ಕೆಎಂಎಫ್ ಶಾಕಿಂಗ್ ಸುದ್ದಿಯೊಂದನ್ನ ನೀಡಿದೆ. ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ, ಬೆಲೆ ಏರಿಕೆಯಿಂದ ಬೇಸತ್ತ ಜನರಿಗೆ ನಂದಿನಿ ತುಪ್ಪ ಬೆಲೆ ಏರಿಕೆ ಬಿಸಿ ತಟ್ಟಿದೆ.
ಇದನ್ನೂ ಓದಿ: ದರ್ಶನ್ ಡೆವಿಲ್ ಚಿತ್ರದಲ್ಲಿ ಗಿಲ್ಲಿನಟ! ಡೆವಿಲ್ನಲ್ಲಿ ಕಾಮಿಡಿ ಕಿಂಗ್‌ಗೆ ಖಡಕ್ ರೋಲ್!
ಕೇಂದ್ರ ಸರ್ಕಾರವು ಸಾರ್ವಜನಿಕರ ದೈನಂದಿನ ಬಳಕೆಯ ಆಹಾರ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಶೇ 12ರಿಂದ 5ಕ್ಕೆ ಇಳಿಸಿದ ಬೆನ್ನ್ಲಲೇ ಕೆಎಂಎಪ್ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ದರವನ್ನು ಪರಿಷ್ಕರಿಸಿತ್ತು. ಇದ್ರಿಂದಾಗಿ ಗ್ರಾಹಕರಿಗೆ ಕೊಂಚ ರಿಲೀಫ್ ಸಿಕ್ಕಿತ್ತು. ಆದ್ರೀಗ ಜನತೆಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಶಾಕ್ ಕೊಟ್ಟಿದ್ದು, ನಂದಿನ ತುಪ್ಪದ ಏಕಾಏಕಿ 90 ರೂ. ಏರಿಕೆ ಮಾಡಿದೆ.
ನಂದಿನಿ ತುಪ್ಪದ ದರ ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ. ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ. ತುಪ್ಪ ಹೊರತುಪಡಿಸಿ ಇತರೇ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೆಎಂಎಫ್ ಸ್ಪಷ್ಟನೆ ನೀಡಿದೆ.

ನೋಡಿರಿ

