ನನ್ನ ಮಾತಿನಿಂದ ಹೀಗಾಗುತ್ತೆ ಎಂದು ಗೊತ್ತಿರ್ಲಿಲ್ಲ! – ಸಂಪುಟದಿಂದ ವಜಾಗೊಂಡ ಬೆನ್ನಲ್ಲೇ ರಾಜಣ್ಣ ಪಶ್ಚಾತ್ತಾಪದ ಮಾತು!

ಸಹಕಾರ ಸಚಿವ ಕೆಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾ ಮಾಡಲಾಗಿದ್ದು, ಈಗ ಕರ್ನಾಟಕ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇದೀಗ ರಾಜಣ್ಣ ಸಚಿವ ಸಂಪುಟದಿಂದ ವಜಾ ಆಗಿರುವ ಬಗ್ಗೆ ಬೇಸರಗೊಂಡಿದ್ದಾರೆ. ಸಚಿವ ಪರಮೇಶ್ವರ್ ಜೊತೆ ರಾಜಣ್ಣ ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹಳದಿ ಮಾರ್ಗಕ್ಕೂ ಅಪರ್ಣಾರದ್ದೇ ಧ್ವನಿ! – ಸಾವಿಗೂ ಮುನ್ನ ವಾಯ್ಸ್ ರೆಕಾರ್ಡಿಂಗ್!
ಪರಮೇಶ್ವರ್ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ರಾಜಣ್ಣ ಮಾತುಕತೆ ನಡೆಸಿದ್ದಾರೆ. ನೀವು ಈ ರೀತಿ ಮಾತನಾಡಬಾರದಿತ್ತು ಎಂದು ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ರಾಜಣ್ಣ, ನನ್ನ ಮಾತು ಇಷ್ಟೊಂದು ತೀವ್ರ ಸ್ವರೂಪಕ್ಕೆ ಹೋಗುತ್ತೆ ಅಂತ ಗೊತ್ತಿರಲಿಲ್ಲ. ನನ್ನ ಮಾತಿನಿಂದ ಹೀಗಾಗುತ್ತೆ ಎಂದೂ ತಿಳಿಯಲಿಲ್ಲ ಎಂದು ಮಾತನಾಡಿದ್ದಾರೆ ಎನ್ನಲಾಗಿದೆ.
ತಮ್ಮ ಸಡಿಲ ಹೇಳಿಕೆಗಳಿಂದಲೇ ಪಕ್ಷದೊಳಗಡೆ ರಾಜಣ್ಣ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಕ್ಷಿಪ್ರ ರಾಜಕೀಯ ಬೆಳವಣಿಗೆಯೊಂದರಲ್ಲಿ ಹೈಕಮಾಂಡ್ ಸೂಚನೆ ಮೇರೆಗೆ ರಾಜಣ್ಣರನ್ನು ಸಿಎಂ ಸಿದ್ದರಾಮಯ್ಯ ಅವರು ಸಂಪುಟದಿಂದ ವಜಾ ಮಾಡಿದ್ದಾರೆ. ವಜಾಗೊಳಿಸುವ ಮುನ್ನ ಹೈಕಮಾಂಡ್ ಮನವೊಲಿಕೆಗೆ ಸಿದ್ದರಾಮಯ್ಯ ಮುಂದಾಗಿದ್ದರು. ಮೊದಲು ವೇಣುಗೋಪಾಲ್ ಮೂಲಕ ಸಿಎಂಗೆ ಕಾಲ್ ಬಂದಿತ್ತು. ರಾಜಣ್ಣ ರಾಜೀನಾಮೆ ಪಡೆಯಿರಿ ಎಂದು ಸಂದೇಶ ರವಾನೆಯಾಯಿತು. ಆದರೆ, ಆಗ ಒಪ್ಪದೇ ಸಿಎಂ ಸಮಯ ಕೇಳಿದ್ದರು. ಅಧಿವೇಶನ ಮುಗಿದ ಬಳಿಕ ನೋಡೋಣ ಎಂದಿದ್ದರು. ಹೈಕಮಾಂಡ್ ಬಳಿ ಸಿಎಂ 10 ದಿನ ಟೈಂ ಕೇಳಿದ್ದರು. ಆಗ ರಾಹುಲ್ ಬಳಿ ಮಾತನಾಡುವಂತೆ ವೇಣುಗೋಪಾಲ್ ಸಲಹೆ ನೀಡಿದ್ದರು ಎನ್ನಲಾಗಿದೆ. ಆದರೆ, ರಾಜಣ್ಣರನ್ನು ಸಂಪುಟದಿಂದ ವಜಾ ಮಾಡುವಂತೆ ರಾಹುಲ್ ಗಾಂಧಿ ಅವರು ಸಿಎಂಗೆ ಸೂಚನೆ ನೀಡಿದ್ದಾರೆ. ಅದಾದ ಬಳಿಕ ಆಪ್ತ ರಾಜಣ್ಣ ವಜಾಗೆ ರಾಜ್ಯಪಾಲರಿಗೆ ಸಿಎಂ ಶಿಫಾರಸು ಮಾಡಿದರು.

ನೋಡಿರಿ

