ಇನ್ಮುಂದೆ ಮಹಿಳಾ ನೌಕರರಿಗೆ ವೇತನ ಸಹಿತ ವರ್ಷಕ್ಕೆ 12 ರಜೆ! – ರಾಜ್ಯ ಸರ್ಕಾರದಿಂದ ಬಂತು ಅಧಿಕೃತ ಆದೇಶ!

ಇನ್ಮುಂದೆ ಮಹಿಳಾ ನೌಕರರಿಗೆ ವೇತನ ಸಹಿತ ವರ್ಷಕ್ಕೆ 12 ರಜೆ! – ರಾಜ್ಯ ಸರ್ಕಾರದಿಂದ ಬಂತು ಅಧಿಕೃತ ಆದೇಶ!

ಗ್ಯಾರಂಟಿ ಮೂಲಕ ಹೆಣ್ಣುಮಕ್ಕಳ ಮನಸು ಗೆದ್ದಿದ್ದ ಕಾಂಗ್ರೆಸ್ ಸರ್ಕಾರ ಇದೀಗ  ಮಹಿಳಾ ನೌಕರರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಇನ್ಮುಂದೆ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನ ಸಹಿತ ರಜೆ ಸೌಲಭ್ಯವನ್ನು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.

ಇದನ್ನೂ ಓದಿ: ಹಿಂದೆ ಕಾಂಗ್ರೆಸ್‌ ಮುಗಿಸಿದ್ವಿ..​​ ಮತ್ತೆ ವೈಟ್‌ವಾಶ್ ಆಗಬಹುದು! – ಕೆಎನ್ ರಾಜಣ್ಣ ಶಾಕಿಂಗ್‌ ಹೇಳಿಕೆ!

ಇತ್ತೀಚೆಗಷ್ಟೇ ಋತುಚಕ್ರ ರಜೆ ನೀಡಲು ಕ್ಯಾಬಿನೆಟ್ ನಿರ್ಣಯಿಸಿತ್ತು. ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, MNC, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಂಬಳ ಸಹಿತ ಋತು ಚಕ್ರ ರಜೆ ನೀಡುವುದಾಗಿ ತೀರ್ಮಾನ ಮಾಡಲಾಗಿತ್ತು. ಇದೀಗ ಕ್ಯಾಬಿನೆಟ್ ನಿರ್ಣಯದಂತೆ ಕಾರ್ಮಿಕ ಇಲಾಖೆ ಅಧಿಕೃತ ಅದೇಶ ಹೊರಡಿಸಿದೆ. ವರ್ಷಕ್ಕೆ 12 ದಿನ ರಜೆ ನೀಡುವುದಾಗಿದ್ದು, ಯಾವ ದಿನ ರಜೆ ಪಡೆಬೇಕು ಅಂತ ಹೆಣ್ಣುಮಕ್ಕಳು ತೀರ್ಮಾನ ಮಾಡಲಿದ್ದಾರೆ. ಅದ್ರೆ 2 ಷರತ್ತುಗಳನ್ನ ವಿಧಿಸಿ ರಜೆ ನೀಡಲು ಸಂಸ್ಥೆಗಳಿಗೆ ಸೂಚಿಸಿದೆ.

ಷರತ್ತುಗಳೇನು?

  • ಪ್ರತಿ ತಿಂಗಳು ಒಂದು ದಿನದ ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರು ಯಾವುದೇ ವೈದ್ಯಕೀಯ ಪ್ರಮಾಣ ಪತ್ರವನ್ನು ಒದಗಿಸುವ ಅವಶ್ಯಕತೆ ಇರುವುದಿಲ್ಲ.
  • ಮಹಿಳಾ ನೌಕರರು ಆಯಾ ತಿಂಗಳ ಋತುಚಕ್ರ ರಜೆಯನ್ನು ಆಯಾ ತಿಂಗಳಿನಲ್ಲಿಯೇ ಬಳಸಿಕೊಳ್ಳುವುದು. ಹಿಂದಿನ ತಿಂಗಳ ಋತುಚಕ್ರ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು ಅವಕಾಶವಿರುವುದಿಲ್ಲ.
  • 18 ವರ್ಷದಿಂದ 52 ವರ್ಷದ ವಯೋಮಿತಿಯ ಎಲ್ಲಾ ಮಹಿಳಾ ನೌಕರರಿಗೆ ಕಡ್ಡಾಯ ರಜೆ ನೀಡಬೇಕು.

Shwetha M