ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆರಂಭಿಸಿದ ವೈದ್ಯರು!

ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆರಂಭಿಸಿದ ವೈದ್ಯರು!

ಔಷಧ ಚೀಟಿಯ ಮೇಲೆ ಬರೆಯುವ ವೈದ್ಯರ ಅಕ್ಷರ ಮೆಡಿಕಲ್​ ಶಾಪ್​ಸಿಬ್ಬಂದಿಗೆ ಮಾತ್ರ ಅರ್ಥವಾಗುತ್ತೆ. ಅದು ಬಿತ್ತು ಜನಸಾಮಾನ್ಯ ಚೀಟಿಯಲ್ಲಿ ಏನು ಬರೆದಿದೆ ಎಂಬೋದು ಅರ್ಥ ಆಗಲ್ಲ.. ಆದ್ರೆ ಇಲ್ಲೊಬ್ಬ ಡಾಕ್ಟರ್‌ ಕನ್ನಡದಲ್ಲೇ ಪ್ರಿಸ್ಕ್ರಿಪ್ಷನ್‌ ಬರೆಯುತ್ತಿದ್ದಾರೆ. ಇದರ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: 8 ಜನರೊಂದಿಗೆ ಮಹಿಳೆ ವಿವಾಹವೆಂದು ಪತಿ ಆರೋಪ – ಗಂಡನ ಮೇಲೆಯೇ ಕೇಸ್ ಹಾಕಲು ಮುಂದಾದ ಪತ್ನಿ!

ಹೌದು, ಇಲ್ಲೊಬ್ಬರು ಡಾಕ್ಟರ್‌ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿಯೇ ಔಷಧ ಚೀಟಿಯನ್ನು ಬರೆಯಲು ಆರಂಭಿಸಿದ್ದಾರೆ. ಈ ಮೂಲಕ ಕನ್ನಡಾಭಿಮಾನವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಕುರಿತ ಒಂದಷ್ಟು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ವೈದ್ಯರ ಕನ್ನಡ ಪ್ರೇಮ ನೆಟ್ಟಿಗರ ಮನ ಗೆದ್ದಿದೆ.

ಚಿಕ್ಕನಾಯಕನಹಳ್ಳಿಯ ಮಹಿಮಾ ದಂತಚಿಕಿತ್ಸಾಲಯದ ವೈದ್ಯರಾದ ಡಾ. ಸಿ.ಜಿ ಮಲ್ಲಿಕಾರ್ಜುನ್‌ ಮತ್ತು ದೇವರಚಿಕ್ಕನಹಳ್ಳಿಯ ಕೆ.ವಿ ಡೆಂಟಲ್‌ ಕ್ಲಿನಿಕ್‌ನ ಡಾ. ಹರಿಪ್ರಸಾದ್‌ ಸಿ.ಎಸ್‌ ಕನ್ನಡದಲ್ಲಿಯೇ ರೋಗಿಗಳಿಗೆ ಔಷಧ ಚೀಟಿಯನ್ನು ಕೊಡುತ್ತಿದ್ದು, ಈ ಕುರಿತ ಒಂದಷ್ಟು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಡಾಕ್ಟರ್‌ ಬರೆದ ಪ್ರಿಸ್ಕ್ರಿಪ್ಷನ್‌ ಅನ್ನು ಉಮೇಶ್‌ ಶಿವರಾಜು (umesh_anush) ಎಂಬವರು ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. “ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಔಷಧ ಚೀಟಿಗಳನ್ನು ಬರೆಯಲು ಆರಂಭಿಸಿದ ವೈದ್ಯರು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್‌ ಆಗಿರುವ ಫೋಟೋದಲ್ಲಿ ವೈದ್ಯರು ರೋಗಿಗಳಿಗೆ ಕನ್ನಡ ಭಾಷೆಯಲ್ಲಿಯೇ ಔಷಧ ಚೀಟಿಯನ್ನು ಬರೆದು ಕೊಟ್ಟಿರುವ ದೃಶ್ಯವನ್ನು ಕಾಣಬಹುದು.

Shwetha M