ಕರ್ನಾಟಕ ಮಾರುಕಟ್ಟೆಗೆ ‘ಅಮುಲ್’ ಎಂಟ್ರಿ! – ಅಮೂಲ್ ವಿರುದ್ಧ ಸಿಡಿದೆದ್ದ ಕನ್ನಡಿಗರು

ಕರ್ನಾಟಕ ಮಾರುಕಟ್ಟೆಗೆ ‘ಅಮುಲ್’ ಎಂಟ್ರಿ! – ಅಮೂಲ್ ವಿರುದ್ಧ ಸಿಡಿದೆದ್ದ ಕನ್ನಡಿಗರು

ದೇಶದ ಯಾವುದೇ ರಾಜ್ಯದ ಸಂಸ್ಥೆ ಬೇರೆ ಇನ್ಯಾವುದೋ ರಾಜ್ಯದಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳುತ್ತಿರುವುದು ಹೊಸದೇನಲ್ಲ. ಹಾಲಿನ ಮಾರುಕಟ್ಟೆ ವಿಚಾರಕ್ಕೆ ಬಂದರೆ, ಕರ್ನಾಟಕದ ಕೆಎಂಎಫ್ ಉತ್ಪನ್ನಗಳು ದೂರದ ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಗೋವಾ ಸೇರಿದಂತೆ ಬೇರೆ ರಾಜ್ಯಗಳು ಮಾತ್ರವಲ್ಲ, ಹೊರ ದೇಶಗಳಿಗೂ ಮಾರುಕಟ್ಟೆ ವಿಸ್ತರಣೆ ಆಗಿದೆ. ಆದ್ರೆ ಇದೀಗ ಕರ್ನಾಟಕಕ್ಕೆ ಗುಜರಾತ್‌ನ ದೈತ್ಯ ಸಂಸ್ಥೆ ಕಾಲಿಟ್ಟ ವೇಳೆಯಲ್ಲೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಅನ್ನೋದು ಈ ಆರೋಪ ಕೇಳಿ ಬರುತ್ತಿದೆ. ಅಷ್ಟೇ ಅಲ್ಲದೇ ಕೆಎಂಎಫ್ ಹಾಲಿನ ಬೂತ್‌ಗಳಲ್ಲಿ ನಂದಿನಿ ಉತ್ಪನ್ನಗಳು ಸಾಕಷ್ಟು ಸಿಗುತ್ತಿಲ್ಲ ಅನ್ನೋ ದೂರುಗಳಿವೆ.

ಇದನ್ನೂ ಓದಿ: ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ 3ನೇ ಸಂಚು ನಡೆದಿದೆ: ಎಚ್ಡಿಕೆ ಆರೋಪ

ರಾಜ್ಯ ಹಲವು ನಂದಿನಿ ಬೂತ್ ಗಳಲ್ಲಿ ಹಾಲು, ಮೊಸರು, ತುಪ್ಪದ ಸ್ಟಾಕ್ ಇಲ್ಲ ಅಂತಾ ಗ್ರಾಹಕರು ಆಗಾಗ ದೂರುತ್ತಿದ್ದಾರೆ. ಅಷ್ಟೇ ಅಲ್ಲದೇ ನಮಗೆ ನಂದಿನಿ ಸಾಕು, ಅಮುಲ್ ಬೇಡ, ಸೇವ್ ನಂದಿನಿ ಕೆಎಂಎಫ್ ಅನ್ನೋ ಅಭಿಯಾನವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಆರಂಭಿಸಿದ್ದಾರೆ.

ಈಗ ನಂದಿನಿ ಜಾಗವನ್ನು ಅಮುಲ್‌ ಆಕ್ರಮಿಸಲು ಬರುತ್ತಿದೆ. ನಾವು ನಂದಿನಿ ಹಾಲು ಮೊಸರನ್ನು ಬಿಟ್ಟು ಬೇರೆ ಬ್ರ್ಯಾಂಡ್ ಬಳಸೋದಿಲ್ಲ. ನಮ್ಮ ನಂದಿನಿಯನ್ನು ಈಗ ಕನ್ನಡಿಗರಾದ ನಾವೇ ಕಾಪಾಡಿಕೊಳ್ಳಬೇಕು. ನಂದಿನಿಯನ್ನಷ್ಟೇ ಬಳಸೋಣ ಎಂದು ಸೋಷಿಯಲ್ ಮೀಡಿಯಾದಲ್ಲಿ ಜನರು ಕರೆ ನೀಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ನಂದಿನಿ ಮೊಸರಿನ ಪ್ಯಾಕೇಟ್‌ ಮೇಲೆ ದಹಿ ಎಂದು ಬರೆಯುವಂತೆ ಆದೇಶ ಮಾಡಲಾಗಿತ್ತು. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಆದೇಶವನ್ನ ಹಿಂದೆ ಪಡೆದಿತ್ತು. ಇದೀಗ ಈ ವಿವಾದ ತಣ್ಣಗಾಗುತ್ತಿರುವ ಹೊತ್ತಲ್ಲೇ ಬಹುತೇಕ ಕಡೆಗಳಲ್ಲಿ ಅಮೂಲ್ ವ್ಯಾಪಿಸಲು ಬರುತ್ತಿದೆ ಎಂಬ ಜಾಹೀರಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ರಾರಾಜಿಸುತ್ತಿವೆ.

suddiyaana