ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ಕಲಿಗಳ ದಾಖಲೆ – 1035 ಬೃಹತ್ ಸ್ಕೋರ್

ರಣಜಿ ಟ್ರೋಫಿ ಸೆಮಿಫೈನಲ್ ನಲ್ಲಿ ಕರ್ನಾಟಕ ಕಲಿಗಳ ದಾಖಲೆ – 1035 ಬೃಹತ್ ಸ್ಕೋರ್

ಕರ್ನಾಟಕ ತಂಡವು ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಗೆಲುವು ಸಾಧಿಸುವುದು ಖಚಿತವಾಗಿದೆ. ಈಗಾಗಲೇ ಕರ್ನಾಟಕ ತಂಡ ಉತ್ತರಖಾಂಡ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ.

ಇದನ್ನೂ ಓದಿ:ಸೂಪರ್ 8 ಗೆ ಎಂಟ್ರಿ ಕೊಟ್ಟ ಪಾಕಿಸ್ತಾನ – ನಮೀಬಿಯಾ ವಿರುದ್ಧ ಭರ್ಜರಿ 102 ರನ್‌ಗಳಿಂದ ಗೆದ್ದ ಪಾಕ್

ರಣಜಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕದ ಕಲಿಗಳು ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಕರ್ನಾಟಕ ದಶಕದ ಬಳಿಕ ಫೈನಲ್‌ ಪ್ರವೇಶಿಸುವುದು ಖಚಿತವಾಗಿದೆ. ಗುರುವಾರ ಪಂದ್ಯದ ಕೊನೇ  ದಿನವಾಗಿದ್ದು ಕರ್ನಾಟಕದ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ 736 ರನ್‌ಗೆ ಪ್ರತಿಯಾಗಿ, ಉತ್ತರಾಖಂಡ ತಂಡವು 233 ರನ್‌ಗೆ ಆಲೌಟಾಯಿತು.  503 ರನ್‌ಗಳ ಬೃಹತ್‌ ಮುನ್ನಡೆ ಪಡೆದ ಹೊರತಾಗಿಯೂ ಕರ್ನಾಟಕ ಫಾಲೋ-ಆನ್‌ ಹೇರಲಿಲ್ಲ. ಹೀಗಾಗಿ  2ನೇ ಇನ್ನಿಂಗ್ಸ್‌ ಆರಂಭಿಸಿತು. ತಂಡ 4ನೇ ದಿನದಂತ್ಯಕ್ಕೆ (ಬುಧವಾರ) 6 ವಿಕೆಟ್‌ಗೆ 299 ರನ್‌ ಗಳಿಸಿತು. ಈ ಮೂಲಕ 802 ರನ್‌ ಮುನ್ನಡೆ ಸಾಧಿಸಿದೆ.

2 ಇನ್ನಿಂಗ್ಸ್‌ ಸೇರಿ ಕರ್ನಾಟಕ ಒಟ್ಟು 1035 ರನ್‌ ಕಲೆಹಾಕಿದೆ. ಗುರುವಾರ ಉತ್ತರಖಾಂಡ ಟೀಮ್ ಬ್ಯಾಟಿಂಗ್ ಮಾಡುತ್ತಿದ್ದು, 3 ವಿಕೆಟ್ ಕಳೆದುಕೊಂಡು ಕೇವಲ 81 ರನ್ ಗಳಿಸಿ ಸಂಕಷ್ಟದಲ್ಲಿದೆ. ಉತ್ತರಖಾಂಡ ಟೀಮ್ ಈ ಕರ್ನಾಟಕದ ಬೃಹತ್ ಸ್ಕೋರ್ ಗುರಿ ಬೆನ್ನಟ್ಟಲು ಸಾಧ್ಯವಿಲ್ಲ ಅನ್ನೋದು ಈಗಾಗಲೇ ಸಾಬೀತಾಗಿದೆ.

Sulekha