ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಬಾಂಬರ್ ಯಾರೆಂಬುದು ಗೊತ್ತಾಗಿದೆ -ಗೃಹಸಚಿವ ಪರಮೇಶ್ವರ್

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣದ ಬಾಂಬರ್ ಯಾರೆಂಬುದು ಗೊತ್ತಾಗಿದೆ -ಗೃಹಸಚಿವ ಪರಮೇಶ್ವರ್

ರಾಮೇಶ್ವರಂ ಕೆಫೆ ಬಾಂಬ್‌ ಸ್ಪೋಟ ಪ್ರಕರಣ ತನಿಖೆ ಚುರುಕುಗೊಂಡಿದೆ. ರಾಜ್ಯ, ಹೊರ ರಾಜ್ಯಗಳಲ್ಲಿ ಎನ್‌ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಲವು ಆಯಾಮಗಳಲ್ಲಿ ಅಧಿಕಾರಿಗಳ ತಂಡ ತನಿಖೆ ನಡೆಸುತ್ತಿದೆ. ಇದೀಗ ಈ  ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದ ಬಾಂಬರ್​ ಯಾರೆಂಬುದು ಒಂದು ಹಂತಕ್ಕೆ ಪತ್ತೆ ಆಗಿದೆ ಎಂದು ಗೃಹಸಚಿವ ಜಿ ಪರಮೇಶ್ವರ್​  ಹೇಳಿದರು.

ಇದನ್ನೂ ಓದಿ: ಮೈಸೂರು – ಕೊಡಗು ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರಾ ಒಡೆಯರ್..? ಕುತೂಹಲ ಮೂಡಿಸಿದ ಯದುವೀರ್ ಶಾರದಾಂಬೆ ದರ್ಶನ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹಸಚಿವ, ಬಾಂಬರ್ ಯಾರೆಂಬುದು ಬಹುತೇಕ ಪತ್ತೆಯಾಗಿದೆ. ಅದನ್ನು ದೃಢಪಡಿಸಿಕೊಳ್ಳುವುದೊಂದೇ ಬಾಕಿ ಇದೆ. ಅದನ್ನು ಸಿಸಿಬಿ, ಎನ್​ಐಎ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಮತ್ತೊಂದೆಡೆ ಶಂಕಿತ ಬಳಸಿದ ಮೊಬೈಲ್ ನ್ನು ಎನ್​ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಆತ ಕಲಬುರಗಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಮಾಡಿರುವುದು ಕೂಡಾ ಪತ್ತೆಯಾಗಿದೆ. ನಂತರ ಶಂಕಿತ ಹೈದ್ರಾಬಾದ್‌ಗೆ ತೆರಳಿರುವ ಮಾಹಿತಿಯೂ ಲಭ್ಯವಾಗಿದೆ.

ಮಾರ್ಚ್‌ 1 ರಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಪೋಟಗೊಂಡಿತ್ತು. 10 ಸೆಕೆಂಡ್‌ಗಳ ಅಂತರದಲ್ಲಿ ಎರಡು ಬಾಂಬ್‌ ಸ್ಪೋಟಗೊಂಡಿತ್ತು. ಈ ಸ್ಫೋಟದಲ್ಲಿ 9 ಮಂದಿ ಗಾಯಗೊಂಡಿದ್ದರು. ಇದೀಗ ಈ ಪ್ರಕರಣದ ತನಿಖೆಯನ್ನು ಎನ್‌ಐಎ ಅಧಿಕಾರಿಗಳು ನಡೆಸುತ್ತಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

Shwetha M