ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌! – ಜುಲೈ 1 ರಿಂದ ವಿದ್ಯುತ್‌ ದರ ಏರಿಕೆ

ಗ್ಯಾರಂಟಿಗಳ ಬಳಿಕ ಜನರಿಗೆ ಬೆಲೆ ಏರಿಕೆ ಶಾಕ್‌! – ಜುಲೈ 1 ರಿಂದ ವಿದ್ಯುತ್‌ ದರ ಏರಿಕೆ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದ ಫ್ರೀ ಗ್ಯಾರಂಟಿಗಳಿಗೆ ಜನರು ಫುಲ್‌ ಖುಷಿಯಾಗಿದ್ದರು. ಬೆಲೆ ಏರಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಇನ್ನಾದರೂ ನೆಮ್ಮದಿಯಿಂದ ಜೀವನ ನಡೆಸಬಹುದು ಎಂದು ಜನರು ಅಂದುಕೊಳ್ಳುತ್ತಿರುವಾಗಲೇ ಸರ್ಕಾರ ಜನರಿಗೆ ವಿದ್ಯುತ್‌ ದರ ಏರಿಕೆಯ ಶಾಕ್‌ ನೀಡಿದೆ.

ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆಯಾಗಲಿದ್ದು, ಜುಲೈ 1 ರಿಂದಲೇ ಜಾರಿಯಾಗಲಿದೆ ಎಂದು ಕೆಇಆರ್​​​ಸಿಯೇ ಆದೇಶ ಹೊರಡಿಸಿದೆ. ಜುಲೈ 1 ರಿಂದ ರಾಜ್ಯದಲ್ಲಿ ಪ್ರತಿ ಯುನಿಟ್‌ ಗೆ 70 ಪೈಸೆ ಹೆಚ್ಚಳವಾಗಲಿದ್ದು, ರಾಜ್ಯದ ಜನತೆಗೆ ಸರ್ಕಾರ ಕರೆಂಟ್‌ ಶಾಕ್‌ ನೀಡಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಮೊದಲ ಹೋರಾಟ ಶುರು! – ಇಂದು ಮತ್ತು ನಾಳೆ ಪ್ರತಿಭಟನೆ

ಏಪ್ರಿಲ್ ತಿಂಗಳಲ್ಲೇ ಪ್ರತಿ ಯುನಿಟ್​ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್​​ಸಿ ಆದೇಶ ಹೊರಡಿಸಿತ್ತು. ಆದ್ರೆ ಚುನಾವಣೆ ಇದ್ದಿದ್ರಿಂದ ಕರೆಂಟ್​ ಬಿಲ್​ ಹೆಚ್ಚಳ ಆದೇಶಕ್ಕೆ ತಡೆ ಹಿಡಿಯಲಾಗಿತ್ತು. ಈಗ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಜುಲೈ 1ರಿಂದಲೇ ಕರೆಂಟ್​ ಬಿಲ್ ಹೆಚ್ಚಳ ಆಗುವ ಮೂಲಕ ಹೊಸ ಪರಿಷ್ಕೃತ ದರ ಜಾರಿಯಾಗಲಿದೆ. ವಿದ್ಯುತ್ ಸರಬರಾಜು ಮಾಡುವ 5 ನಿಗಮಗಳಲ್ಲೂ ಹೆಚ್ಚಳ ಮಾಡಲಾಗಿದೆ. ಕೆಇಆರ್​ಸಿಯಲ್ಲಿ ವಾರ್ಷಿಕ ಪರಿಷ್ಕರಣೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

suddiyaana