ತಿಮರೋಡಿ ಗ್ಯಾಂಗ್ ಗೆ ಮತ್ತೆ ಬಂಧನದ ಭೀತಿ! – ಎಸ್ಐಟಿ ತನಿಖೆಗೆ ನೀಡಿದ್ದ ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್

ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಡಲಾಗಿದೆ ಎಂದು ಆರೋಪ ಮಾಡಿದವರಿಗೆ ಈಗ ಸಂಕಷ್ಟ ಎದುರಾಗಿದೆ. ಬುರುಡೆ ಗ್ಯಾಂಗ್ಗೆ ಈಗ ಹಂತ ಹಂತವಾಗಿ ಹಿನ್ನಡೆಯಾಗ್ತಿದೆ. ಇದೀಗ ಈ ಕೇಸ್ ತನಿಖೆ ವಿಚಾರವಾಗಿ ಕರ್ನಾಟಕ ಹೈಕೋರ್ಟ್ ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮರೋಡಿ, ಟಿ.ಜಯಂತ್ ಹಾಗೂ ವಿಠ್ಠಲಗೌಡ ಬಿಗ್ಶಾಕ್ ನೀಡಿದೆ.
ಇದನ್ನೂ ಓದಿ: ಮತ್ತೆ ಕ್ರೈಂ ಪಾರ್ಟ್ನರ್ ಜೊತೆ ಸೇರಿದ ಜಾಹ್ನವಿ! – ಮುಂದುವರಿತು ಹಳೇ ಚಾಳಿ.. ಕಿಚ್ಚನ ಕ್ಲಾಸ್ ಫಿಕ್ಸ್!
ಅನಧಿಕೃತ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ರದ್ದು ಮಾಡಬೇಕೆಂದು ಮಹೇಶ್ ಶೆಟ್ಟಿ ತಿಮರೋಡಿ ಗ್ಯಾಂಗ್ ಅರ್ಜಿ ಸಲ್ಲಿಕೆ ಮಾಡಿದ್ದರು. ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ ಹಾಗೂ ವಿಠಲ ಗೌಡ ಅರ್ಜಿ ಸಲ್ಲಿಕೆ ಮಾಡಿದ್ದರು. ಇದನ್ನು ಪುರಸ್ಕರಿಸಿದ್ದ ಹೈಕೋರ್ಟ್ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿತ್ತು. ಆದ್ರೆ ಈಗ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಎಂ. ನವಾಜ್ ಅವರಿದ್ದ ನ್ಯಾಯಪೀಠ ಧರ್ಮಸ್ಥಳ ಪ್ರಕರಣದ ಬಗ್ಗೆ ವಿಶೇಷ ತನಿಖಾ ತಂಡ (ಎಸ್ಐಟಿ) ನಡೆಸುತ್ತಿದ್ದ ತನಿಖೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿ, ತನಿಖೆಗೆ ಅನುಮತಿ ನೀಡಿದೆ. ಇದೀಗ ವಿಠಲಗೌಡ, ಗಿರೀಶ್ ಮಟ್ಟಣ್ಣವರ್, ಮಹೇಶ್ ತಿಮರೋಡಿ ಮತ್ತು ಟಿ. ಜಯಂತ್ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗಬೇಕಾಗಿದೆ.
ಹೈಕೋರ್ಟ್ ಮಹತ್ವದ ತೀರ್ಪು ಬೆನ್ನಲ್ಲೇ ಶವ ಹೂತಿಟ್ಟ ಕೇಸ್ನ ಮಾಸ್ಟರ್ಮೈಂಡ್ಗಳಿಗೆ ಮತ್ತೆ ಎಸ್ ಐಟಿ ತನಿಖೆಯ ಬಿಸಿ ಮುಟ್ಟಲಿದೆ. ಈಗಾಗಲೇ ಎಸ್ ಐಟಿ ತನಿಖಾ ವರದಿ ಸಲ್ಲಿಕೆ ಅಕ್ಟೋಬರ್ 31 ಕ್ಕೆ ಸಲ್ಲಿಕೆಯಾಗಬೇಕಿತ್ತು. ಆದರೆ ಕೆಲವೊಂದು ಕಾರಣದಿಂದ ವಿಳಂಬವಾಗಿದೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದರು. ಹೀಗಾಗಿ ಸದ್ಯದಲ್ಲೇ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕಂಡುಬರುವ ಸಾಧ್ಯತೆ ಇದೆ.

ನೋಡಿರಿ

