ಹಾಸನದಲ್ಲಿ ಹೃದಯಾತದಿಂದ ಸರಣಿ ಸಾವು – ಆರೋಗ್ಯ ಇಲಾಖೆ ಸಮಿತಿ ರಚನೆ

ಹಾಸನದಲ್ಲಿ ಹೃದಯಾತದಿಂದ ಸರಣಿ ಸಾವು ಮುಂದುವರೆದಿದೆ. ಇಂದು ಮೂವರು ಹಾರ್ಟ್ ಅಟ್ಯಾಕ್ ನಿಂದ ಉಸಿರು ಚೆಲ್ಲಿದ್ದಾರೆ. ಈ ಮೂಲಕ 40 ದಿನದ ಅಂತರದಲ್ಲಿ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಇದು ಭಾರೀ ಆತಂಕ ಮೂಡಿಸಿದ್ದು, ಈ ಸಂಬಂಧ ಆರೋಗ್ಯ ಇಲಾಖೆ ಸಮಿತಿಯೊಂದನ್ನು ರಚಿಸಿದೆ.
ಹಾಸನದಲ್ಲಿ 40 ದಿನದ ಅಂತರದಲ್ಲಿ ಬರೋಬ್ಬರಿ 21 ಜನರು ಹೃದಯಘಾತಕ್ಕೆ ಬಲಿಯಾಗಿದ್ದಾರೆ. ಹಾಸನದಲ್ಲಿ ಸರಣಿ ಸಾವು ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ. ಇದರಿಂದ ಎಚ್ಚೆತ್ತುಕೊಂಡ ರಾಜ್ಯ ಆರೋಗ್ಯ ಇಲಾಖೆ ಜಯದೇವ ನಿರ್ದೇಶಕ ಡಾ.ರವಿಂದ್ರನಾಥ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಹಾಸನ ಜಿಲ್ಲೆಯ ಜನರ ಸಾವಿನ ಬಗ್ಗೆ ವರದಿ ನೀಡುವಂತೆ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಸಮಿತಿಗೆ ಸೂಚಿಸಿದೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತಾ ಹಾಸನ ಜಿಲ್ಲೆ 18ಕ್ಕೂ ಹೆಚ್ಚು ಡೆತ್ ರಿಪೋರ್ಟ್ ಆಗಿದೆ. ಆರೋಗ್ಯ ಇಲಾಖೆಯಿಂದ ಸಿಸ್ಟಮ್ ಇಲ್ಲ. ನಿಖರ ಮಾಹಿತಿ ಕಲೆ ಹಾಕಲು ಸಾಧ್ಯವಿಲ್ಲ. ಕೆಲ ಖಾಯಿಲೆಗಳ ಬಗ್ಗೆ ಮಾತ್ರ ನಮ್ಮ ಬಳಿ ರಿಪೋರ್ಟ್ ಇದೆ. ಮುಂದಿನ ದಿನಗಳಲ್ಲಿ ಪ್ರತಿ ಸಾವಿನ ಬಗ್ಗೆ ರಿಪೋರ್ಟ್ ಆಗಬೇಕಿದೆ. ಸಾವು ಹೆಚ್ಚಳ ಏಕಾಏಕಿ ಅಂತ ಹೇಳಲು ಸಾದ್ಯವಿಲ್ಲ ಎಂದಿದ್ದಾರೆ.

ನೋಡಿರಿ

