ಮದ್ಯ ಖರೀದಿ ಹಾಗೂ ಮಾರಾಟದ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ!

ಮದ್ಯ ಖರೀದಿ ಹಾಗೂ ಮಾರಾಟದ ವಯಸ್ಸಿನ ಮಿತಿ 21 ರಿಂದ 18ಕ್ಕೆ ಇಳಿಕೆ!

ಬೆಂಗಳೂರು: ರಾಜ್ಯ ಸರ್ಕಾರ ಮದ್ಯ ಖರೀದಿ ಮತ್ತು ಸೇವನೆಯ ವಯಸ್ಸಿನ ಮಿತಿಯನ್ನು 21 ರಿಂದ 18 ಕ್ಕೆ ಇಳಿಸಲು ಚಿಂತನೆ ನಡೆಸಿದೆ.

ಕರ್ನಾಟಕ ಅಬಕಾರಿ ಕಾಯ್ದೆ-1965 ರ ನಿಬಂಧನೆಗಳ ಪ್ರಕಾರ, ಮದ್ಯದ ಖರೀದಿ ಮತ್ತು ಸೇವನೆಗೆ ಕನಿಷ್ಠ 18 ವರ್ಷ. ಆದರೆ ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮ 1967 ರ ಪ್ರಕಾರ, ಕನಿಷ್ಠ ಕಾನೂನು ವಯಸ್ಸು 21 ಇದೆ.  ಹೀಗಾಗಿ ಈ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರ್ಕಾರ ಮದ್ಯ ಸೇವನೆ ಮತ್ತು ಖರೀದಿ ವಯಸ್ಸನ್ನು 21 ರಿಂದ 18 ವರ್ಷಕ್ಕೆ ಇಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ರಾಜ್ಯ ಅಬಕಾರಿ ಇಲಾಖೆ ಜನವರಿ 9 ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕ್ಯಾನ್ಸರ್ ಗೆದ್ದ ನಟಿಗೆ ಮತ್ತೊಂದು ಕಾಯಿಲೆ – ಚರ್ಮದ ಬಣ್ಣ ಬದಲಾಗುತ್ತಿರೋದೇಕೆ?

ವಯೋಮಿತಿಯನ್ನು ಕಡಿಮೆಗೊಳಿಸುವಂತೆ ಮದ್ಯ ವ್ಯಾಪಾರಸ್ಥರು ಒತ್ತಾಯಿಸುತ್ತಿದ್ದಾರೆ. ನಿವೃತ್ತ ಅಧಿಕಾರಿ ವಿ ಯಶವಂತ್ ಅವರ ನೇತೃತ್ವದಲ್ಲಿ ರಚಿಸಲಾದ ಸಮಿತಿಯ ಶಿಫಾರಸ್ಸಿನ ಮೇರೆಗೆ ಈ ಪ್ರಸ್ತಾವನೆಯನ್ನು ರಚಿಸಲಾಗಿದೆ.

ರಾಜ್ಯದಲ್ಲಿ ಮದ್ಯ ಮಾರಾಟದಿಂದ 2019-20ರಲ್ಲಿ 21,583 ಕೋಟಿ ರೂ., 2021-22ರಲ್ಲಿ 26,377 ಕೋಟಿ ರೂ. ಆದಾಯ ಸರ್ಕಾರದ ಬೊಕ್ಕಸಕ್ಕೆ ಬಂದಿದೆ. ಗೋವಾ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಪುದುಚೇರಿಯಂತಹ ಕೆಲವು ರಾಜ್ಯಗಳು ವಯಸ್ಸಿನ ಮಿತಿಯನ್ನು 18 ವರ್ಷಕ್ಕೆ ಇಳಿಸಿವೆ.

suddiyaana