ಚುನಾವಣಾ ಹೊಸ್ತಿಲಲ್ಲೇ ಮೀಸಲಾತಿ ಗಿಫ್ಟ್ ಕೊಟ್ಟ ಸರ್ಕಾರ – ವರ್ಕೌಟ್ ಆಗುತ್ತಾ ಜಾತಿ ಲೆಕ್ಕಾಚಾರ..?

ಚುನಾವಣಾ ಹೊಸ್ತಿಲಲ್ಲೇ ಮೀಸಲಾತಿ ಗಿಫ್ಟ್ ಕೊಟ್ಟ ಸರ್ಕಾರ – ವರ್ಕೌಟ್ ಆಗುತ್ತಾ ಜಾತಿ ಲೆಕ್ಕಾಚಾರ..?

ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಮೀಸಲಾತಿ ಗಿಫ್ಟ್ ನೀಡಿದ್ದಾರೆ. ಒಕ್ಕಲಿಗರು, ಲಿಂಗಾಯತ ಪಂಚಮಸಾಲಿ, ಎಸ್​ಸಿ ಸಮುದಾಯಗಳಿಗೆ ಒಳ ಮೀಸಲಾತಿಯ ಕೊಡುಗೆ ಕೊಟ್ಟಿದ್ದಾರೆ.

ಶುಕ್ರವಾರ ಸಂಪುಟ ಸಭೆ ನಡೆಸಿದ ಬಳಿಕ ಮಾತನಾಡಿದ ಬಸವರಾಜ ಬೊಮ್ಮಾಯಿ, ಈಗಾಗಲೇ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ಈಗ ಅದು ಅನುಷ್ಟಾನದಲ್ಲಿ ಇದೆ. 9 ಶೆಡ್ಯೂಲ್ ಗೆ ಕಳುಹಿಸಿ ಕೊಟ್ಟಿದ್ದೇವೆ. ಒಳ ಮೀಸಲಾತಿಗೆ ಸಾಕಷ್ಟು ಹೋರಾಟ ನಡೆದಿತ್ತು. ಸ್ಪೃಶ್ಯರು, ಅಸ್ಪೃಶ್ಯರು ಸೇರಿ ಒಳಗೊಂಡಂತೆ ಎಸ್ಸಿಗಳಲ್ಲಿ 101 ಪಂಗಡಗಳಿವೆ. ಭೋವಿ, ಲಂಬಾಣಿ, ಕೊರಚ, ಕೊರ್ಮ ಮೂಲ ಪರಿಶಿಷ್ಟ ಜಾತಿಯಲ್ಲಿದ್ದಾರೆ. ಎಸ್ಸಿ ಮೀಸಲಾತಿಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಆರ್ಟಿಕಲ್ 341/2 ಅನ್ವಯ ನಾಲ್ಕು ಗುಂಪುಗಳಿಗೂ ಎಸ್ಸಿ ಲೆಫ್ಟ್, ರೈಟ್, ಅಸ್ಪೃಶ್ಯರು, ಇತರರು, ಎಡ‌ಕ್ಕೆ ಶೇ.6, ಬಲಕ್ಕೆ ಶೇ.5.5, ಸ್ಪೃಶ್ಯರು ಶೇ.4.5 ಹಾಗೂ ಇತರರಿಗೆ ಶೇ.1 ರಷ್ಟು ಮೀಸಲಾತಿ ನೀಡಲಾಗಿದೆ ಎಂದರು.

ಇದನ್ನೂ ಓದಿ : ವರುಣಾದಿಂದ ಸಿದ್ದರಾಮಯ್ಯ ಅಖಾಡಕ್ಕೆ – ಕೋಲಾರ ಟಿಕೆಟ್ ಯಾರಿಗೆ?

3A, 3B ನಲ್ಲಿ ಒಕ್ಕಲಿಗ ಮತ್ತು ಇತರರು, ಲಿಂಗಾಯತ ಪಂಚಮಸಾಲಿ ಹಾಗೂ ಇತರರಿದ್ದು ಒಕ್ಕಲಿಗರ ಮೀಸಲಾತಿಯನ್ನು 4 ರಿಂದ ಶೇ.6ಕ್ಕೆ, ಲಿಂಗಾಯತ ಪಂಚಮಸಾಲಿಗೆ ಇದ್ದ ಶೇ.5 ಮೀಸಲಾತಿ ಶೇ.7ಕ್ಕೆ ಹೆಚ್ಚಿಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕಾಡು ಕುರುಬ, ಗೊಂಡ ಕುರುಬ ಈಗಾಗಲೇ ಹೋಗಿದೆ. ಒಳಮೀಸಲಾತಿ ಕಲ್ಪಿಸುವ ಬಗ್ಗೆ ಕೇಂದ್ರಕ್ಕೆ ಶಿಫಾರಸು ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

 

suddiyaana