ಏಕರೂಪ ಸಿನಿಮಾ ಟಿಕೆಟ್ ದರ ಆದೇಶಕ್ಕೆ ವಿರೋಧ? – ಮತ್ತೆ ಏರಿಕೆಯಾಗುತ್ತಾ ಸಿನಿಮಾ ಟಿಕೆಟ್‌ ಬೆಲೆ?

ಏಕರೂಪ ಸಿನಿಮಾ ಟಿಕೆಟ್ ದರ ಆದೇಶಕ್ಕೆ ವಿರೋಧ? – ಮತ್ತೆ ಏರಿಕೆಯಾಗುತ್ತಾ ಸಿನಿಮಾ ಟಿಕೆಟ್‌ ಬೆಲೆ?

ಕರ್ನಾಟಕದಲ್ಲಿ ಏಕರೂಪ ಸಿನಿಮಾ ಟಿಕೆಟ್‌ ದರ ನಿಗದಿ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದ್ರೀಗ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.  ಏಕರೂಪ ಸಿನಿಮಾ ಟಿಕೆಟ್ ದರ ಜಾರಿ ಬಗ್ಗೆ ಬಿಗ್ ಬಜೆಟ್ ಸಿನಿಮಾ ತಂಡ ಆಕ್ಷೇಪ ವ್ಯಕ್ತಪಡಿಸಿದೆ.

ಇದನ್ನೂ ಓದಿ: 6 ಇನ್ನಿಂಗ್ಸ್ ಆಡಿದ್ರೂ ಅರ್ಧಶತಕವನ್ನೂ ಬಾರಿಸದ ಕರುಣ್ ನಾಯರ್ – 4ನೇ ಪಂದ್ಯದಿಂದ ಗೇಟ್ ಪಾಸ್?

ಕರ್ನಾಟಕದಲ್ಲಿಯೇ ಪರಭಾಷೆ ಸಿನಿಮಾಗಳು ಬಹುಕೋಟಿ ರೂಪಾಯಿ ಮಾಡಿಕೊಳ್ಳುತ್ತವೆ. ಪರಭಾಷೆ ಸಿನಿಮಾಗಳ ಟಿಕೆಟ್​ಗಳು ಸಾವಿರ ರೂಪಾಯಿ ಮೀರಿದ ಉದಾಹರಣೆ ಕೂಡ ಇದೆ. ಆದ್ದರಿಂದ ಟಿಕೆಟ್ ಬೆಲೆ ಕಡಿಮೆ ಆಗಬೇಕು ಎಂಬುದು ಬಹುದಿನಗಳ ಬೇಡಿಕೆ ಆಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿತ್ತು. ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ 200 ರೂಪಾಯಿ ಮೀರದಂತೆ ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶವನ್ನು ಚಿತ್ರರಂಗದವರು ಹಾಗೂ ಪ್ರೇಕ್ಷಕರು ಸ್ವಾಗತಿಸಿದ್ದಾರೆ. ಆದ್ರೀಗ ಸರ್ಕಾರದ ಈ ನಿರ್ಧಾರಕ್ಕೆ ದೊಡ್ಡ ನಿರ್ಮಾಣ ಸಂಸ್ಥೆ ಹಾಗೂ ಸ್ಟಾರ್ ನಟರ ಆಕ್ಷೇಪ ಎತ್ತಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಈ ಬಗ್ಗೆ ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ. ಚಂದ್ರಶೇಖರ್ ಮಾಧ್ಯಮಗಳಿ ಮಾಹಿತಿ ನೀಡಿದ್ದಾರೆ. ನಾವು ಸರ್ಕಾರದ ಆದೇಶವನ್ನ ಸ್ವಾಗತ ಮಾಡುತ್ತೇವೆ. ನಾವು ಇದಕ್ಕಾಗಿ ತುಂಬಾ ಹೋರಾಟ ಮಾಡಿದ್ದೆವು. ಇದರಿಂದ ನಶಿಸಿ ಹೋಗುತ್ತಿರುವ ಕನ್ನಡ ಚಿತ್ರರಂಗಕ್ಕೆ ಒಳ್ಳೆಯದಾಗುತ್ತದೆ. ಎಲ್ಲರೂ ಇದನ್ನು ಸ್ವಾಗತ ಮಾಡಬೇಕು. ಮಲ್ಟಿಪ್ಲೆಕ್ಸ್ ಹಾಗೂ ಕನ್ನಡ ಚಿತ್ರರಂಗದವರಿಂದ ಇದಕ್ಕೆ ಆಕ್ಷೇಪ ಇದ್ದರೆ ಇನ್ನು 15 ದಿನದಲ್ಲಿ ಹೇಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇನ್ನು ಏಕರೂಪ ಟಿಕೆಟ್‌ ದರ ನಿಗಧಿ ಮಾಡಿರುವುದು ಕರ್ನಾಟಕದಲ್ಲಿ ಮಾತ್ರವಲ್ಲ.. ಈಗಾಗಲೇ ತೆಲುಗು ರಾಜ್ಯಗಳಲ್ಲಿ ಈ ರೀತಿಯ ಆದೇಶ ಇದೆ. ದೊಡ್ಡ ಬಜೆಟ್ ಸಿನಿಮಾಗಳು ಬರುವಾಗ ಸರ್ಕಾರದಿಂದ ಅನುಮತಿ ಪಡೆದು ಕೆಲವು ದಿನಗಳ ಕಾಲ ಟಿಕೆಟ್ ಬೆಲೆ ಏರಿಸಿಕೊಳ್ಳಲು ಅವಕಾಶ ಇದೆ. ಇಲ್ಲಿಯೂ ಅದೇ ರೀತಿ ಮಾಡುತ್ತಲಾಗುತ್ತದೆಯೇ ಎಂಬ ಪ್ರಶ್ನೆ ಇದೆ.

Shwetha M