ಸರ್ಕಾರಿ ನೌಕರರ ಮುಷ್ಕರ ವಾಪಸ್ : ಷಡಕ್ಷರಿ – ವೇತನ ಹೆಚ್ಚಳ ಸ್ವಾಗತಿಸಿದ್ರೂ ಹೋರಾಟ ನಿಲ್ಲಲ್ಲ ಯಾಕೆ..?

ಸರ್ಕಾರಿ ನೌಕರರ ಮುಷ್ಕರ ವಾಪಸ್ : ಷಡಕ್ಷರಿ – ವೇತನ ಹೆಚ್ಚಳ ಸ್ವಾಗತಿಸಿದ್ರೂ ಹೋರಾಟ ನಿಲ್ಲಲ್ಲ ಯಾಕೆ..?

ಸರ್ಕಾರಿ ನೌಕರರ ಬಿಗಿಪಟ್ಟಿಗೆ ಸರ್ಕಾರ ಕೊನೆಗೂ ತಲೆಬಾಗಿದೆ. 7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಯುತ್ತಿದ್ದ ಪ್ರತಿಭಟನೆ ಹಿಂಪಡೆಯಲಾಗಿದೆ. ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ರು. ಇದಾದ ಕೆಲವೇ ಹೊತ್ತಿನಲ್ಲಿ ಅಧಿಕೃತ ಆದೇಶ ಹೊರಬಿದ್ದಿತ್ತು.

ಸರ್ಕಾರದಿಂದ ವೇತನ ಹೆಚ್ಚಳದ ಬಗ್ಗೆ ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ರು. ಕಬ್ಬನ್​ ಪಾರ್ಕ್​ನಲ್ಲಿರುವ ಸಂಘದ ಕಚೇರಿಯಲ್ಲಿ ಸಿ.ಎಸ್​.ಷಡಕ್ಷರಿ ಸುದ್ದಿಗೋಷ್ಠಿ ನಡೆಸಿದ್ದಾರೆ. ನಿನ್ನೆ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಿದರು. 9 ಸಚಿವರು, ಸಿಎಸ್, ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಯಿತು. ಸರ್ಕಾರ, ಸರ್ಕಾರಿ ನೌಕರರು ತದ್ವಿರುದ್ಧವಾಗಿ ಹೋಗುವುದು ಬೇಡ. ಇಬ್ಬರೂ ಒಟ್ಟಾಗಿ ಹೋಗಬೇಕು ಎಂದು ಸಿಎಂ ಮನವಿ ಮಾಡಿದರು.

ಇದನ್ನೂ ಓದಿ : ರೂಪಾ ವಿರುದ್ಧ ರೋಹಿಣಿ 1 ಕೋಟಿ ರೂ. ಮಾನನಷ್ಟ ಕೇಸ್ – ಕಾನೂನು ಕ್ರಮಕ್ಕೆ ಆಗ್ರಹ

ವೇತನ ಭತ್ಯೆ ತಾತ್ಕಾಲಿಕ ಪರಿಹಾರಕ್ಕೆ ಸಮ್ಮತಿ ನೀಡಿದ್ದೇವೆ. ಎನ್​ಪಿಎಸ್​ನ್ನು ಒಪಿಎಸ್​ ಮಾಡಬೇಕೆಂದು ಬೇಡಿಕೆ ಇಟ್ಟಿದ್ದೆವು. ಒಪಿಎಸ್​ ಮಾಡುವ ಬಗ್ಗೆ ಕೇಂದ್ರ ಸರ್ಕಾರದ ಜೊತೆ ಚರ್ಚಿಸಬೇಕು. ಬೇರೆ ರಾಜ್ಯಗಳಲ್ಲಿ ಒಪಿಎಸ್​ ಜಾರಿ ಬಗ್ಗೆ ಸಮಿತಿ ರಚಿಸಿ ಪರಿಶೀಲನೆ ಮಾಡಲಾಗುತ್ತಿದೆ. ಸಿಎಂ ಬೊಮ್ಮಾಯಿ ಎಸಿಎಸ್​ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ಹಾಗೂ 2 ತಿಂಗಳಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಒಪಿಎಸ್ ಬಗೆಗಿನ ಹೋರಾಟ ಮುಂದುವರಿಯುತ್ತೆ ಎಂದಿದ್ದಾರೆ. ಪ್ರತಿಭಟನೆ ಕೈಬಿಟ್ಟಿರೋದಾಗಿ ಘೋಷಣೆ ಮಾಡಿದ ಷಡಕ್ಷರಿ ಸರ್ಕಾರಿ ನೌಕರರು ಕೂಡಲೇ ಸೇವೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಕರ್ತವ್ಯ ಬಹಿಷ್ಕರಿಸಿದ್ದರಿಂದ ಜನರಿಗೆ ಆಗಿರುವ ಬಗ್ಗೆ ಕ್ಷಮೆ ಕೋರಿದ್ದಾರೆ.

ಇವತ್ತು ಬೆಳಗ್ಗೆಯಿಂದಲೇ ಸರ್ಕಾರಿ ನೌಕರರು ಕೆಲಸಗಳಿಗೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಇದ್ರಿಂದಾಗಿ ಸರ್ಕಾರಿ ಸೇವೆಗಳು ಸಿಗದೆ ಸಾರ್ವಜನಿಕರು ಪರದಾಡುಂತಾಗಿತ್ತು. ಅದ್ರಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆಂದು ಬಂದ ರೋಗಿಗಳು ವೈದ್ಯರು ಸೇವೆಗೆ ಹಾಜರಾಗದಿದ್ದಕ್ಕೆ ಪರದಾಡುತ್ತಿದ್ದರು.

 

 

suddiyaana