KAR VS J&K ರಣಜಿ ಫೈನಲ್ – ದೇವ್ ಕ್ಯಾಪ್ಟನ್ಸಿ.. KL ಇರೋದೇ ಪ್ಲಸ್!
ಹುಬ್ಬಳ್ಳಿಯಲ್ಲಿ 9ನೇ ಟ್ರೋಫಿ ಗೆಲ್ತಾರಾ?

ಭಾರತದ ಪ್ರತಿಷ್ಠಿತ ಟೂರ್ನಿಯಾಗಿರೋ ರಣಜಿಯಲ್ಲಿ ಕರ್ನಾಟಕ ತಂಡ ಇತಿಹಾಸ ಸೃಷ್ಟಿಸಿದೆ. ಉತ್ತರಾಖಂಡ ವಿರುದ್ಧದ ಸೆಮೀಸ್ನಲ್ಲಿ ರನ್ ಮಳೆ ಸುರಿಸಿ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಕೂಡ ಬರೋಬ್ಬರಿ 11 ವರ್ಷಗಳ ಬಳಿಕ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ. ದೇವದತ್ ಪಡಿಕ್ಕಲ್ ಕ್ಯಾಪ್ಟನ್ಸಿಯಲ್ಲಿ ಕೆಎಲ್ ರಾಹುಲ್ ಅವ್ರ ಗೈಡೆನ್ಸ್ನಲ್ಲಿ ಕರ್ನಾಟಕ ಟೀಂ ಈ ಸಲ ಕಪ್ ಗೆಲ್ಲೋ ಫೇವರೆಟ್ ಟೀಂ ಆಗಿದೆ. ಕನ್ನಡಿಗರಿಗೆ ಡಬಲ್ ಧಮಾಕ ಅಂದ್ರೆ ಫೈನಲ್ ಪಂದ್ಯ ಹುಬ್ಬಳ್ಳಿಯಲ್ಲಿ ನಡೆಯುತ್ತೆ.
ಇದನ್ನೂ ಓದಿ : ಸೆಮೀಸ್ ನಲ್ಲಿ ಮತ್ತೆ IND Vs PAK? – ಬದ್ಧವೈರಿಗಳ ಮುಖಾಮುಖಿಗೆ 2 ಚಾನ್ಸ್
ಕರ್ನಾಟಕ ಮತ್ತು ಉತ್ತರಾಖಂಡ್ ನಡುವೆ ಫೆಬ್ರವರಿ 15ರಿಂದ ಸ್ಟಾರ್ಟ್ ಆಗಿದ್ದ ರಣಜಿ ಸೆಮಿಫೈನಲ್ ಪಂದ್ಯ ಅಂದುಕೊಂಡಂತೆಯೇ ಡ್ರಾನಲ್ಲಿ ಕೊನೆಗೊಳ್ತು. ಬಟ್ ರನ್ಗಳ ರಾಶಿಯನ್ನೇ ಗುಡ್ಡೆ ಹಾಕಿದ್ದ ಕರ್ನಾಟಕ ಇನ್ನಿಂಗ್ಸ್ ಲೀಡ್ನೊಂದಿಗೆ ಫೈನಲ್ಗೆ ಲಗ್ಗೆ ಇಟ್ಟಿದೆ. 66 ವರ್ಷಗಳ ರಣಜಿ ಇತಿಹಾಸದಲ್ಲಿ ಮೊದಲ ಬಾರಿಗೆ ಜಮ್ಮು ಕಾಶ್ಮೀರ ತಂಡ ಫೈನಲ್ಗೆ ಎಂಟ್ರಿ ಕೊಟ್ಟಿದೆ.
ಕರ್ನಾಟಕ ಪರ ಸೆಮಿಫೈನಲ್ ನಲ್ಲಿ ಶತಕಗಳ ಸುರಿಮಳೆ!
ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ ಪರ ಮೊದಲ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಶತಕ, ದೇವದತ್ ಪಡಿಕ್ಕಲ್ ಡಬಲ್ ಸೆಂಚುರಿ, ಸ್ಮರಣ್ ರವಿಚಂದ್ರನ್ ಅವ್ರ ಶತಕ, ಕರುಣ್ ನಾಯರ್, ಕೃತಿಕ್ ಕೃಷ್ಣ, ವಿಧ್ಯಾದರ್ ಪಾಟೀಲ್ ಅರ್ಧಶತಕಗಳೊಂದಿಗೆ ಮೊದಲ ಇನ್ನಿಂಗ್ಸ್ನಲ್ಲೇ 736 ರನ್ಸ್ ಕಲೆ ಹಾಕಿದ್ರು. ರನ್ ಶಿಖರ ನೋಡಿಯೇ ಕಂಗೆಟ್ಟಿದ್ದ ಉತ್ತರಾಖಂಡ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 233 ರನ್ಗಳಿಗೆ ಆಲೌಟ್ ಆಗಿದ್ರು. ಹೀಗಾಗಿ ಕರ್ನಾಟಕ ತಂಡವು ಮೊದಲ ಇನಿಂಗ್ಸ್ನಲ್ಲಿ ಬರೋಬ್ಬರಿ 503 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಹೀಗಿದ್ರೂ ಫಾಲೋ ಆನ್ ಹೇರದೇ ತಾವೇ ಬ್ಯಾಟಿಂಗ್ ಆರಂಭ ಮಾಡಿದ್ರು. ದ್ವಿತೀಯ ಇನಿಂಗ್ಸ್ನಲ್ಲಿ ಕರ್ನಾಟಕ ಪರ ಕೃತಿಕ್ ಕೃಷ್ಣ 52, ಸ್ಮರಣ್ ರವಿಚಂದ್ರನ್ 127 ಹಾಗೂ ಕೆಎಲ್ ರಾಹುಲ್ 86 ರನ್ ಬಾರಿಸಿದರು. ಈ ಮೂಲಕ ಸೆಕೆಂಡ್ ಇನಿಂಗ್ಸ್ನಲ್ಲಿ 323 ರನ್ಗಳಿಸಿ ಆಲೌಟ್ ಆದ್ರು. ಮೊದಲ ಇನಿಂಗ್ಸ್ನಲ್ಲಿನ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 827 ರನ್ಗಳ ಗುರಿ ಪಡೆದ ಉತ್ತರಾಖಂಡ್ 5ನೇ ದಿನದಾಟದ ಅಂತ್ಯಕ್ಕೆ ಕಲೆಹಾಕಿದ್ದು 260 ರನ್ಗಳು ಮಾತ್ರ. ಹೀಗಾಗಿ ಪಂದ್ಯ ಡ್ರಾ ಆಯ್ತು. ಆದ್ರೆ ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ತಂಡವು ಫೈನಲ್ಗೆ ಅರ್ಹತೆ ಪಡೆದುಕೊಳ್ತು.
ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯಲ್ಲಿ ರಣಜಿ ಫೈನಲ್!
ಕನ್ನಡಿಗರಿಗೆ ಈ ಸಲ ಡಬಲ್ ಧಮಾಕ ಇದೇ ನೋಡಿ. ಫೆಬ್ರವರಿ 24 ರಿಂದ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮತ್ತು ಜುಮ್ಮು-ಕಾಶ್ಮೀರ ತಂಡಗಳು ಮುಖಾಮುಖಿಯಾಗಲಿದೆ. ಜಮ್ಮು ಕಾಶ್ಮೀರ ರಣಜಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಕರ್ನಾಟಕ ಮತ್ತು ಜಮ್ಮು ಕಾಶ್ಮೀರ ನಡುವಿನ ಐದು ದಿನಗಳ ಹೈವೋಲ್ಟೇಜ್ ರಣಜಿ ಟ್ರೋಫಿ ಫೈನಲ್ ಪಂದ್ಯ ಹುಬ್ಬಳಿಯಲ್ಲಿ ನಡೆಯಲಿದೆ. ಫೆಬ್ರವರಿ 24 ರಿಂದ ಹುಬ್ಬಳ್ಳಿಯ ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ತವರಿನಲ್ಲಿ ಕರ್ನಾಟಕ ತಂಡವನ್ನು ಬೆಂಬಲಿಸಲು ಅಭಿಮಾನಿಗಳ ಬಳಗವೇ ಸೇರುವ ನಿರೀಕ್ಷೆ ಇದೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಕರ್ನಾಟಕ ತಂಡ ಕೂಡ ಬಲಿಷ್ಠವಾಗಿದ್ದು, ಅದ್ಭುತ ಪ್ರದರ್ಶನ ನೀಡುತ್ತಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೆಯಿದೆ. ಮಯಾಂಕ್ ಅರ್ಗವಾಲ್, ಕೆಎಲ್ ರಾಹುಲ್, ದೇವದತ್ ಪಡಿಕ್ಕಲ್, ಕರುಣ್ ನಾಯರ್, ಸ್ಮರಣ್ ರವಿಚಂದ್ರನ್, ಕೃತಿಕ್ ಕೃಷ್ಣ ಕರ್ನಾಟಕದ ಬ್ಯಾಟಿಂಗ್ ಬಲವಾಗಿದ್ದಾರೆ. ಇನ್ನೂ ಬೌಲಿಗ್ ವಿಭಾಗದಲ್ಲಿ ಶ್ರೇಯಸ್ ಗೋಪಾಲ್, ವಿದ್ಯಾಧರ್ ಪಾಟೀಲ್, ವಿಜಯ್ ಕುಮಾರ್ ವೈಶಾಕ್, ಶಿಖರ್ ಶೆಟ್ಟಿ, ಪ್ರಸಿದ್ಧ್ ಕೃಷ್ಣ ಘಟಾನುಘಟಿಗಳಿದ್ದಾರೆ. ಕರ್ನಾಟಕ 9ನೇ ಬಾರಿಗೆ ರಣಜಿ ಟ್ರೋಫಿಯ್ನು ಎತ್ತಿ ಹಿಡಿಯಲು ಸಜ್ಜಾಗಿದೆ.

ನೋಡಿರಿ

