ಮುಖ್ಯಮಂತ್ರಿ ಆಯ್ಕೆಗೆ 5 ದಿನ, ಸಂಪುಟ ರಚನೆಗೆ ಇನ್ನೆಷ್ಟು ದಿನ?
ಸಂಭಾವ್ಯ ಸಚಿವರು ಪಟ್ಟಿ ಇಲ್ಲಿದೆ ನೋಡಿ..
ಬೆಂಗಳೂರು: ವಿಧಾನಸಭಾ ಚುನಾವಣೆ ಫಲಿತಾಂಶ ಬಂದು 5 ದಿನಗಳ ಬಳಿಕ ಮುಖ್ಯ ಮಂತ್ರಿ ಆಯ್ಕೆ ಮಾಡಿರುವ ಕಾಂಗ್ರೆಸ್ ಇನ್ನೂ 5 ದಿನಗಳ ನಂತರ ಸಚಿವ ಸಂಪುಟ ರಚನೆಗೆ ಸಮಯ ತೆಗೆದುಕೊಳ್ಳುವ ನಿರೀಕ್ಷೆ ಇದೆ. ಶನಿವಾರ ಮುಖುಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಸಿದ್ದರಾಮಯ್ಯ ಜೊತೆಗೆ ಡಿ.ಕೆ ಶಿವಕುಮಾರ್ ಮಾತ್ರ ಉಪಮುಖ್ಯ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: ಕೊನೆಗೂ ಹೈಡ್ರಾಮಕ್ಕೆ ತೆರೆ – ಗದ್ದುಗೆ ಗುದ್ದಾಟದಲ್ಲಿ ಗೆದ್ದ ಸಿದ್ದರಾಮಯ್ಯ
ಮೊದಲ ಕ್ಯಾಬಿನೆಟ್ ಸಭೆಯಲ್ಲೇ ಕಾಂಗ್ರೆಸ್ ನ 5 ಗ್ಯಾರೆಂಟಿ ಘೋಷಣೆಗಳನ್ನು ಜಾರಿಗೊಳಿಸುವ ನಿರೀಕ್ಷೆ ಇದೆ. ಅಧಿಕಾರ ಸ್ವೀಕರಿಸಿದ ಒಂದೆರಡು ದಿನಗಳ ನಂತರ ಸಿದ್ಧರಾಮಯ್ಯ ಹಾಗೂ ಡಿ,ಕೆ ಶಿವಕುಮಾರ್ ದೆಹಲಿಗೆ ತೆರಳಲಿದ್ದು ಸಚಿವ ಸಂಪುಟ ರಚನೆಯ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸಲಿದ್ದಾರೆ.
ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ..
- ಬೆಳಗಾವಿ – ಲಕ್ಷ್ಮಣ್ ಸವಧಿ, ಲಕ್ಷ್ಮೀ ಹೇಬ್ಬಾಳ್ಕರ್, ಸತೀಶ್ ಜಾರಕಿಹೊಳಿ
- ಬಾಗಲಕೋಟೆ – ಆರ್.ಬಿ.ತಿಮ್ಮಾಪುರ
- ಬಿಜಾಪುರ – ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಯಶವಂತ ರಾಯಗೌಡ ಪಾಟೀಲ್
- ಕಲಬುರಗಿ – ಪ್ರಿಯಾಂಕ್ ಖರ್ಗೆ, ಅಜಯ್ ಸಿಂಗ್, ಶರಣ ಪ್ರಕಾಶ್ ಪಾಟೀಲ್
- ರಾಯಚೂರು – ಹಂಪನಗೌಡ ಬಾದರ್ಲಿ
- ಯಾದಗಿರಿ – ಶರಣಪ್ಪ ದರ್ಶನಾಪುರ್
- ಬೀದರ್ – ರಹೀಮ್ ಖಾನ್, ಈಶ್ವರ್ ಖಂಡ್ರೆ
- ಕೊಪ್ಪಳ – ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
- ಗದಗ – ಹೆಚ್.ಕೆ. ಪಾಟೀಲ್
- ಧಾರವಾಡ – ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬಯ್ಯ/ಸಂತೋಷ್ ಲಾಡ್
- ಉತ್ತರ ಕನ್ನಡ – ಆರ್. ವಿ ದೇಶಪಾಂಡೆ
- ಹಾವೇರಿ – ರುದ್ರಪ್ಪ ಲಮಾಣಿ
- ಬಳ್ಳಾರಿ – ತುಕಾರಾಮ್, ನಾಗೇಂದ್ರ
- ಚಿತ್ರದುರ್ಗ – ರಘುಮೂರ್ತಿ
- ದಾವಣಗೆರೆ – ಎಸ್ಎಸ್ ಮಲ್ಲಿಕಾರ್ಜುನ/ ಡಿ.ಜಿ ಶಾಂತನಗೌಡ
- ಶಿವಮೊಗ್ಗ – ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್
- ಚಿಕ್ಕಮಗಳೂರು – ಟಿ.ಡಿ. ರಾಜೇಗೌಡ
- ತುಮಕೂರು – ಡಾ. ಜಿ. ಪರಮೇಶ್ವರ್, ಎಸ್ ಆರ್. ಶ್ರೀನಿವಾಸ್, ಕೆಎನ್ ರಾಜಣ್ಣ
- ಚಿಕ್ಕಬಳ್ಳಾಪುರ – ಸುಬ್ಬಾರೆಡ್ಡಿ
- ಕೋಲಾರ- ರೂಪ ಶಶೀಧರ್/ನಾರಾಯಣ ಸ್ವಾಮೀ
- ಬೆಂಗಳೂರು- ಕೆಜೆ ಜಾರ್ಜ್, ರಾಮಲಿಂಗಾ ರೆಡ್ಡಿ, ಹ್ಯಾರಿಸ್, ಎಂ. ಕೃಷ್ಣಪ್ಪ, ದಿನೇಶ್ ಗುಂಡೂರಾವ್, ಜಮೀರ್ ಅಹಮ್ಮದ್ ಖಾನ್
- ಮಂಡ್ಯ- ಎನ್ ಚೆಲುವರಾಯ ಸ್ವಾಮಿ
- ಮಂಗಳೂರು- ಯುಟಿ ಖಾದರ್
- ಮೈಸೂರು- ಹೆಚ್.ಸಿ.ಮಹದೇವಪ್ಪ / ತನ್ವೀರ್ ಸೇಠ್
- ಚಾಮರಾಜನಗರ- ಪುಟ್ಟರಂಗಶೆಟ್ಟಿ
- ಕೊಡಗು- ಎಎಸ್ ಪೊನ್ನಣ್ಣ
- ಬೆಂಗಳೂರು ಗ್ರಾಮಾಂತರ- ಕೆ. ಹೆಚ್ ಮುನಿಯಪ್ಪ
ವಿಧಾನ ಪರಿಷತ್‌ನಿಂದ ಸಂಪುಟಕ್ಕೆ ಸಂಭಾವ್ಯ ಅಭ್ಯರ್ಥಿಗಳು
- ಬಿ.ಕೆ. ಹರಿಪ್ರಸಾದ್
- ಸಲೀಂ ಅಹಮದ್ ನಜೀರ್ ಅಹಮದ್