ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ
ಮೇ 10 ರಂದು ಮತದಾನ, ಮೇ 13 ರಂದು ಮತ ಎಣಿಕೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಮೇ 10 ರಂದು ಮತದಾನ, ಮೇ 13 ರಂದು ಮತ ಎಣಿಕೆ

ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ದಿನಾಂಕ ಘೋಷಣೆ ಮಾಡಿದ್ದಾರೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಹೊರಬೀಳಲಿದೆ.   ರಾಜ್ಯದಲ್ಲಿ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 10 ರಂದು ಮತದಾನ ಹಾಗೂ  ಮೇ 13 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.

ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ರವರೆಗೆ ಅವಕಾಶ ನೀಡಲಾಗಿದೆ. ಮೇ 15ರೊಳಗೆ ಚುನಾವಣಾ ಪ್ರಕಿಯೆ ಮುಕ್ತಾಯಗೊಳ್ಳಲಿದೆ. ದೇಶದಲ್ಲಿ ಮೊದಲ ಬಾರಿಗೆ ವಿಕಲಚೇತನರಿಗೆ ಮನೆಯಿಂದ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡಬಹುದು ಎಂದು ಹೇಳಿದ್ದಾರೆ.

  • ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ
  • ಮೇ 10 ರಂದು ಮತದಾನ, ಮೇ 13 ರಂದು ಮತ ಎಣಿಕೆ
  • ಏಪ್ರಿಲ್ 13 ರಂದು ಚುನಾವಣಾ ಅಧಿಸೂಚನೆ
  • ಏಪ್ರಿಲ್ 20 ರಂದು ನಾಮಪತ್ರ ಸಲ್ಲಿಕೆ ಆರಂಭ
  • ಏಪ್ರಿಲ್ 24 ನಾಮಪತ್ರ ವಾಪಸ್ ಗೆ ಕೊನೇ ದಿನ
  • ಮೇ 15ರೊಳಗೆ ಚುನಾವಣಾ ಪ್ರಕಿಯೆ ಮುಕ್ತಾಯ
  • ರಾಜ್ಯದಲ್ಲಿ 5.22 ಕೋಟಿ ಮತದಾರರು
  • ರಾಜ್ಯದಲ್ಲಿ 58,282 ಮತಗಟ್ಟೆಗಳ ಸ್ಥಾಪನೆ
  • ಒಂದೊಂದು ಮತಗಟ್ಟೆಗೆ 883 ಮತದಾರರದು
  • ನಗರ ಪ್ರದೇಶದಲ್ಲಿ 24,063 ಮತಗಟ್ಟೆ. ಗ್ರಾಮಾಂತರ ಪ್ರದೇಶದಲ್ಲಿ 34,219  ಮತಗಟ್ಟೆಗಳು
  • ಮಹಿಳಾ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆ 1,320
  • ಯುವಕರು ನಿರ್ವಹಿಸುವ ಮತಗಟ್ಟೆಗಳು 226
  • 224 ಕ್ಷೇತ್ರಗಳಲ್ಲಿ ತಲಾ ಒಂದು ಯುವ ಮತಗಟ್ಟೆಗಳ ಸ್ಥಾಪನೆ
  • ಜೇನುಕುರುಬ, ಕಾಡುಕುರುಬ ಮತದಾರರಿಗೆ ಪ್ರತ್ಯೇಕ ಬೂತ್ ವ್ಯವಸ್ಥೆ
  • ಮತಗಟ್ಟೆಗೆ ಯುವಕರನ್ನು ಸೆಳೆಯಲು ವಿವಿಗಳ ಬಳಕೆ
  • ಅಭ್ಯರ್ಥಿಗಳ ಮಾಹಿತಿ ಪ್ರಮಾಣ ಪತ್ರ ಚುನಾವಣಾ ವೆಬ್ ಸೈಟ್ ನಲ್ಲಿ ಲಭ್ಯ
  • ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಆಯೋಗದಿಂದ ಕ್ರಮ
  • ಚುನಾವಣಾ ಕೆಲಸಕ್ಕಾಗಿ 2,400 ವೀಕ್ಷಕರ ನೇಮಕ
  • ಚುನಾವಣಾ ಅಕ್ರಮ ತಡೆಗೆ ತಂಡ ರಚನೆ
  • 19 ಜಿಲ್ಲೆ 171 ಚೆಕ್ ಪೋಸ್ಟ್ ಗಳ ನಿರ್ಮಾಣ
  • ಬ್ಯಾಂಕ್ ವ್ಯವಹಾರಗಳ ಮೇಲೆ ಹದ್ದಿನ ಕಣ್ಣು

suddiyaana