ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಸೆಮಿ ಫೈನಲ್‌ಗೆ ಕಾಲಿಟ್ಟ ಕರ್ನಾಟಕ

ಕ್ವಾರ್ಟರ್ ಫೈನಲ್‌ನಲ್ಲಿ ಗೆದ್ದು ಸೆಮಿ ಫೈನಲ್‌ಗೆ ಕಾಲಿಟ್ಟ ಕರ್ನಾಟಕ

ರಣಜಿ  ಕ್ವಾರ್ಟರ್  ಫೈನಲ್‌ ಪಂದ್ಯದಲ್ಲಿ  ಮುಂಬೈ ವಿರುದ್ಧ  ಕರ್ನಾಟಕ ಭರ್ಜರಿ ಗೆಲುವು ದಾಖಲಿಸಿದೆ. ಮುಂಬೈ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಬರೋಬ್ಬರಿ 377 ರನ್​ಗಳಿಸಿ ಆಲೌಟ್ ಆಯಿತು. ಈ ರನ್‌ ಬೆನ್ನಟ್ಟಿದ ಕರ್ನಾಟಕ ಟೀಂ ಕ್ವಾಂಟರ್ ಫೈನಲ್‌ನಲ್ಲಿ ಗೆದ್ದು ಸೆಮಿ ಫೈನಲ್‌ಗೆ ಕಾಲಿಟ್ಟಿದೆ. ಕೆಎಲ್ ರಾಹುಲ್ ಹಾಗೂ ಸ್ಮರಣ್ ರವಿಚಂದ್ರನ್ ಭರ್ಜರಿ ಬ್ಯಾಟಿಂಗ್ ಕರ್ನಾಟಕ ಗೆಲುವಿನ ದಡ ಸೇರಿಸಿದ್ರು.

ಇದನ್ನೂ ಓದಿ: ಯಶಸ್ವೀ ಪ್ರದರ್ಶನ ಕಂಡ ಬಾರ್ಡರ್ -2 ಸಿನಿಮಾ – ಬಾಲಿವುಡ್‌ನಲ್ಲಿ 309 ಕೋಟಿ ರೂಪಾಯಿ ಗಳಿಕೆ

ಮುಂಬೈನ ಎಂಸಿಎ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ಹಾಗೂ ಮುಂಬೈನ ನಡುವಿನ ರಣಜಿ ಟ್ರೋಫಿ 2025-26 ರ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ತಂಡವನ್ನು ಮಣಿಸಿದ ಕರ್ನಾಟಕ ತಂಡ ಸೆಮಿಫೈನಲ್ ಸುತ್ತಿಗೆ ಅರ್ಹತೆ ಪಡೆದುಕೊಂಡಿದೆ. ಗೆಲುವಿಗೆ ಮುಂಬೈ ನೀಡಿದ 326 ರನ್​ಗಳ ಗುರಿಯನ್ನು ಕರ್ನಾಟಕ ತಂಡ 6 ವಿಕೆಟ್​ಗಳ ನಷ್ಟಕ್ಕೆ ನಾಲ್ಕನೇ ದಿನದಾಟದ ಎರಡನೇ ಸೆಷನ್​ನಲ್ಲಿ ಬೆನ್ನಟ್ಟುವ ಮೂಲಕ ಜಯದ ನಗೆ ಬೀರಿತು. ಕರ್ನಾಟಕ ತಂಡದ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 130 ರನ್​ಗಳ ಇನ್ನಿಂಗ್ಸ್ ಆಡಿದರು. ರಾಹುಲ್​ಗೆ ಸಾಥ್ ನೀಡಿದ ಆರ್​. ಸ್ಮರಣ್ ಕೂಡ ಅಜೇಯ 83 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

Kishor KV

Leave a Reply

Your email address will not be published. Required fields are marked *