ವಿಧಾನಸಭೆಯಲ್ಲೂ LPG ಸಮರ! – ಗ್ಯಾಸ್ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದ ಸಿಎಂ!

ವಿಧಾನಸಭೆಯಲ್ಲೂ LPG ಸಮರ! – ಗ್ಯಾಸ್ ಸಿಲಿಂಡರ್ ಕೊರತೆಗೆ ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದ ಸಿಎಂ!

ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯು ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರುತ್ತಿದೆ. ಭಾರತವು ತನ್ನ ಎಲ್‌ಪಿಜಿ ಅಗತ್ಯದ ಬಹುಭಾಗವನ್ನು ಆಮದಿನ ಮೂಲಕವೇ ಪೂರೈಸಿಕೊಳ್ಳುವುದರಿಂದ, ಇಂತಹ ಯುದ್ಧ ಸನ್ನಿವೇಶಗಳು ದೇಶದಲ್ಲಿ ಅಡುಗೆ ಅನಿಲದ ಅಭಾವ ಮತ್ತು ಬೆಲೆ ಏರಿಕೆಗೆ ಕಾರಣವಾಗಿದೆ. ಇದೀಗ ಅಡುಗೆ ಅನಿಲದ ಕೊರತೆ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆ ನಡೆದಿದೆ. ಸಿಎಂ ಸಿದ್ದರಾಮಯ್ಯ LPG ಗ್ಯಾಸ್‌ ಕೊರತೆಗೆ ಕೇಂದ್ರವೇ ಕಾರಣ ಎಂದು ಸಿಎಂ ಕಿಡಿಕಾರಿದ್ದಾರೆ.

ಇದನ್ನೂ ಓದಿ: 133 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ತಾಂತ್ರಿಕ ದೋಷ! –  ಹಾರ್ಡ್​ ಲ್ಯಾಂಡಿಂಗ್ ವೇಳೆ ಪುಡಿ ಪುಡಿಯಾದ ಚಕ್ರ!

ವಿಧಾನಸಭೆಯಲ್ಲಿ ಗ್ಯಾಸ್ ಪ್ರಾಬ್ಲಂ ಬಿಜೆಪಿ ವರ್ಸಸ್ ಕಾಂಗ್ರೆಸ್ ಗದ್ದಲಕ್ಕೆ ಕಾರಣವಾಯಿತು. ಶೂನ್ಯ ವೇಳೆಯಲ್ಲಿ ಶಾಸಕ ಕುಣಿಗಲ್ ರಂಗನಾಥ್ ಈ ಕುರಿತು ಪ್ರಸ್ತಾಪಿಸಿದರು. ರಾಜ್ಯದಲ್ಲಿ, ಬೆಂಗಳೂರಲ್ಲಿ ಗ್ಯಾಸ್ ಸಮಸ್ಯೆ ಇದೆ, ಬ್ಲಾಕ್ ಮಾರ್ಕೆಟ್ ಶುರುವಾಗಿದೆ. ಇದಕ್ಕೆ ಮೋದಿ ವಿದೇಶಾಂಗ ನೀತಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಗ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಯುದ್ಧದ ಸಂದರ್ಭದಲ್ಲಿ ರಾಜಕೀಯ ಏಕೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ವಾಕ್ಸಮರ ಜೋರಾಗಿ ನಡೆಯಿತು. ಟ್ರಂಪ್ ಬೆಸ್ಟ್ ಫ್ರೆಂಡ್. ವಿದೇಶಾಂಗ ನೀತಿ ಏನಾಯ್ತು? ನಿಮಗೆ ಯೋಗ್ಯತೆ ಇಲ್ಲ, ಎಸ್ಮಾ ಏಕೆ ಜಾರಿ ಮಾಡಿದ್ದೀರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು. ಇದೇ ವೇಳೆ ಸಿದ್ದರಾಮಯ್ಯ ಮಧ್ಯಪ್ರವೇಶ ಮಾಡಿ ಗರಂ ಆದರು. ಕೇಂದ್ರ ಸರ್ಕಾರ ಅಂದ್ರೆ ಎದ್ದು ನಿಂತುಕೊಂಡ್ರೆ ಹೇಗೆ? ಗ್ಯಾಸ್ ಸಿಲಿಂಡರ್ ಸಪ್ಲೈ ಮಾಡೋರು ಕೇಂದ್ರ ಎಂದು ಕಿಡಿಕಾರಿದರು.

ಆಗ ಬಿಜೆಪಿ ಶಾಸಕ ಸುನಿಲ್ ಕುಮಾರ್ ತಿರುಗೇಟು ನೀಡಿ, ಯುದ್ಧದ ಕಾರಣಕ್ಕೆ ಆಗಿರುವ ಸಮಸ್ಯೆ ಎಲ್ಲ ಕಡೆಗಳಲ್ಲೂ ಇದೇ ಸಮಸ್ಯೆ ಆಗಿದೆ. ರಾಜಕಾರಣ ಮಾಡಿದ್ರೆ ಹೇಗೆ? ಈ ಸರ್ಕಾರಕ್ಕೆ ಯೋಗ್ಯತೆ ಇಲ್ಲ, ಸರ್ವರ್ ಸಮಸ್ಯೆ ಸರಿ ಮಾಡಿಲ್ಲ ಎಂದರು. ಆಗ ಮತ್ತೆ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿ, ನಿಮಗೆ ಯೋಗ್ಯತೆ ಇಲ್ಲ, ಬೆಲೆ ಹೆಚ್ಚಳ ಮಾಡಿದವರು ನೀವು. ಎಸ್ಮಾ ಜಾರಿ ಮಾಡಿದವರು ಯಾರು? ಕೇಂದ್ರ ಸರ್ಕಾರವೇ ಜವಾಬ್ದಾರಿ ಎಂದು ಆಕ್ರೋಶ ಹೊರಹಾಕಿದರು.

ಇದಾದ ಬಳಿಕ ಅಶೋಕ್ ಮಾತನಾಡಿ, ಸಿಎಂ ಅವರೇ ಸ್ಟ್ರೈಕ್ ಮಾಡಿ ಅಂತಾ ಹೇಳುತ್ತಾರೆ, ಇದು ಸರೀನಾ ಅಂತಾ ವಾಗ್ದಾಳಿ ನಡೆಸಿದರು. ಆಗ ಸಿಎಂ ಸ್ಪಷ್ಟನೆ ನೀಡಿ ನಾನು ಸ್ಟ್ರೈಕ್ ಮಾಡಿ ಅಂತಾ ಹೇಳಿಲ್ಲ. ಆದರೆ ಹೋಟೆಲ್ ಅವರು ಸ್ಟ್ರೈಕ್ ಮಾಡ್ತಾರೆ ಅಂತಾ ಕೇಳಿದಾಗ ಸರಿ ಇದೆ ಅಂದಿದ್ದೇನೆ, ಅವರು ಸ್ಟ್ರೈಕ್ ಮಾಡೋದು ಸರಿ ಇದೆ ಎಂದು ತಿರುಗೇಟು ನೀಡಿದರು.

Shwetha M

Leave a Reply

Your email address will not be published. Required fields are marked *