BJP ಮೇಲೆ ‘ಕೈ’ ಕೊರೊನಾ ಅಸ್ತ್ರ.. ಅರೆಸ್ಟ್ ಆಗ್ತಾರಾ BSY, ರಾಮುಲು? – PPT ಕಿಟ್, N-95..167 Cr ಮೋಸ!

BJP ಮೇಲೆ ‘ಕೈ’ ಕೊರೊನಾ ಅಸ್ತ್ರ.. ಅರೆಸ್ಟ್ ಆಗ್ತಾರಾ BSY, ರಾಮುಲು? – PPT ಕಿಟ್, N-95..167 Cr ಮೋಸ!

ಮುಡಾ ಹರಗಣರ ಸಿದ್ದರಾಮಯ್ಯಗೆ ಕಂಟಕ ಆದ, ಹಾಗೇ ಕೊರೊನಾ ಹಗರಣ ಬಿಎಸ್ ಯಡಿಯೂರಪ್ಪಗೆ ಕಂಟಕ ಆಗೋ ಲಕ್ಷಣ ಎದ್ದು ಕಾಣುತ್ತಿದೆ.. 167 ಕೋಟಿ ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ಸಂಚನ ಸೃಷ್ಟಿಯಾಗಿದೆ. ಹಾಗಿದ್ರೆ ಏನಿದು ಹಗರಣ? ಯಾರೆಲ್ಲಾ  ಮೇಲೆ ಎಫ್ಐಆರ್ ಆಗಿದೆ. ಬಿಎಸ್‌ವೈಗೆ ಹೇಗೆ ಎಫೆಕ್ಟ್ ಆಗುತ್ತೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ರಜತ್‌ ತಪ್ಪು.. ಧನರಾಜ್‌ಗೆ ಶಿಕ್ಷೆ! – ದೊಡ್ಮನೆ ಜಗಳಕ್ಕೆ ಹೊಸ ಟ್ವಿಸ್ಟ್‌ ಕೊಟ್ಟ ಕಿಚ್ಚ ಸುದೀಪ್!

ಮುಡಾ ಕೇಸ್​​ ಸಿಎಂಗೆ ಸುತ್ಕೊಳ್ತಿದ್ದಂತೆ ಕಾಂಗ್ರೆಸ್​​ ಹೂಡಿದ ಬ್ರಹ್ಮಾಸ್ತ್ರವೇ  ಕೊವಿಡ್​​ ಹಗರಣ. ಕುನ್ಹಾ ವರದಿ ಸಲ್ಲಿಸಿ ತಿಂಗಳುಗಳ ಬಳಿಕ ಕೊರೊನಾ ಹಗರಣದಲ್ಲಿ ಭಾರೀ ತಿರುವು ಪಡೆದಿದೆ. ಬಿಜೆಪಿ ಸರ್ಕಾರದ ಅವಧಿಯ ಹಗರಣ ಸಂಬಂಧ ಮೊಟ್ಟ ಮೊದಲ ಎಫ್​ಐಆರ್ ದಾಖಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ಕೋವಿಡ್ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.  ಅಧಿಕಾರಿಯೊಬ್ಬರು ನೀಡಿದ ದೂರಿನನ್ವಯ ಸದ್ಯ ಎಫ್ಐಆರ್ ದಾಖಲಾಗಿದೆ.

ಕೊವೀಡ್ ಅಕ್ರಮಗಳ ತನಿಖೆ ನಡೆಸಲು ರಾಜ್ಯ ಸರ್ಕಾರದಿಂದ ಗ್ರೀನ್​ಸಿಗ್ನಲ್  ನೀಡಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ವಿಷ್ಣುಪ್ರಸಾದ್ ಈ ಬಗ್ಗ ದೂರು ನೀಡಿದ್ರು. ಡಾ.ವಿಷ್ಣುಪ್ರಸಾದ್ ದೂರು ಆಧರಿಸಿ ವಿಧಾನಸೌಧ ಠಾಣೆಯಲ್ಲಿ  ಡಾ. ಗಿರೀಶ್, ರಘು ಜಿ.ಪಿ, ಮುನಿರಾಜ್ ಲಾಜ್ ಎಕ್ಸ್​​ಪೋರ್ಟ್ಸ್,  ಪ್ರೂಡೆಂಟ್‌ ಮ್ಯಾನೆಜ್‌ಮೆಂಟ್‌ ಸಲೂಷನ್ಸ್ ಸೇರಿ ಹಲವರ ವಿರುದ್ಧ ಎಫ್ಐಆರ್ ಆಗಿದೆ. ಎಫ್ಐಆರ್ ದಾಖಲಾಗ್ತಿದ್ದಂತೆ ವಿಧಾನಸೌಧ ಠಾಣೆ ಪೊಲೀಸರು ತನಿಖೆಗಿಳಿದಿದ್ದಾರೆ. ಕೊವೀಡ್ ಅಕ್ರಮ ತನಿಖೆಗೆ ರಾಜ್ಯ ಸರ್ಕಾರದಿಂದ ಎಸ್ಐಟಿ ರಚನೆ ಮಾಡೋ ಸಾಧ್ಯತೆಯಿದೆ.

2020ರ ಆಗಸ್ಟ್ 18ರಂದು ಸರ್ಕಾರ ವತಿಯಿಂದ ಆಡಳಿತಾತ್ಮಕ ಹಾಗೂ ಕಾನೂನಾತ್ಮಕ 2.59 ಲಕ್ಷ ಎನ್ 95 ಮಾಸ್ಕ್ ಹಾಗೂ 2.59 ಪಿಪಿಇ ಕಿಟ್ ಖರೀದಿಸಲು ಅನುಮತಿ ಪಡೆದುಕೊಳ್ಳಲಾಗಿತ್ತು. ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ, ರಾಜ್ಯದ 17 ಸರ್ಕಾರಿ ಕಾಲೇಜು ಹಾಗೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಳಸಲು ಅನುಮೋದನೆ ನೀಡಲಾಗಿತ್ತು. ಅನುಮೋದನೆ ಪಡೆಯುವಾಗ ಕೆಟಿಪಿಪಿ ಕಾನೂನಿನ ಕಾಯ್ದೆಗಳನ್ನು ಪೂರ್ಣ ಪ್ರಮಾಣದಲ್ಲಿ ಪಾಲಿಸಬೇಕು. 41.35 ಕೋಟಿ ರೂ.ಗಿಂತ ಮೌಲ್ಯದ ಹೆಚ್ಚು ಸಾಮಗ್ರಿ ಖರೀದಿಸಕೂಡದು ಎಂದು ಷರತ್ತು ವಿಧಿಸಲಾಗಿತ್ತು. ಇದರ ನಂತರ ವೈದ್ಯಕೀಯ ಶಿಕ್ಷಣ ಇಲಾಖೆಯು ಟೆಂಡ‌ರ್ ಕರೆದಿದ್ದು, ಲಾಜ್ ಕೋರ್ಟ್ಸ್ ಸಂಸ್ಥೆಯು ಒಂದು ಪಿಪಿಇ ಕಿಟ್ ಸರಬರಾಜು ಮಾಡುವುದಾಗಿ ಬಿಡ್ ಪಡೆದುಕೊಂಡಿತ್ತು‌. ನಿಗದಿತ ಸಂಖ್ಯೆಯ ಪಿಪಿಇ ಕಿಟ್​​​ಗಳನ್ನು 15 ದಿನಗಳೊಳಗೆ ಸರಬರಾಜು ಮಾಡಲು ಆದೇಶಿಸಿದ್ದರೂ ಪಿಇಇ ಕಿಟ್‌ ಗಳನ್ನು 17 ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೀಡಿರುವ ಬಗ್ಗೆ ಯಾವುದೇ ದಾಖಲೆಗಳಲ್ಲಿ ನಮೂದಿಸಿಲ್ಲ ಎಂದು ಎಫ್ಐಆರ್​ ನಲ್ಲಿ ಉಲ್ಲೇಖಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಹಿಂದಿನ ಸರ್ಕಾರ ರಾಜಕೀಯ ಪ್ರತಿನಿಧಿಗಳು ಅಧಿಕಾರಿಗಳು ಅವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ, ತುರ್ತು ಪರಿಸ್ಥಿತಿಯ ಲಾಭ ಪಡೆದು ಕೋವಿಡ್-19 ಸಂದರ್ಭದಲ್ಲಿ ಸರ್ಕಾರಕ್ಕೆ ಆಂದಾಜು ಒಟ್ಟು 167 ಕೋಟಿ ರೂ.ಗಳ ಆರ್ಥಿಕ ನಷ್ಟವಾಗಿದೆ ಎಂದು ಎಫ್ಐಆರ್​ನಲ್ಲಿ ವಿಷ್ಣುಪ್ರಸಾದ್ ವಿವರಿಸಿದ್ದಾರೆ. ಮೊದಲು ಅಧಿಕಾರಿಗಳುನ್ನ ವಿಚಾರಣೆ ನಡೆಸೋ ಪೊಲೀಸರು ನಂತ್ರ ಜನಪ್ರತಿನಿಧಿಗಳ ವಿಚಾರಣೆ ನಡೆಸಲ್ಲಿದ್ದಾರೆ. ಒಟ್ನಲ್ಲಿ ಬಿಜೆಪಿ ಸಿದ್ದರಾಮಯ್ಯ ಮೇಲೆ  ಮುಡಾ ಅಸ್ತ್ರ ಬಿಟ್ಟಿದ್ದಕ್ಕೆ ಕಾಂಗ್ರೆಸ್ ಪ್ರತ್ಯಶ್ತ್ರವಾಗಿ ಕೊರೊನಾ ಹಗರಣವನ್ನ ಬಿಟ್ಟಿದೆ. ಇದು ಅಂದಿನ ಸಿಎಂ ಆಗಿದ್ದ ಬಿಎಸ್‌ವೈಗೆ ಹಾಗೂ ಮಾಜಿ ಆರೋಗ್ಯ ಸಚಿವರಿಗೆ ಎದೆಬಡಿತ ಹೆಚ್ಚಿಸಿದೆ.

Shwetha M