ಚುನಾವಣೆ ಹೊಸ್ತಿಲಿನಲ್ಲೇ ‘ಕೈ’ ಗೆ ಮಹಾಘಾತ – ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಿಧಿವಶ!

ಚುನಾವಣೆ ಹೊಸ್ತಿಲಿನಲ್ಲೇ ‘ಕೈ’ ಗೆ ಮಹಾಘಾತ – ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ವಿಧಿವಶ!

ವಿಧಾನಸಭಾ ಚುನಾವಣಾ ಹೊಸ್ತಿಲಿನಲ್ಲೇ ಕಾಂಗ್ರೆಸ್​ಗೆ ದೊಡ್ಡ ಆಘಾತ ಎದುರಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಬೆಳಗ್ಗೆ 6.30ರ ವೇಳೆಗೆ ಎದೆನೋವು ಕಾಣಿಸಿಕೊಂಡಿದ್ದು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : ಬಿಜೆಪಿಗೆ ಬೆಂಬಲವಷ್ಟೇ.. ಅಧಿಕೃತ ಸೇರ್ಪಡೆ ಇಲ್ಲ – ‘ಕಮಲ’ ಮುಡಿಯಲು ಸುಮಲತಾಗಿರುವ ಸವಾಲುಗಳೇನು..?

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್​.ಧ್ರುವನಾರಾಯಣ(61) (KPCC Working President R Dhruvanarayana) ಅವರಿಗೆ ಇವತ್ತು (ಮಾರ್ಚ್ 11)ರ ಬೆಳಗ್ಗೆ 6.30ರ ವೇಳೆಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಅವರು ಡ್ರೈವರ್​ಗೆ ಕರೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಆರ್​.ಧ್ರುವನಾರಾಯಣ ತೀವ್ರ ರಕ್ತಸ್ರಾವ ಆಗಿ ಮೃತಪಟ್ಟಿದ್ದಾರೆ ಎಂದು ಧ್ರುವನಾರಾಯಣಗೆ ಚಿಕಿತ್ಸೆ ನೀಡಿದ ವೈದ್ಯ ಮಂಜುನಾಥ್ ಹೇಳಿದ್ದಾರೆ. ನಾವು ನೋಡಿದಾಗ ಧ್ರುವನಾರಾಯಣ ಕೋಮಾ ಸ್ಥಿತಿಯಲ್ಲಿದ್ದರು ಎಂದು ತಿಳಿಸಿದ್ದಾರೆ. ಧ್ರುನಾರಾಯಣ ಇಬ್ಬರು ಪುತ್ರರು, ಪತ್ನಿಯನ್ನ ಅಗಲಿದ್ದಾರೆ.

1983ರಲ್ಲಿ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿದ್ದ ಧ್ರುವನಾರಾಯಣ 1986ರಲ್ಲಿ ಎನ್​ಎಸ್​ಯುಐ ಬೆಂಗಳೂರು​ ಘಟಕದ ಅಧ್ಯಕ್ಷರಾಗಿದ್ದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಹಾಗೇ ಕೊಳ್ಳೇಗಾಲ ಕ್ಷೇತ್ರದಿಂದ 1 ಬಾರಿ, ಸಂತೇಮರಹಳ್ಳಿ ಕ್ಷೇತ್ರದಿಂದ 1 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ನಂಜನಗೂಡು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದರು. ಹಾಗೇ ಅರ್ಜಿಯನ್ನ ಕೂಡ ಸಲ್ಲಿಕೆ ಮಾಡಿದ್ದರು.

suddiyaana