ವಿಧಾನ ಪರಿಷತ್ ಚುನಾವಣೆಗೆ 20 ಅಭ್ಯರ್ಥಿಗಳ ಕಾಂಗ್ರೆಸ್ ಶಾರ್ಟ್ ಲಿಸ್ಟ್ ರೆಡಿ! – ಕೈ ಟಿಕೆಟ್ ಯಾರ್ಯಾರಿಗೆ?

ವಿಧಾನ ಪರಿಷತ್ ಚುನಾವಣಾ ಕಾವು ರಂಗೇರುತ್ತಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇರೋ ಏಳು ಸ್ಥಾನಗಳಿಗೆ ಹತ್ತಾರು ಅಭ್ಯರ್ಥಿಗಳು ಲಾಬಿ ಮಾಡುತ್ತಿರುವುದರಿಂದ ಪಟ್ಟಿ ಫೈನಲ್ ಮಾಡೋದಕ್ಕೆ ಹೆಣಗಾಡುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಿಎಂ-ಡಿಸಿಎಂ ಚರ್ಚೆ ನಡೆಸಿದ್ದು, 20 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ರೆಡಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬಂಧನದಿಂದ ಪಾರಾಗಲು ಪ್ರಜ್ವಲ್ ರೇವಣ್ಣ ಮಾಡಿದ ಪ್ಲಾನ್ ಫೇಲ್! – ಅಮ್ಮ ಮಗನಿಗೆ ಮೇ.31 ಮಹತ್ವದ ದಿನ!
ಹೌದು, ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವುದರಿಂದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೆಹಲಿಗೆ ತೆರಳಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಹೈಕಮಾಂಡ್ ಅಂಗಳಕ್ಕೆ ಹಾಕಿದೆ. ಈಗಾಗಲೇ 20 ಅಭ್ಯರ್ಥಿಗಳ ಶಾರ್ಟ್ ಲಿಸ್ಟ್ ರೆಡಿ ಆಗಿದ್ದು, ಹೈಕಮಾಂಡ್ನಿಂದಲೂ ಒಂದೆರೆಡು ಹೆಸರುಗಳು ಸೇರ್ಪಡೆಯಾಗುವ ಸಾಧ್ಯತೆ ಇದೆ. ಇದಾದ ನಂತರ ರಾಹುಲ್ ಗಾಂಧಿ ಜೊತೆ ಅಂತಿಮ ಚರ್ಚೆ ನಡೆಸಲಿದ್ದಾರೆ. ಜೂನ್ 1ರೊಳಗೆ ಬಹುತೇಕ ಪಟ್ಟಿ ಫೈನಲ್ ಆಗಲಿದೆ ಅಂತಾ ಹೇಳಲಾಗುತ್ತಿದೆ.
ಸಮುದಾಯವಾರು ಟಿಕೆಟ್ ನೀಡಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದು, ಲಿಂಗಾಯತ -1, ಒಕ್ಕಲಿಗ -1, ಹಿಂದುಳಿದ ವರ್ಗಕ್ಕೆ-2, ಮಹಿಳಾ ಕೋಟಾ -1, ಮುಸ್ಲಿಂ -1, ಕ್ರಿಶ್ಚಿಯನ್ -1, SC ಬಲ ಸಮುದಾಯಕ್ಕೆ ಒಂದರಂತೆ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ..
ವಿಧಾನಸಭೆಯಿಂದ ವಿಧಾನ ಪರಿಷತ್ ಚುನಾವಣೆಗೆ ಮೂರು ಪಕ್ಷಗಳಿಂದ ಇನ್ನೂ ಇಲ್ಲ ಅಭ್ಯರ್ಥಿ ಗಳ ಆಯ್ಕೆ ಆಗಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನಲ್ಲಿ ಆಕಾಂಕ್ಷಿಗಳು ಜೋರಾಗಿದ್ದು, ಆಕಾಂಕ್ಷಿಗಳ ಹೆಚ್ಚಾಗಿದ್ದರಿಂದ ಆಯ್ಕೆಯಲ್ಲಿ ನಾಯಕರು ನಿರತರಾಗಿದ್ದಾರಂತೆ. ಜೆಡಿಎಸ್ ನ ಒಂದು ಸ್ಥಾನಕ್ಕೆ ನಾಲ್ಕಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಲಾಭಿ ನಡೆಸಿದ್ದು, ಜವರಾಯೀಗೌಡ, ಬಿಎಂ ಫಾರೂಕ್, ರಮೇಶ್ ಗೌಡ, ಕುಪೇಂದ್ರ ನಡುವೆ ಫೈಟ್ ಏರ್ಪಟ್ಟಿದೆ.
ಇತ್ತ ಬಿಜೆಪಿ ಯಲ್ಲಿ ರಾಜ್ಯ ನಾಯಕರಿಂದ ಸಂಭಾವ್ಯ ಅಭ್ಯರ್ಥಿ ಗಳ ಹೆಸರನ್ನು ದೆಹಲಿಗೆ ಕಳುಹಿಸಿದ್ದು, ಬಿಜೆಪಿ ಹೈಕಮಾಂಡ್ ನಿಂದ ಅಭ್ಯರ್ಥಿ ಗಳ ಅಂತಿಮ ಆಯ್ಕೆ ಆಗಬೇಕಿದೆ. ಇತ್ತ ಆಡಳಿತರೂಢ ಕಾಂಗ್ರೆಸ್ ನಲ್ಲೂ 300ಕ್ಕೂ ಹೆಚ್ಚು ಆಕಾಂಕ್ಷಿಗಳು ಇರುವ ಕಾರಣ 20 ಅಭ್ಯರ್ಥಿ ಗಳ ಪಟ್ಟಿ ಫೈನಲ್ ಆಗಿದ್ದು, ದೆಹಲಿಯಲ್ಲೇ ಕಾಂಗ್ರೆಸ್ ನಾಯಕರು ಬೀಡು ಬಿಟ್ಟಿದ್ದಾರೆ.