ಕಾಂಗ್ರೆಸ್‌ ಎಂಎಲ್‌ಸಿ ಅಭ್ಯರ್ಥಿ ಆಯ್ಕೆಗೆ ದಿಲ್ಲಿಯಲ್ಲಿ ಸಿಎಂ, ಡಿಸಿಎಂ ಕಸರತ್ತು – ಪಕ್ಷದಲ್ಲಿ ಮುಂದುವರಿದ ಅಸಮಧಾನ!

ಕಾಂಗ್ರೆಸ್‌ ಎಂಎಲ್‌ಸಿ ಅಭ್ಯರ್ಥಿ ಆಯ್ಕೆಗೆ ದಿಲ್ಲಿಯಲ್ಲಿ ಸಿಎಂ, ಡಿಸಿಎಂ ಕಸರತ್ತು – ಪಕ್ಷದಲ್ಲಿ ಮುಂದುವರಿದ ಅಸಮಧಾನ!

ಕರ್ನಾಟಕದಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ ನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವುದೇ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ದಿಲ್ಲಿ ಹೈಕಮಾಂಡ್ ಜೊತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಿರಂತರ ಸಭೆಗಳನ್ನು ನಡೆಸುತ್ತಿದ್ದರೂ ಸಮಸ್ಯೆ ಬಗೆಹರಿದಿಲ್ಲ.

ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ವಿಡಿಯೋ ರಿಲೀಸ್‌ ಮಾಡಿದ್ದು ಎಲ್ಲಿಂದ? – ಸಿಕ್ಕೇ ಬಿಡ್ತು ಮಹತ್ವದ ಮಾಹಿತಿ!

ಪಕ್ಷಕ್ಕೆ ಖಾತ್ರಿ ಇರುವ 7 ಸ್ಥಾನಕ್ಕೆ ನೂರಾರು ಆಕಾಂಕ್ಷಿಗಳು ಜಾತಿ, ಧರ್ಮ, ಪ್ರದೇಶದ ಜತೆಗೆ, ನಾಯಕರ ಕೋಟಾದಲ್ಲಿಅವಕಾಶಕ್ಕಾಗಿ ಒತ್ತಡ ತಂತ್ರದಲ್ಲಿ ತೊಡಗಿದ್ದಾರೆ. ಮುಖಂಡರ ಈ ಒತ್ತಡದಿಂದ ತಪ್ಪಿಸಿಕೊಳ್ಳುವ ಜತೆಗೆ, ಅವಕಾಶ ಸಿಗದವರ ಆಕ್ರೋಶಕ್ಕೆ ಗುರಿಯಾಗುವುದನ್ನು ತಪ್ಪಿಸಿಕೊಳ್ಳಲು ಹೈಕಮಾಂಡ್‌ ತೀರ್ಮಾನ ಎಂಬ ಸಂದೇಶ ನೀಡಲು ಸಿಎಂ ಮತ್ತು ಡಿಸಿಎಂ ಇಬ್ಬರೂ ಮುಂದಾಗಿದ್ದಾರೆ. ಹೀಗಾಗಿ ಎಐಸಿಸಿ ಅಧ್ಯಕ್ಷರ ಜತೆ ಸಮಾಲೋಚನೆ ಬಳಿಕ ಸಿದ್ಧವಾಗುವ ಪಟ್ಟಿಗೆ ಎಐಸಿಸಿ ನಾಯಕ ರಾಹುಲ್‌ಗಾಂಧಿ ಸಹಮತಿ ಪಡೆದು ಪ್ರಕಟಿಸುವ ನಿರೀಕ್ಷೆ ಇದೆ ಅಂತ ಹೇಳಲಾಗುತ್ತಿದೆ.

ಸಿಎಂ, ಡಿಸಿಎಂ ವಿರುದ್ಧ ಪರಮೇಶ್ವರ್‌ ಗರಂ

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ನಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವ ಮಧ್ಯೆಯೇ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಪಕ್ಷದ ಹಿರಿಯ ನಾಯಕರಲ್ಲೇ ಅಸಮಾಧಾನ ಕಂಡುಬಂದಿದೆ. ಪರಿಷತ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಬಳಿ ಸಲಹೆಯನ್ನೂ ಕೇಳಿಲ್ಲಅಂತ ಗೃಹ ಸಚಿವ ಜಿ ಪರಮೇಶ್ವರ  ಅಸಮಾಧಾನ ತೋಡಿಕೊಂಡಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ನಮ್ಮ ಸಲಹೆಯನ್ನೂ ಕೇಳಿಲ್ಲ. 7 ಸ್ಥಾನಕ್ಕೆ ಎಷ್ಟು ಅರ್ಜಿಗಳು ಬಂದಿವೆ ಎಂಬುದು ನನಗೆ ಗೊತ್ತಿಲ್ಲ. ಮೊದಲೇ ಹೈಪವರ್ ಕಮಿಟಿ ಮಾಡಿ ಸಲಹೆ ಪಡೆಯಬೇಕಿತ್ತು. ಇವಾಗ ಕಾಲ ಮೀರಿ ಹೋಗಿದೆ ಎಂದು ಅವರು ಹೇಳಿದ್ದಾರೆ.

Shwetha M