ಕಾಂಗ್ರೆಸ್‌ನಿಂದ ರಾಜೀವ್​ ಗೌಡ ಅಮಾನತ್ತು – ಶಿಸ್ತುಪಾಲನಾ ಸಮಿತಿಯಿಂದ ತೀರ್ಮಾನ

ಕಾಂಗ್ರೆಸ್‌ನಿಂದ ರಾಜೀವ್​ ಗೌಡ ಅಮಾನತ್ತು –  ಶಿಸ್ತುಪಾಲನಾ ಸಮಿತಿಯಿಂದ ತೀರ್ಮಾನ

ಶಿಡ್ಲಘಟ್ಟ ಪೌರಾಯುಕ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದ ರಾಜೀವ್​ ಗೌಡನನ್ನು ಕಾಂಗ್ರೆಸ್​ ಪಕ್ಷದಿಂದ ಅಮಾನತು ಮಾಡಲಾಗಿದೆ. ಬ್ಯಾನರ್​​​ ವಿಚಾರವಾಗಿ ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ಫೋನ್​ನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದ ಕಾಂಗ್ರೆಸ್​ ಮುಖಂಡ ರಾಜೀವ್​ ಗೌಡ ಕೊನೆಗೂ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ ಅಮಾನತು ಮಾಡಿ ಆದೇಶ ಹೊರಡಿಸಿದೆ.

ಇನ್ನು ರಾಜೀವ್​ ಗೌಡ ಕಾಂಗ್ರೆಸ್​ ಪಕ್ಷದಿಂದ ಅಮಾನತು ವಿಚಾರವಾಗ ಸಚಿವ ಎಂ,ಸಿ ಸುಧಾಕರ್ ಮಾತನಾಡಿದ್ದು, ರಾಜೀವ್​ ಗೌಡನನ್ನು ಇಂದಲ್ಲ, ನಾಳೆ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಜನವರಿ 12ರ ಸಂಜೆ ನಡೆದ ದೂರವಾಣಿ ಕರೆಯ ಆಡಿಯೋ, ಈ ಆಡಿಯೋದಿಂದ ಅಧಿಕಾರಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿತ್ತು, ಅದನ್ನ ನಿವಾರಣೆಗೆ ನಾವು ಕಠಿಣ ಕ್ರಮ ತೆಗೆದು ಕೊಳ್ತೇವೆ ಎಂದಿದ್ದೆವು ಎಂದು ಹೇಳಿದರು.

ಇದನ್ನೂ ಓದಿ: ಪ್ರಜ್ವಲ್‌ ಪೆನ್‌ಡ್ರೈವ್ ಕೇಸ್ ಬೇಧಿಸಿದ ಪೊಲೀಸರಿಗೆ ಬಂಪರ್ ಬಹುಮಾನ

ರಾಜೀವ್​ ಗೌಡಗೆ ನಮ್ಮ ಪಕ್ಷ ಕಾರಣ ಕೇಳಿ ನೋಟಿಸ್ ಕೊಟ್ಟಿತ್ತು, ಆದ್ರೆ ಅವರು ಉತ್ತರ ಕೊಡದ ಹಿನ್ನೆಲೆ ಅಮಾನತು ಮಾಡಲಾಗಿದೆ, ಮುನಿಯಪ್ಪನವರು ಸಂಪೂರ್ಣವಾಗಿ ಅವರ ಪರ ಇದ್ದಾರೆ ಎಂದಲ್ಲ, ಬಹಳ ಸೌಮ್ಯ ಸ್ವಭಾವದವನಾಗಿದ್ದ ಹೀಗೆ ಮಾತಾಡಿದ್ದು ಆಶ್ಚರ್ಯ ತಂದಿದೆ ಎಂದು ಅವರು ಹೇಳಿದ್ರು, ತಪ್ಪು ಎಂದೆ ಅವರೂ ಹೇಳಿದ್ರು, ನಾನು ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರನ್ನ ಇಂದಲ್ಲ ನಾಳೆ ಬಂದಿಸುತ್ತೇವೆ ಎಂದು ಸಚಿವ ಎಂ ಸಿ ಸುಧಾಕರ್​ ತಿಳಿಸಿದರು.

ಕಾಂಗ್ರೆಸ್​​ ಪಕ್ಷದಿಂದ ಅಮಾನತು ಆಗಿರುವ ರಾಜೀವ್​ ಗೌಡ ವಿರುದ್ಧ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾದ್ಯಕ್ಷ ಕೋಡಿ‌ಹಳ್ಳಿ ಚಂದ್ರಶೇಖರ್ ಗರಂ ಆಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿರುವ ಅವರು, ಕೆಳವರ್ಗದ ಅಧಿಕಾರಿ ಇರಲಿ ಮೇಲ್ವರ್ಗದ ಅಧಿಕಾರಿ ಇರಲಿ ಸೇವಾ ಮನೋಭಾವ ಇರಬೇಕು, ರಾಜಕೀಯದಲ್ಲಿ ಇರುವ ವ್ಯಕ್ತಿತಯ ನಡೆ ನುಡಿ ಶಿಸ್ತಿನಿಂ ಇರಬೇಕು‌ ಎಂದು ರಾಜೀವ್​ ಗೌಡ ವಿರುದ್ಧ ಕಿಡಿಕಾರಿದರು.

 

Kishor KV