ಸಿದ್ದು, ಡಿಕೆಶಿ ಪ್ರಮಾಣವಚನ – ಕಂಠೀರವ ಕ್ರೀಡಾಂಗಣದ ಬಳಿ ನೂಕುನುಗ್ಗಲು, ಲಘು ಲಾಠಿ ಚಾರ್ಚ್​​

ಸಿದ್ದು, ಡಿಕೆಶಿ ಪ್ರಮಾಣವಚನ – ಕಂಠೀರವ ಕ್ರೀಡಾಂಗಣದ ಬಳಿ ನೂಕುನುಗ್ಗಲು, ಲಘು ಲಾಠಿ ಚಾರ್ಚ್​​

ಬೆಂಗಳೂರು: ರಾಜ್ಯದ 31ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತಿಯಾಗಿ ಡಿ.ಕೆ ಶಿವಕುಮಾರ್‌ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಶನಿವಾರ ಮಧ್ಯಾಹ್ನ 12. 30 ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ.

ಇದನ್ನೂ ಓದಿ: ಸಿದ್ದು, ಡಿಕೆಶಿ ಪಟ್ಟಾಭಿಷೇಕಕ್ಕೆ ಕ್ಷಣಗಣನೆ – ಪ್ರಮಾಣವಚನ ಬೋಧನೆಗೆ ಸಕಲ ಸಿದ್ಧತೆ

ಪದಗ್ರಹಣ ಸಮಾರಂಭಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಇದೀಗ ಕ್ರೀಡಾಂಗಣದ ಸಾರ್ವಜನಿಕ ಪ್ರವೇಶ ದ್ವಾರದಲ್ಲಿ ಕಾರ್ಯಕರ್ತರ ನಡುವೆ ನೂಕುನುಗ್ಗಲು ಉಂಟಾಗಿದ್ದು, ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ.  ಇಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ನೂಕು ನುಗ್ಗಲಾಗುತ್ತಿದ್ದಂತೆ ಪೊಲೀಸರು ಇನ್ನು ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸರಿಗೂ ಗಾಯಗಳಾಗಿವೆ. ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಎಂ ಪದಗ್ರಹಣ ಸಮಾರಂಭಕ್ಕೆ ವಿವಿಐಪಿ, ವಿಐಪಿಗಳಿಗೆ ಆರ್ ಆರ್ಎಂಆರ್ ರೋಡ್ ಮೂಲಕ ಎಂಟ್ರಿ ನೀಡಲಾಗುತ್ತಿದೆ. ಇದೀಗ  ಪಾಸ್ ಇಲ್ಲದವರನ್ನು ಪೊಲೀಸರು ವಾಪಸ್ ‌ಕಳುಹಿಸುತ್ತಿದ್ದಾರೆ. ವಿಐಪಿ, ವಿವಿಐಪಿ ಪಾಸ್ ಇದ್ದವರಿಗೆ ಮಾತ್ರ ಗೇಟ್ – 5 ರಲ್ಲಿ ಸಮಾರಂಭ ವೀಕ್ಷಿಸಲು ಅವಕಾಶ ನೀಡಲಾಗುತ್ತಿದ್ದು, ಪ್ರತಿಯೊಬ್ಬರನ್ನೂ ತಪಾಸಣೆ ಮಾಡಿ ಒಳಗೆ ಬಿಡಲಾಗುತ್ತಿದೆ.

suddiyaana