ಸಿಎಂ ಕುರ್ಚಿ  ಬಿಟ್ಟು ಕೊಡ್ತಾರಾ ಸಿದ್ದರಾಮಯ್ಯ? –  ಮುಖ್ಯಮಂತ್ರಿ ಮಾತಿನ ಅರ್ಥವೇನು?

ಸಿಎಂ ಕುರ್ಚಿ  ಬಿಟ್ಟು ಕೊಡ್ತಾರಾ ಸಿದ್ದರಾಮಯ್ಯ? –  ಮುಖ್ಯಮಂತ್ರಿ ಮಾತಿನ ಅರ್ಥವೇನು?

ಮುಡಾ ಹಗರಣದ ಸಂಕಷ್ಟ, ಅಧಿಕಾರ ಹಂಚಿಕೆ ಗುಸು ಗುಸು ನಡುವೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಒಂದು ಹೇಳಿಕೆ ರಾಜ್ಯಕೀಯ ವಲಯದಲ್ಲಿ ಹಲ್‌ಚಲ್ ಎಬ್ಬಿಸಿದ್ದು, ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ:ಒಬ್ಬರಿಗೆ ಆಟ ಅರ್ಥ ಆಗಿಲ್ಲ.. ಮತ್ತೊಬ್ಬರಿಗೆ ಬಿಗ್‌ ಬಾಸ್‌ ಮೇಲೆ ರೆಸ್ಪೆಕ್ಟ್​ ಇಲ್ಲ! – ತ್ರಿಮೋಕ್ಷಿಗೆ ಕಿಚ್ಚನ ಕ್ಲಾಸ್?‌

ಸಿಎಂ ಸಿದ್ದರಾಮಯ್ಯ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ. ಚಾಮರಾಜನಗರ ಜಿಲ್ಲೆಯ ಸತ್ತೇಗಾಲದಲ್ಲಿ ಹಳೆ ವಿದ್ಯಾರ್ಥಿಗಳೇ ನಿರ್ಮಿಸಿಕೊಟ್ಟ ಸುಸಜ್ಜಿತ ಸರ್ಕಾರಿ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎಂದು ಹೇಳಿದ್ದಾರೆ. ಮುಡಾ ಹಗರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಹಾಗೂ ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಸಿಎಂ ನೀಡಿರುವ  ಹೇಳಿಕೆ ಕುತೂಹಲಕ್ಕೆ ಕಾರಣವಾಗಿದೆ. ನಾನು ರಾಜಕೀಯದ ಕೊನೆಗಾಲದಲ್ಲಿದ್ದೇನೆ ಎನ್ನುವ ಮೂಲಕ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದರು. ಕಾರ್ಯಕರ್ತನೊಬ್ಬ ನೀವು ಮೊತ್ತೊಮ್ಮೆ ಸಿಎಂ ಆಗಿ ಎಂದು ಹೇಳಿದಾಗ. ಅದಕ್ಕೆ ಉತ್ತರ ಕೊಟ್ಟ ಸಿಎಂ ನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನಯ್ಯ ಅಂದಿದ್ದಾರೆ. ಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ ಎಂದಿದ್ದಾರೆ..

ಸಿಎಂ ಕುರ್ಚಿ ಬಿಡುವ ಹಿಂಟ್ ಕೊಟ್ರಾ ಸಿದ್ದರಾಮಯ್ಯ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಸಿದ್ದರಾಮಯ್ಯ ಸಿಎಂ ಆಗಿ ಒಂದೂವರೆ ವರ್ಷ ಅಷ್ಟೇ ಆಗಿದ್ದು, ಇನ್ನೂ ಮೂರುವರೆ ವರ್ಷ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ನಾನು ಈಗ ರಾಜಕೀಯದ ಕೊನೆಗಾಲದಲ್ಲಿ ಇದ್ದೇನೆ ಅಂದಿದ್ದಾರೆ. ಅಂದ್ರೆ ಕಾಂಗ್ರೆಸ್ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಕೇಳುತ್ತಿರುವ ಮಾತಿಗೆ ಸಿದ್ದರಾಮಯ್ಯ ಮಾತು ಮತ್ತಷ್ಟು ಪುಷ್ಠಿ ನೀಡಿದೆ. ಸಿದ್ದರಾಮಯ್ಯ ಕುರ್ಚಿ ಬಿಡೋದು ಪಕ್ಕಾ, ಸಿಎಂ ಬದಲಾಗುವುದು ಕೂಡ ಪಕ್ಕಾ ಅನ್ನೋ ಮಾತು ಕೇಳಿ ಬರ್ತಿದೆ.

ಚಾಮರಾಜನಗರಕ್ಕೆ ಬಂದಾಗಲೆಲ್ಲ ಸಿಎಂ ಕುರ್ಚಿ ಗಟ್ಟಿಯಾಗಿದೆ

ಚಾಮರಾಜನಗರಕ್ಕೆ ಹೋದರೆ ಅಧಿಕಾರ ಕಳೆದುಕೊಳ್ಳುತ್ತೀರಿ ಎಂದಿದ್ದರು. J H .ಪಟೇಲರಿಗೆ ಆಗಿನ ಕೆಲ ಶಾಸಕರು ಹೇಳಿದ್ದರು. ಪಾಪ ಆಗಿನಿಂದ ಆ ಕಳಂಕ ಚಾಮರಾಜನಗರ ಮೇಲಿದೆ. ನಾನು 2ನೇ ಬಾರಿ ಮುಖ್ಯಮಂತ್ರಿಯಾಗಿ ಚಾಮರಾಜನಗರಕ್ಕೆ ಬಂದಿದ್ದೇನೆ. ಈ ಮೂಢನಂಬಿಕೆಯನ್ನು ಅವರು ನಂಬಿರಲಿಲ್ಲ, ನಾನೂ ನಂಬಲಿಲ್ಲ ಎಂದರು. ಚಾಮರಾಜನಗರಕ್ಕೆ ಬಂದು ಹೊಸ ಜಿಲ್ಲೆ ಗೋಷಣೆ ಮಾಡಿದ್ದೆವು. ಆಗ ನಾನು ಉಪ ಮುಖ್ಯಮಂತ್ರಿಯಾಗಿದ್ದೆ. ನಾವು ಚಾಮರಾಜನಗರಕ್ಕೆ ಬಂದು ಜಿಲ್ಲೆಯನ್ನು ಘೋಷಣೆ ಮಾಡಿದ್ದು. ನಾನು ಏನಿಲ್ಲ ಅಂದರೂ 20 ಬಾರಿ ಚಾಮರಾಜನಗರಕ್ಕೆ ಬಂದಿದ್ದೇನೆ. ನಾನು ಚಾಮರಾಜನಗರಕ್ಕೆ ಬಂದಾಗಲೆಲ್ಲ ಅಧಿಕಾರ ಕಳೆದುಕೊಳ್ಳುವ ಬದಲು ಸಿಎಂ ಕುರ್ಚಿ ಗಟ್ಟಿಯಾಗಿದೆ ಎಂದರು. ಆದ್ರೆ ಚಾಮರಾಜನಗರದಲ್ಲೇ ರಾಜಕೀಯ ಕೊನೆಗಾಲದಲ್ಲಿ ಇದ್ದೇನೆ ಅಂದಿದ್ದು ಯಾಕೆ ಅನ್ನೋ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ.

Shwetha M