ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 5 ಕೋಟಿ.. ರಾಷ್ಟ್ರೀಯ ಪದಕ ಗೆದ್ರೆ ₹7 ಲಕ್ಷ ಬಹುಮಾನ! – ಸಿಎಂ ಸಿದ್ದರಾಮಯ್ಯ ಘೋಷಣೆ!

ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ರೆ 5 ಕೋಟಿ.. ರಾಷ್ಟ್ರೀಯ ಪದಕ ಗೆದ್ರೆ ₹7 ಲಕ್ಷ ಬಹುಮಾನ! – ಸಿಎಂ ಸಿದ್ದರಾಮಯ್ಯ ಘೋಷಣೆ!

ರಾಜ್ಯದ ಕ್ರೀಡಾಪಟುಗಳಿಗೆ ಸಿಎಂ ಸಿದ್ಧರಾಮಯ್ಯ ಗುಡ್‌ನ್ಯೂಸ್‌ ಕೊಟ್ಟಿದ್ದಾರೆ.  ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ 5 ಕೋಟಿ ರೂ. ನೀಡಲಾಗುವುದು. ಬೆಳ್ಳಿ ಗೆದ್ದರೆ 3 ಕೋಟಿ ಹಾಗೂ ಕಂಚು ಗೆದ್ದವರಿಗೆ 2 ಕೋಟಿ ಹಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಇದನ್ನೂ ಓದಿ: ಕಿವಿಯಲ್ಲಿ ಗುಗ್ಗೆ ತುಂಬಿದೆ ಎಂದು ಬಡ್ಸ್‌ ಹಾಕ್ತೀರಾ? – ಎಚ್ಚರ.. ಈ ತಪ್ಪು ಮಾಡಿದ್ರೆ ಕಿವಿಗೆ ಆಪತ್ತು ಫಿಕ್ಸ್!

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಒಲಂಪಿಕ್ಸ್‌ನಲ್ಲಿ ಭಾಗವಹಿಸುವವರಿಗೆ ಟ್ರೇನಿಂಗ್ ಕೊಡ್ತೇವೆ. 60 ಕ್ರೀಡಾಪಟುಗಳಿಗೆ ತರಬೇತಿಗಾಗಿ 10 ಲಕ್ಷ ರೂಪಾಯಿ ಕೊಡ್ತೇವೆ. ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದವರಿಗೆ ಐದು ಕೋಟಿ, ಬೆಳ್ಳಿ ಗೆದ್ದರೆ ಮೂರು ಕೋಟಿ, ಕಂಚು ಗೆದ್ದರೆ ಎರಡು ಕೋಟಿ‌ ಕೊಡ್ತೇವೆ. ಕ್ರೀಡಾಪಟುಗಳಿಗೆ ನೇರವಾಗಿ ಅವರ ಅಕೌಂಟ್‌ಗೆ ವರ್ಗಾವಣೆ ಮಾಡ್ತೇವೆ. ಗೆದ್ದ ಖುಷಿ ಮುಂದೆ ಯಾವುದೂ ಇಲ್ಲ. ನಾನು ಇವತ್ತಿನ ವರೆಗೂ ಕ್ರೀಡಾಪಟುಗಳಿಗೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೀನಿ ಎಂದು ಹೇಳಿದ್ದಾರೆ.

ಉತ್ತರಾಖಂಡದಲ್ಲಿ 38 ರಾಷ್ಟ್ರೀಯ ಕ್ರೀಡಾಕೂಟ ನೆರವೇರಿತ್ತು. ಈ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಐದನೇ ಸ್ಥಾನ ಗಳಿಸಿದೆ. 34 ಚಿನ್ನ, 18 ಬೆಳ್ಳಿ, 28 ಕಂಚಿನ ಪದಕಗಳು ಬಂದಿವೆ. ರಾಜ್ಯದ ವತಿಯಿಂದ ಸಿಎಂ ಆಗಿ ಅಭಿನಂದನೆ ಸಲ್ಲಿಸುತ್ತೇನೆ. ಮುಂದಿನ ಕ್ರೀಡಾಕೂಟದಲ್ಲಿ ನಮ್ಮ ರಾಜ್ಯ ಒಂದನೇ ಸ್ಥಾನಕ್ಕೆ ಬರಲಿ ಎಂದು ಆಶಿಸಿದರು. 2015 ರಲ್ಲಿ ಸಿಎಂ ಆಗಿದ್ದಾಗ ಚಿನ್ನ ಪದಕ ವಿಜೇತರಿಗೆ 5 ಲಕ್ಷ, ಬೆಳ್ಳಿ ವಿಜೇತರಿಗೆ 3 ಲಕ್ಷ, ಕಂಚು ಪದಕ ವಿಜೇತರಿಗೆ 2 ಲಕ್ಷ ರೂಪಾಯಿ ಕೊಡಲು ಘೋಷಿಸಿದ್ದೆ. ಮುಂದಿನ ಬಾರಿಯಿಂದ ಚಿನ್ನ ಗೆದ್ದವರಿಗೆ 7 ಲಕ್ಷ ರೂಪಾಯಿ‌ ಕೊಡ್ತೇವೆ. ಬೆಳ್ಳಿ ಗೆದ್ದವರಿಗೆ 5 ಲಕ್ಷ ರೂಪಾಯಿ ಕೊಡ್ತೇವೆ. ಕಂಚು ಗೆದ್ದವರಿಗೆ 3 ಲಕ್ಷ ರೂಪಾಯಿ ಕೊಡ್ತೇವೆ ಎಂದು ತಿಳಿಸಿದರು. ಪ್ರತಿ ಮೆಡಲಿಸ್ಟ್‌, ಕೋಚ್, ಮ್ಯಾನೇಜರ್‌ಗೂ ನಗದು ಬಹುಮಾನ ಕೊಡ್ತೇನೆ. ಕ್ರೀಡಾ ಇಲಾಖೆ ಏನು ಕೇಳಿದ್ರೂ ಕೊಟ್ಟಿದ್ದೇನೆ. ಮುಂದೆಯೂ ಕೊಡ್ತೇನೆ. ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಜೊತೆಗೆ ಓದಲೂ ಬೇಕು ಎಂದು ಸಲಹೆ ನೀಡಿದರು.

Shwetha M