ನೆಕ್ಟ್ಸ್ ಸಿಎಂ ಸತೀಶ್ ಜಾರಕಿಹೊಳಿ ಅಲ್ಲ ಮಲ್ಲಿಕಾರ್ಜುನ ಖರ್ಗೆ! – ಸ್ಪೋಟಕ ಹೇಳಿಕೆ ನೀಡಿದ ಯತ್ನಾಳ್!

ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ನವೆಂಬರ್ ಕ್ರಾಂತಿ ನಡೆಯುತ್ತೆ ಎಂದು ರಾಜಕೀಯ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಇದೀಗ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಸತೀಶ್ ಜಾರಕಿಹೊಳಿ, ಎಂ.ಬಿ.ಪಾಟೀಲ್ ಸೇರಿ ಯಾರೂ ಸಿಎಂ ಆಗಲ್ಲ. ನವೆಂಬರ್ ಕ್ರಾಂತಿಯಲ್ಲಿ ಬ್ಲ್ಯಾಕ್ ಹಾರ್ಸ್ ಬರ್ತದೆ, ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಶಾಸಕ ಯತ್ನಾಳ್ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ: ಬ್ರೇಕ್ಅಪ್ ಆಗಿದೆ.. ರಜೆ ಕೊಡಿ ಸಾರ್.. ಬಾಸ್ಗೆ ಇಮೇಲ್ ಕಳುಹಿಸಿದ ಉದ್ಯೋಗಿ!
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯತ್ನಾಳ್, ಇವತ್ತು ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿಯನ್ನು ಏನಾದರೂ ಮುಂದಿನ ಸಿಎಂ ಎಂದು ಹೇಳಿಬಿಡುತ್ತಾರೋ ಎಂದು ಎಂಬಿ ಪಾಟೀಲ್ ಸಿಎಂಗೆ ಹಾರ ಹಾಕುತ್ತಿದ್ದಾರೆ. ನಮಗೆ ಯಾರು ಸಿಎಂ ಆದರೂ ವಿರೋಧ ಇಲ್ಲ. ನೀವು ನೋಡುತ್ತಿರಿ, ಇವರ್ಯಾರೂ ಸಿಎಂ ಆಗಲ್ಲ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ತಿಳಿಸಿದರು.
ಯಾರೇ ಆಗಲಿ ಮತಾಂತರವಾದರೆ ಅವರಿಗೆ ಮೂಲ ಜಾತಿಯ ಮೀಸಲಾತಿ ಸಿಗಬಾರದು. ಭ್ರಷ್ಟ ರಾಜಕಾರಣಿಗಳು ಧರ್ಮ ಒಡೆದರೇ ವೋಟ್ ಬರುತ್ತೆ ಕಾಯುತ್ತಿದ್ದಾರೆ. ಕುರುಬ ಕ್ರಿಶ್ಚಿಯನ್ನರು, ಒಕ್ಕಲಿಗ ಕ್ರಿಶ್ಚಿಯನ್ನರು ಅಂತ ಎಲ್ಲಾದರೂ ಇದ್ದಾರಾ?, ನಾವು ಹಿಂದೂ ಲಿಂಗಾಯತ ಎಂದು ಬರೆಸುತ್ತಿದ್ದೇವೆ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಎಲ್ಲಿಯಾದರೂ ಇದೆಯಾ? ಎಂದು ಪ್ರಶ್ನಿಸಿದರು.

ನೋಡಿರಿ

