ಜಾತಿ ಗಣತಿ ಸಮೀಕ್ಷೆಗೆ ಹಿನ್ನಡೆಯಾಯ್ತಾ? – ಟಾರ್ಗೆಟ್‌ 20 ಲಕ್ಷ..  ನಡೆದಿದ್ದು 10 ಸಾವಿರ ಮಂದಿ ಗಣತಿ

ಜಾತಿ ಗಣತಿ ಸಮೀಕ್ಷೆಗೆ ಹಿನ್ನಡೆಯಾಯ್ತಾ? – ಟಾರ್ಗೆಟ್‌ 20 ಲಕ್ಷ..  ನಡೆದಿದ್ದು 10 ಸಾವಿರ ಮಂದಿ ಗಣತಿ

ಭಾರಿ ವಿರೋಧದ ನಡುವೆಯೂ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಸೋಮವಾರ ಆರಂಭವಾಗಿದೆ. ಬೆಳಗಾವಿ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ ಜಿಲ್ಲೆ ಸೇರಿದಂತೆ ರಾಜ್ಯದೆಲ್ಲಡೆ ಮೊದಲ ದಿನದ ಸಮೀಕ್ಷೆ ನಡೆಯಿತು. ಆದ್ರೆ ಈ ಸಮೀಕ್ಷೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟದ ಶಿವಾರ್ಚಕರು ನಿಧನ – ಮಧ್ಯಾಹ್ನದ ತನಕ ತಾಯಿ ಚಾಮುಂಡೇಶ್ವರಿ ದರ್ಶನ ಇಲ್ಲ

ಸೋಮವಾರ ರಾಜ್ಯದಲ್ಲಿ ಜಾತಿಗಣತಿ ಆರಂಭವಾಗಿದೆ. ರಾಜಧಾನಿ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಆರಂಭಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನೀರಸ ಆರಂಭಗೊಂಡಿದೆ. ಪ್ರತಿ ದಿನ 20 ಲಕ್ಷ ಜನರ ಸಮೀಕ್ಷೆ ಮಾಡಬೇಕೆಂದು ಗುರಿಯನ್ನು ಹಾಕಲಾಗಿದೆ. ಆದ್ರೆ ಮೊದಲ ದಿನ ಕೇವಲ 10 ಸಾವಿರ ಮಂದಿಯ ಸಮೀಕ್ಷೆ ನಡೆಸಲಾಗಿದೆ. ಸೋಮವಾರ 2,765 ಕುಟುಂಬಗಳ 10,642 ಮಂದಿಯ ಸಮೀಕ್ಷೆಯನ್ನ ಮಾತ್ರ ಮಾಡಲಾಗಿದೆ.

ಗಣತಿದಾರರಿಗೆ ಆ್ಯಪ್ ಬಗ್ಗೆ ಅಪೂರ್ಣ ಮಾಹಿತಿ, ಇಂಟರ್‌ನೆಟ್‌ ಇಲ್ಲದ ಕಡೆ ಸಮೀಕ್ಷೆಗೆ ಬಳಸುವ ಆ್ಯಪ್ ಕೆಲಸ ಮಾಡದೇ ಇರುವುದು, ಕೆಲವು ಕಡೆ ಕಿಟ್‌ಗಳು ಸಂಜೆ ವೇಳೆ ಸಿಬ್ಬಂದಿಯ ಕೈ ಸೇರಿದ್ದು, ಇನ್ನು ಕೆಲವರಿಗೆ ಕಿಟ್‌ ಸಿಕ್ಕಿದರೂ ಮೊಬೈಲ್ ನೆಟ್ವರ್ಕ್ ಕೈಕೊಟ್ಟಿದ್ದರಿಂದ ಮೊದಲ ದಿನ ಕಡಿಮೆ ಸಂಖ್ಯೆಯ ಜನರನ್ನು ಮಾತ್ರ ಗಣತಿ ಮಾಡಲಾಗಿದೆ. ಇಂಟರ್ನೆಟ್ ಇಲ್ಲದೆಡೆ ಆ್ಯಪ್ ಕೆಲಸ ನಿರ್ವಹಿಸದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಸಿದ್ಧತೆ ನಡೆಸಿದೆ.

Shwetha M