ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಸ್ಫೋಟ – ರಾಜೀನಾಮೆ ಬೆದರಿಕೆ ಅಸ್ತ್ರಕ್ಕೆ ಹೈಕಮಾಂಡ್ ವಾರ್ನಿಂಗ್

ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಸ್ಫೋಟ – ರಾಜೀನಾಮೆ ಬೆದರಿಕೆ ಅಸ್ತ್ರಕ್ಕೆ ಹೈಕಮಾಂಡ್ ವಾರ್ನಿಂಗ್

ಹೊಸ ಸಚಿವರ 20 ಜನರ ಹೆಸರನ್ನು ಒಳಗೊಂಡ ಪಟ್ಟಿ ಹೈಕಮಾಂಡ್​​ನಿಂದ ಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್​​ನಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಕೆಲ ಶಾಸಕರು ರಾಜೀನಾಮೆ ನೀಡೋದಾಗಿ ಅದಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಪಕ್ಷದ ಶಾಸಕ ರಾಜೀನಾಮೆ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ವರಿಷ್ಠರು, ಸಿಎಂ ಡಿ.ಕೆ.ಶಿವಕುಮಾರ್​​ಗೆ ಕರೆ ಮಾಡಿ ಈ ಬಗ್ಗೆ ವಿವರ ಕೇಳಿದ್ದಾರೆ ಎನ್ನಲಾಗಿದೆ.

ರಾಜೀನಾಮೆ ಬೆದರಿಕೆ ಹಾಕಿರುವ ಶಾಸಕರ ಕುರಿತು ವರಿಷ್ಠರು ವಿವರಣೆ ಕೇಳಿದ್ದು, ಸಚಿವ ಸ್ಥಾನ ಸಿಗದಿದ್ದವರಿಗೆ ನಿಗಮ ಮಂಡಳಿ ಕೊಡುತ್ತೇವೆ. ಅದನ್ನೂ ಮೀರಿ ರಾಜೀನಾಮೆ ನೀಡಿದರೆ ಅಂಗೀಕರಿಸಿ ಎಂದಿ ಸಿಎಂ ಡಿಕೆಶಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ನೂತನ ಸಚಿವರ ಪ್ರಮಾಣವಚನಕ್ಕು ಮುನ್ನವೇ ವರಿಷ್ಠರ ತೀರ್ಮಾನದ ಬಗ್ಗೆ ಕೆಲ ಕಾಂಗ್ರೆಸಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಡುವೆಯೇ ಹೈಕಮಾಂಡ್​​ನ ಈ ಸೂಚನೆ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಭಾರತಕ್ಕಿಲ್ಲ ಬೌಲಿಂಗ್ ಬ್ರಹ್ಮಾಸ್ತ್ರ – ಲಂಕಾ ಟೆಸ್ಟ್ ನಿಂದ ಜಸ್ಪ್ರೀತ್ ಬುಮ್ರಾ ಔಟ್

ಮಂತ್ರಿಗಿರಿ ಸಿಗದ್ದಕ್ಕೆ ಮುನಿಸಿಕೊಂಡಿರುವ ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಸ್ಪೀಕರ್​ ರುದ್ರಪ್ಪ ಲಮಾಣಿಗೆ ರಾಜೀನಾಮೆ ಪತ್ರವನ್ನು ಅವರು ಸಲ್ಲಿಕೆ ಮಾಡಿದ್ದರೆ, ಇತ್ತ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಳೆ (ಆಗಸ್ಟ್ 4) ಬೆಳಗ್ಗೆ 10 ಗಂಟೆಗೆ ಶಾಸಕ ಸ್ಥಾನ ಹಾಗೂ ನಿಗಮ ಮಂಡಳಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದವರು ಘೋಷಿಸಿದ್ದಾರೆ. ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಭದ್ರಾವತಿ ಎಂಎಲ್​​ಎ ಸಂಗಮೇಶ್​, 30-40 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಗರು 50 ಕೋಟಿ ಕೊಡ್ತೀನಿ ಅಂದ್ರೂ ಹೋಗಿಲ್ಲ. ಆದರೆ ಮಂತ್ರಿ ಮಾಡ್ತೀವಿ ಎಂದು ಹೇಳಿ ಮೋಸ ಮಾಡಿದ್ದಾರೆ. 136 ಸ್ಥಾನ ಇದೆ ಅಂತಾ ಕಾಂಗ್ರೆಸ್​ಗೆ ಹಮ್ಮು ಬಂದಿದೆ. ನಾಳೆ ನನ್ನ ಕ್ಷೇತ್ರದ ಜನರ ಜೊತೆಗೆ ಸಭೆ ನಡೆಸುತ್ತೇನೆ. ಕ್ಷೇತ್ರದ ಜನ ಹೇಳಿದ್ರೆ ನಾನು ರಾಜೀನಾಮೆ ಕೊಡ್ತೇನೆ ಎಂದವರು ತಿಳಿಸಿದ್ದಾರೆ.

Kishor KV

Leave a Reply

Your email address will not be published. Required fields are marked *