ನಂದಿನ ಹಾಲಿನ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ – ಆ. 1 ರಿಂದ 3 ರೂ. ಹೆಚ್ಚಳ

ನಂದಿನ ಹಾಲಿನ ದರ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ – ಆ. 1 ರಿಂದ 3 ರೂ. ಹೆಚ್ಚಳ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಲೀಟರ್‌ಗೆ ಮೂರು ರೂಪಾಯಿಗೆ ಹೆಚ್ಚಿಸಲು ಕರ್ನಾಟಕ ಸಚಿವ ಸಂಪುಟ ಅನುಮೋದನೆ ನೀಡಿದೆ. ಪರಿಷ್ಕೃತ ದರ ಇದೇ ಆಗಸ್ಟ್‌1 ರಿಂದ ಜಾರಿಗೆ ಬರಲಿದೆ.

ನಂದಿನಿ ಹಾಲಿನ ದರ ಹೆಚ್ಚಳ ಮಾಡಬೇಕೆಂದು ಕರ್ನಾಟಕ ಹಾಲು ಒಕ್ಕೂಟ ಕೆಲ ತಿಂಗಳಿನಿಂದ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತ್ತು. ಹಾಲಿನ ದರ ಹೆಚ್ಚಳದ ಬಗ್ಗೆ ಇತ್ತೀಚೆಗಷ್ಟೇ ಕೆಎಂಎಫ್​ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರು ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದರು. ಇದೀಗ ದರ ಹೆಚ್ಚಳ ಪ್ರಸ್ತಾವನೆಗೆ ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದ್ದು, ಆಗಸ್ಟ್‌ 1 ರಿಂದ ಹಾಲಿನ ಬೆಲೆ ಮೂರು ರೂಪಾಯಿ ಹೆಚ್ಚಳವಾಗಲಿದೆ.

ಇದನ್ನೂ ಓದಿ: ಪೌರ ಕಾರ್ಮಿಕ ಮಹಿಳೆಯರಿಗೆ ಒಲಿದ ಅದೃಷ್ಟ ಲಕ್ಷ್ಮೀ – ಲಾಟರಿಯಲ್ಲಿ 10 ಕೋಟಿ ಗೆದ್ದರು

ಹಾಲಿನ ದರ ಹೆಚ್ಚಳ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕರ್ನಾಟಕದಲ್ಲಿ ಕಡಿಮೆ ದರದಲ್ಲಿ ಹಾಲು ಮಾರಾಟವಾಗುತ್ತಿದೆ. ನಮ್ಮ ರಾಜ್ಯಕ್ಕೆ ಹೋಲಿಸಿದರೆ ಇತರ ರಾಜ್ಯಗಳಲ್ಲಿ ಹಾಲು ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ. ಪರಿಷ್ಕೃತ ದರ ಲೆಕ್ಕಾಚಾರದ ಪ್ರಕಾರ, ಲೀಟರ್‌ಗೆ 39 ರೂ. ಬೆಲೆಯ ಹಾಲು (ಟೋನ್ಡ್) ಆಗಸ್ಟ್ 1ರಿಂದ 42 ರೂ.ಗೆ ಮಾರಾಟವಾಗಲಿದೆ. ಉಳಿದಂತೆ ಲೀಟರ್‌ಗೆ 54 ರಿಂದ 56 ರೂ.ವರೆಗೆ ಮಾರಾಟವಾಗುತ್ತದೆ. ತಮಿಳುನಾಡಿನಲ್ಲಿ ಲೀಟರ್‌ ಹಾಲಿಗೆ 44 ರೂ.” ಎಂದು ಹೇಳಿದ್ದಾರೆ.

ಈ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, “ನಾವು ರೈತರಿಗೆ (ಹಾಲು ಉತ್ಪಾದಕರಿಗೆ) ಹಣವನ್ನು ನೀಡಬೇಕಾಗಿದೆ, ಇಂದು ಇಡೀ ದೇಶದಲ್ಲಿ ಇದು (ಟೋನ್ಡ್ ಹಾಲು) ಲೀಟರ್‌ಗೆ 56 ರೂ. ನಮ್ಮ ರಾಜ್ಯದಲ್ಲಿ ಜನರು ಪಡೆಯುತ್ತಿದ್ದಾರೆ. ಕಡಿಮೆ ಬೆಲೆ.” ರೈತರಿಗೆ ನೆರವಾಗುವ ಉದ್ದೇಶದಿಂದ ಹಾಲಿನ ದರವನ್ನು ಮೂರು ರೂಪಾಯಿಗಳಷ್ಟು ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ.

suddiyaana