ಕರ್ನಾಟಕ ಬುಲ್ಡೋಜರ್ಸ್ CCL ಚಾಂಪಿಯನ್- ಕಪ್ ಹಿಡಿದ ಕಿಚ್ಚನ ಭರ್ಜರಿ ಡ್ಯಾನ್ಸ್

ಕರ್ನಾಟಕ ಬುಲ್ಡೋಜರ್ಸ್ CCL ಚಾಂಪಿಯನ್- ಕಪ್ ಹಿಡಿದ ಕಿಚ್ಚನ ಭರ್ಜರಿ ಡ್ಯಾನ್ಸ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಫೈನಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಆಗಿದೆ. ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿದ ಕಿಚ್ಚ ಸುದೀಪ್ ಟೀಮ್ ಚಾಂಪಿಯನ್ ಆಗಿದೆ.

ಇದನ್ನೂ ಓದಿ: ಗಿಲ್ಲಿ ಹಣ ಇದ್ದವರನ್ನು ಮಾತ್ರ ಮೀಟ್‌ ಮಾಡೋದಾ? – ಬಿಗ್‌ಬಾಸ್‌ ವಿನ್ನರ್ ನಡೆಗೆ ಫ್ಯಾನ್ಸ್‌ ಗರಂ!

ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಈ ವರ್ಷದ ಸಿಸಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವನ್ನು ಸೋಲಿಸಿದೆ. ​ಫೆಬ್ರವರಿ 1ರಂದು ಕೊಯಮತ್ತೂರಿನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಕರ್ನಾಟಕ ಬುಲ್ಡೋಜರ್ಸ್ ತಂಡವು 12 ವರ್ಷಗಳ ನಂತರ 3ನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ವರ್ಷ ಕರ್ನಾಟಕ ಫಿನಾಲೆಗೆ ಏರಿದ್ದರೂ ಗೆಲುವು ಸಿಕ್ಕಿರಲಿಲ್ಲ. ಕರ್ನಾಟಕ ಬುಲ್ಡೋಜರ್ಸ್ ಈಗಾಗಲೆ ಎರಡು ಬಾರಿ ಚಾಂಪಿಯನ್ ಆಗಿತ್ತು. ಇದೀಗ 12 ವರ್ಷಗಳ ಬಳಿಕ ಮತ್ತೆ ಗೆದ್ದು ಮೂರನೇ ಬಾರಿ ಚಾಂಪಿಯನ್ ಎನಿಸಿಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಾಲ್ ಟೈಗರ್ಸ್ ತಂಡ, ಕರ್ನಾಟಕದ ಉತ್ತಮ ಬೌಲಿಂಗ್ ದಾಳಿಯ ಮುಂದೆ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾದವು. ಬೆಂಗಾಲ್ ಟೈಗರ್ಸ್ ತಂಡ 20 ಓವರ್​​​ಗಳಲ್ಲಿ ಗಳಿಸಿದ್ದು ಕೇವಲ 129 ರನ್ನುಗಳನ್ನಷ್ಟೆ. ಕರ್ನಾಟಕದ ಪರ ಉತ್ತಮ ಬೌಲಿಂಗ್ ಮಾಡಿದ ಪ್ರತಾಪ್ ಮೂರು ವಿಕೆಟ್ ಪಡೆದರೆ, ಸುನೀಲ್ ಎರಡು ವಿಕೆಟ್ ಗಳಿಸಿದರು.

ಸದಾ ತಮ್ಮ ಐಕಾನಿಕ್​ ಸ್ಟೈಲ್​ನಿಂದಲೇ ಹವಾ ಸೃಷ್ಟಿಸ್ತಿರೋ ಕಿಚ್ಚ ಸುದೀಪ್​ ಅವರು, ಇದೀಗ ತಮ್ಮ ತಂಡದ ಗೆಲುವನ್ನು ಭರ್ಜರಿ ಡಾನ್ಸ್​ ಮೂಲಕ ಸಂಭ್ರಮಿಸಿದ್ದಾರೆ. ವಿನ್ನರ್​ ಕಪ್ ತೆಗೆದುಕೊಳ್ಳಲು ಬಂದ ಕಿಚ್ಚ ಸುದೀಪ್, ಭರ್ಜರಿ ಡ್ಯಾನ್ಸ್ ಮಾಡಿ ಗಮನ ಸೆಳೆದರು.

Sulekha