ಗ್ಯಾರಂಟಿಗೆ ಗಿಫ್ಟ್.. ರೈತರಿಗೆ ಸಿಕ್ಕಿದೆಷ್ಟು? – ಸಾಲ ಬಡ್ಡಿ ಮನ್ನಾ ಮಾಡಿದ ಸಿದ್ದು!

ಗ್ಯಾರಂಟಿಗೆ ಗಿಫ್ಟ್.. ರೈತರಿಗೆ ಸಿಕ್ಕಿದೆಷ್ಟು? – ಸಾಲ ಬಡ್ಡಿ ಮನ್ನಾ ಮಾಡಿದ ಸಿದ್ದು!

ಗ್ಯಾರಂಟಿ ಯೋಜನೆಗಳ ಹೊರೆ. ಅಭಿವೃದ್ಧಿ ನಿರೀಕ್ಷೆ. ಮಧ್ಯಮವರ್ಗದ ಜನರ ಬವಣೆ. ಹೀಗೆ ಹತ್ತಾರು ನಿರೀಕ್ಷೆಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಾಖಲೆಯ 16ನೇ ಬಜೆಟ್ ಮಂಡಿಸಿದ್ದಾರೆ. ಮಂಡಿನೋವಿನ ಕಾರಣದಿಂದಾಗಿ ವ್ಹೀಲ್ ಚೇರ್​ನಲ್ಲೇ ವಿಧಾನಸೌಧಕ್ಕೆ ಬಂದ ಸಿದ್ದರಾಮಯ್ಯ ಆಯವ್ಯಯವನ್ನ ಜನರ ಮುಂದಿಟ್ಟಿದ್ದಾರೆ.

ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ಕರ್ನಾಟಕ ರಾಜ್ಯದ 7 ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎಂದಿರುವ ಸಿದ್ದರಾಮಯ್ಯ ಎಲ್ಲಾ ವರ್ಗಕ್ಕೂ ಹಣ ಹಂಚಿಕೆ ಮಾಡಿದ್ದಾರೆ. ಸಿಎಂ ಸಿದ್ದರಾಯಮ್ಮ 4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದಾರೆ. ಅದ್ರಲ್ಲಿ ಅತೀ ಹೆಚ್ಚು ಹಣವನ್ನ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟಿದ್ದಾರೆ.

ಗ್ಯಾರಂಟಿ ಯೋಜನೆಗಳಿಗೆ ಸಿಂಹಪಾಲು! 

  • 2025-26 ಸಾಲಿನಲ್ಲಿ ಪಂಚ ಗ್ಯಾರಂಟಿಗೆ 51,034 ಕೋಟಿ ರೂ‌. ಅನುದಾನ
  • ಶಿಕ್ಷಣ ಇಲಾಖೆ 45, 286 ಕೋಟಿ, ಇಂಧನ 26, 896 ಕೋಟಿ
  • ನೀರಾವರಿ 22,181 ಕೋಟಿ, ಆರೋಗ್ಯ 17, 473 ಕೋಟಿ
  • ಕಂದಾಯ 17, 201 ಕೋಟಿ, ಸಮಾಜ ಕಲ್ಯಾಣ 16, 955 ಕೋಟಿ
  • ವಕ್ಫ್ ಆಸ್ತಿಗಳ ದುರಸ್ತಿ- ನವೀಕರಣಕ್ಕೆ 150 ಕೋಟಿ ರೂ. ಮೀಸಲು
  • ಮೀನುಗಾರಿಕೆಗೆ ಸಂಬಂಧಿಸಿದ ರಸ್ತೆಗಳ ಅಭಿವೃದ್ಧಿಗೆ ₹30 ಕೋಟಿ ಮೀಸಲು
  • ಮಲ್ಟಿಫ್ಲೆಕ್ಸ್​ಗಳಲ್ಲಿ ಸಿನಿಮಾ ಟಿಕೆಟ್​ಗೆ 200 ರೂಪಾಯಿ ನಿಗದಿ
  • ಮೈಸೂರಿನಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣ
  • ಮಂಡ್ಯದಲ್ಲಿ ಕೃಷಿ ವಿಶ್ವ ವಿದ್ಯಾಲಯ ಸ್ಥಾಪನೆಗೆ 25 ಕೋಟಿ ಅನುದಾನ
  • ಬಜೆಟ್ ನಲ್ಲಿ ರೈತರಿಗೂ ಬಂಪರ್ ಗಿಫ್ಟ್ ಕೊಟ್ಟ ಸಿದ್ದರಾಮಯ್ಯ
  • ತೊಗರಿ ಬೆಳೆಗಾರರಿಗೆ ​450 ರೂ. ಪ್ರೋತ್ಸಾಹಧನ
  • ಕ್ವಿಂಟಾಲ್​​ಗೆ 7,550 ರೂ. ಜೊತೆ ರಾಜ್ಯ ಸರ್ಕಾರದಿಂದ 450 ರೂ. ಪ್ರೋತ್ಸಾಹಧನ
  • ತೊಗರಿ ಬೆಳೆಗೆ ನೂತನ ತಂತ್ರಜ್ಞಾನಗಳನ್ನು ಪರಿಚಯಿಸಲು ₹88 ಕೋಟಿ
  • ಜಾನುವಾರು ಆಕಸ್ಮಿಕ ಸಾವಿಗೆ 10 ಸಾವಿರದಿಂದ 15 ಸಾವಿರಕ್ಕೆ ಪರಿಹಾರ ಹೆಚ್ಚಳ
  • ರೇಷ್ಮೆ ಉತ್ಪಾದನೆ ಹೆಚ್ಚಿಸಲು 55 ಕೋಟಿ ವೆಚ್ಚದ ವಿಶೇಷ ಯೋಜನೆ
  • ಹನಿ ನೀರಾವರಿಗೆ ₹426 ಕೋಟಿ ರೂ. ಅನುದಾನ
  • ತೋಟಗಾರಿಕೆ ಅಭಿವೃದ್ಧಿಗೆ ₹95 ಕೋಟಿ ರೂ. ಘೋಷಣೆ
  • ರಾಜ್ಯದಲ್ಲಿ 58 ಕೃಷಿ ಪ್ರಯೋಗಾಲಯ ಸ್ಥಾಪನೆ
  • ಕೃಷಿ ಭಾಗ್ಯ ಯೋಜನೆಯಡಿ 12,000 ಕೃಷಿ ಹೊಂಡ ನಿರ್ಮಾಣ
  • ಕೃಷಿ ಯಾಂತ್ರೀಕರಣಕ್ಕೆ ₹428 ಕೋಟಿ ಅನುದಾನ
  • ತುಂತುರು ನೀರಾವರಿ ಘಟಕಗಳನ್ನು ಸ್ಥಾಪಿಸಲು ₹440 ಕೋಟಿ ಮೀಸಲು
  • ಡಿಸಿಸಿ ಮತ್ತು ಪಿಕಾರ್ಡ್ ಬ್ಯಾಂಕ್‌ಗಳಿಂದ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ

Shwetha M

Leave a Reply

Your email address will not be published. Required fields are marked *