ಸಿದ್ದುಗೆ ಮತ್ತೊಂದು ಬಾಣ ಬಿಟ್ರಾ ಡಿಕೆಶಿ?-ಬಿಜೆಪಿ ಟ್ವೀಟ್.. ‘ಕೈ’ ಕೌಂಟರ್ ಅಟ್ಯಾಕ್ !

ಸಿದ್ದುಗೆ ಮತ್ತೊಂದು ಬಾಣ ಬಿಟ್ರಾ ಡಿಕೆಶಿ?-ಬಿಜೆಪಿ ಟ್ವೀಟ್.. ‘ಕೈ’ ಕೌಂಟರ್ ಅಟ್ಯಾಕ್ !

ಐದು ಜಿಲ್ಲೆಗಳಲ್ಲಿ ಕಾಂಗ್ರೆಸ್​​ ಜಿಲ್ಲಾಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರ ಕಾಲೆಳೆಯೋಕೆ ಮುಂದಾಗಿದೆ.  ‘ಸಿದ್ದರಾಮಯ್ಯ ಮೇಲೆ ಡಿ.ಕೆ.ಶಿವಕುಮಾರ್ ಮತ್ತೊಂದು ಬಾಣ ಬಿಟ್ಟಿದ್ದಾರೆ. ಇದ್ದಕ್ಕಿದ್ದಂತೆ ಬೆಂಗಳೂರು ಗ್ರಾಮಾಂತರ, ತುಮಕೂರು, ಕೊಡಗು ಮತ್ತು ಹಾಸನ ಕಾಂಗ್ರೆಸ್​​ಗೆ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದ್ದಾರೆ. ಈ ಮೂಲಕ ಸಿದ್ದರಾಮಯ್ಯ ತಮ್ಮ ತವರು ಮೈಸೂರಿಗೆ ಹತ್ತಿರ ಇರುವ ಕೊಡಗಿನಲ್ಲಿ. ಡಿ.ಕೆ.ಸುರೇಶ್ ಹಿಡಿತ ಇರುವ ಬೆಂಗಳೂರು ಗ್ರಾಮಾಂತರದಲ್ಲಿ, ಡಾ.ಜಿ.ಪರಮೇಶ್ವರ್​ರನ್ನ ಸೋಲಿಸಿದ ತುಮಕೂರಿನಲ್ಲಿ ಯಾವ ಕಾರಣಕ್ಕೂ ಕೈ ಆಡಿಸಬಾರದು ಎಂಬ ಕಾರಣಕ್ಕೆ ಐದು ಜಿಲ್ಲಾಧ್ಯಕ್ಷರನ್ನ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದಾರೆ ಅಂತಾ ಬಿಜೆಪಿ ಆರೋಪಿಸಿದೆ.

‘ಸಿದ್ದರಾಮಯ್ಯ ಕಾಲಿಟ್ಟ ಕಡೆಯೆಲ್ಲಾ ಡಿ.ಕೆ.ಶಿವಕುಮಾರ್ ಕೈ ಆಡಿಸುತ್ತಲೇ ಇದ್ದಾರೆ. ಬೆಳಗಾವಿಗೆ ಹೋದವರು ಗುಪ್ತ್ ಗುಪ್ತಾಗಿ ಬಾದಾಮಿಗೆ ಕಾಲಿಟ್ಟರು. ಕೋಲಾರದಲ್ಲಿ ಆಪ್ತರ ಮೂಲಕ ಸಿದ್ದರಾಮಯ್ಯ ಎದುರಿಗೆ ಅರ್ಜಿ ಹಾಕಿಸಿದರು. ಬಸ್ ಯಾತ್ರೆ ಮಾಡೋಕೆ ಹೋದರೆ ಬ್ರೇಕ್ ಹಾಕಿಸಿದರು. ಹೀಗೆ ನೀವು ಎಲ್ಲೇ ಹೋದರೂ ನಮ್ಮ ನೆಟ್​ವರ್ಕ್​​ ನಿಮ್ಮನ್ನು ಹಿಂಬಾಲಿಸುತ್ತೆ ಅಂತಾ ಡಿಕೆಶಿ ಸಿದ್ದರಾಮಯ್ಯ ಪಾಲಿಗೆ ಕಂಡೂ ಕಾಣದ ಕೈಯಾಗಿದ್ದಾರೆ’ ಅಂತಾ ಬಿಜೆಪಿ ವಿಡಿಯೋ ಒಂದನ್ನು ಟ್ವೀಟ್​ ಮಾಡಿ ಆರೋಪಿಸಿದೆ. ಅಷ್ಟೇ ಅಲ್ಲ, ‘ಸಿದ್ದರಾಮಯ್ಯರನ್ನು ರಾಜಕೀಯವಾಗಿ ಹೂತು ಹಾಕಲೆಂದೇ ಡಿಕೆಶಿ ತಮ್ಮ ಕೈಲಾದಷ್ಟು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ’ ಅಂತಾ ಬಿಜೆಪಿ ಹೇಳಿದೆ.

 

ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ‘ಸಿದ್ದರಾಮಯ್ಯರನ್ನು ಕಟ್ಟಿ ಹಾಕಲು ಕಾಂಗ್ರೆಸ್​ನಲ್ಲಿಯೇ ತಂತ್ರ ರೂಪುಗೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಭಾರತ್​ತೋಡೋ ಯಾತ್ರೆ (ಭಾರತ್​ ಜೋಡೋ) ಸಭೆಗಳಿಗೂ ಸಿದ್ದರಾಮಯ್ಯರಿಗೆ ಆಹ್ವಾನ ಇರಲಿಲ್ಲ. ನಿನ್ನೆಯ ಟಿಕೆಟ್ ಆಕಾಂಕ್ಷಿಗಳಿ ಸಭೆಗೂ ಆಹ್ವಾನ ಇರಲಿಲ್ಲ. ಕೊನೇಪಕ್ಷ ಸಿದ್ದರಾಮಯ್ಯನವರಿಗೆ ಟಿಕೆಟ್ ಆದ್ರೂ ಕೊಡುತ್ತಾರಾ’ ಅಂತಾ ಟ್ವೀಟ್ ಮೂಲಕ ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್ ಕೌಂಟರ್: 

ಇತ್ತ ಕಾಂಗ್ರೆಸ್ ಕೂಡ ಟ್ವೀಟ್ ಮೂಲಕವೇ ಬಿಜೆಪಿಗೆ ಕೌಂಟರ್ ಕೊಡುವ ಯತ್ನ ಮಾಡಿದೆ. ‘ಅಕ್ರಮ ನಡೆದೇ ಇಲ್ಲ ಎಂಬಂತೆ ಮಾತನಾಡುತ್ತಿದ್ದ ಬೊಮ್ಮಾಯಿ ಅವರೇ. ಮತದಾರರ ಮಾಹಿತಿ ಕಳ್ಳತನ ಅಕ್ರಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಅಮಾನತಾಗಿದ್ದು ಏಕೆ? ಸರ್ಕಾರದ ಹಸ್ತಕ್ಷೇಪ, ಬಿಜೆಪಿಯ ಹಿತಾಸಕ್ತಿ, ಮುಖ್ಯಮಂತ್ರಿಗಳ ಸಹಕಾರ ಇಲ್ಲದೆ ಐಎಎಸ್ ಮಟ್ಟದ ಅಧಿಕಾರಿಗಳು ಚಿಲುಮೆಗೆ ಸಹಕರಿಸಲು ಸಾಧ್ಯವೇ? ದಮ್ಮು ಇದ್ದರೆ ಉತ್ತರಿಸಿ’ ಅಂತಾ ಕಾಂಗ್ರೆಸ್ ಟ್ವೀಟ್ ಮೂಲಕ ಮುಖ್ಯಮಮಂತ್ರಿ ಬೊಮ್ಮಾಯಿಗೆ ಸವಾಲು ಎಸೆದಿದೆ.

ಇಷ್ಟೇ ಅಲ್ಲ, ಕರ್ನಾಟಕ ಬಿಜೆಪಿಯ ಪ್ರಮುಖ ಕಳ್ಳತನಗಳು ಅಂತಾ ಲಿಸ್ಟ್ ಮಾಡಿ, ಬಿಜೆಪಿ ಒಮ್ಮೆಯೂ ಜನಾದೇಶದ ಮೂಲಕ ಅಧಿಕಾರಕ್ಕೆ ಬಂದಿಲ್ಲ ಅಂತಾ ಕಾಂಗ್ರೆಸ್ ಟ್ವೀಟ್ ಮೂಲಕ ಆರೋಪಿಸಿದೆ.

suddiyaana