ನಾಳೆ ಕರ್ನಾಟಕದ ಬಂದ್ – ಓಲಾ ಉಬರ್ ಸೇವೆ ಇರಲ್ಲ
ನೆಲ, ಜಲ, ಭಾಷೆ ವಿಚಾರವಾಗಿ ಬಂದ್ ಗೆ ಕರೆ

ನಾಳೆ ಕರ್ನಾಟಕದ ಬಂದ್ – ಓಲಾ ಉಬರ್ ಸೇವೆ ಇರಲ್ಲನೆಲ, ಜಲ, ಭಾಷೆ ವಿಚಾರವಾಗಿ ಬಂದ್ ಗೆ ಕರೆ

ನಾಳೆ ( ಮಾರ್ಚ್ 22)  ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ಕರ್ನಾಟಕದಾದ್ಯಂತ  ಕರೆ ನೀಡಲಾಗಿದೆ. ಈ ಬಂದ್ ಈ ರಾಜ್ಯಕ್ಕಾಗಿ, ಕನ್ನಡ, ಕನ್ನಡಿಗರು ಮತ್ತು ಕರ್ನಾಟಕಕ್ಕಾಗಿ ಇದು ಕನ್ನಡ ಮತ್ತು ಕರ್ನಾಟಕದ ಹೆಮ್ಮೆಗಾಗಿ ಎಂದು ವಾಟಾಳ್ ನಾಗರಾಜ್   ಹೇಳಿದ್ದಾರೆ. ಇನ್ನು ಕರ್ನಾಟಕ ಬಂದ್‌ಗೆ ಕೆಲವು ಸಂಘಟನೆಗಳು ಬೆಂಬಲ ಸೂಚಿಸಿದ್ರೆ, ಇನ್ನೂ ಕೆಲವು ಸಂಘಟನೆಗಳು ಇನ್ನೂ ಏನೂ ಸ್ಪಷ್ಟನೆ ನೀಡಿಲ್ಲ. ಇದೀಗ ಓಲಾ, ಉಬರ್   ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ಬಂದ್‌ ಬಗ್ಗೆ ಮಾತನಾಡಿದ್ದಾರೆ.

ಮಾರ್ಚ್ 22 ರಂದು ಅಖಂಡ ಕರ್ನಾಟಕ ಬಂದ್ ಹಿನ್ನೆಲೆ ಇದೀಗ ಓಲಾ ಉಬರ್ ಸಂಘಟನೆ ಈ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿದೆ.ಈ ಬಗ್ಗೆ ಮಾತನಾಡಿರುವ ಓಲಾ, ಉಬರ್ ಡ್ರೈವರ್ ಅಸೋಸಿಯೇಷನ್ ಅಧ್ಯಕ್ಷ ತನ್ವೀರ್ ಪಾಷ ಮಾತನಾಡಿದ್ದು, ನೆಲ, ಜಲ, ಭಾಷೆ ವಿಚಾರವಾಗಿ ಬಂದ್ ಗೆ ಕರೆ ನೀಡಲಾಗಿದೆ. ಈ ಬಂದ್ ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಮ್ಮ ವಾಹನಗಳು ರಸ್ತೆಗಿಳಿಯಲ್ಲ. ಶನಿವಾರ ಬಂದ್ ವೇಳೆ ಓಲಾ ಉಬರ್ ಸೇವೆ ಇರುವುದಿಲ್ಲ ಎಂದು ಹೇಳಿದ್ದಾರೆ.

 

Kishor KV