ವಾಟಾಳ್ ಖಾಕಿ ವಶ, ಬೆಂಗಳೂರಿಗೆ ತಟ್ಟದ ಬಂದ್ ಬಿಸಿ- ಮಂಡ್ಯ, ಮೈಸೂರಿನಲ್ಲಿ ಬಂದ್‌ಗೆ ಬೆಂಬಲ

ವಾಟಾಳ್ ಖಾಕಿ ವಶ, ಬೆಂಗಳೂರಿಗೆ ತಟ್ಟದ ಬಂದ್ ಬಿಸಿ- ಮಂಡ್ಯ, ಮೈಸೂರಿನಲ್ಲಿ ಬಂದ್‌ಗೆ ಬೆಂಬಲ

ಕಾವೇರಿ ನೀರಿಗಾಗಿ ನಡೆಯುತ್ತಿರೋ  ಕರ್ನಾಟಕ ಬಂದ್  ಕೇವಲ ಪ್ರತಿಭಟನೆ ಸೀಮಿತವಾಗಿದ್ದು, ಬೆಂಗಳೂರಿನಲ್ಲಿ ಬಂದ್ ಬಿಸಿ ತಟ್ಟಿಲ್ಲ. ಮಂಡ್ಯದ ಕೆಲ ಭಾಗಗಳಲ್ಲಿ ಬಂದ್ ಆಗಿದ್ದು, ಮೈಸೂರಿನಲ್ಲಿ ಪ್ರತಿಭಟನೆ ಬಿಸಿ ತಟ್ಟಿದೆ.

ಕಾವೇರಿ ನೀರಿಗಾಗಿ ಕರ್ನಾಟಕ ಬಂದ್​ಗೆ ಕರೆ ಕೊಟ್ಟ ವಾಟಾಳ್ ನಾಗರಾಜ್ ಅವ್ರನ್ನ ಪೊಲೀಸರು ಅವರ ಮನೆ ಬಳಿಯೇ ವಶಕ್ಕೆ ಪಡೆದಿದ್ದಾರೆ. ಹಾಗೇ ಕನ್ನಡ ಸಂಘಟನೆಗಳ ಒಕ್ಕೂಟದ ಕಾರ್ಯದರ್ಶಿ ಗಿರೀಶ್ ಗೌಡ, ಕನ್ನಡ ಸೇನೆಯ ರಾಜ್ಯಾಧ್ಯಕ್ಷ ರಾಜ್ ಶೇಖರ್, ರಾಜ್ಯ ಕಾರ್ಮಿಕ ಪರಿಷತ್ ರವಿ ಶೆಟ್ಟಿ ಬೈಂದೂರು ಅವರನ್ನ ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾವೇರಿ ನೀರಿಗಾಗಿ ನಡೆಸಲಾಗ್ತಿರೋ ಬಂದ್​ಗೆ ಮಂಡ್ಯದಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕ ಬಂದ್ ಬೆಂಬಲಿಸಿ ಮದ್ದೂರು ಪಟ್ಟಣ ಬಂದ್ ಮಾಡಲಾಗಿದ್ದು, ಅಂಗಡಿ ಮುಂಗ್ಗಟ್ಟಿನ ಬಾಗಿಲು ಬಂದ್ ಮಾಡಿ ವರ್ತಕರು ಬೆಂಬಲ ಸೂಚಿಸಿದ್ದಾರೆ. ಮದ್ದೂರು ಪಟ್ಟಣದಲ್ಲಿ ಬೈಕ್ ಜಾಥಾ ಮಾಡಿದ್ದು, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
 

ಮೈಸೂರಲ್ಲಿ ಪರಿಸ್ಥಿತಿ ಸಹಜವಾಗಿದ್ದು, ಜನರ ಓಡಾಟ-ಅಂಗಡಿ ಮುಂಗಟ್ಟುಗಳೂ ತೆರೆದಿವೆ. ಮೈಸೂರಿನಲ್ಲಿ ಬಂದ್​​ ಪ್ರತಿಭಟನೆಗೆ ಸೀಮಿತವಾಗಿದೆ. ಮೈಸೂರು ಕನ್ನಡ ವೇದಿಕೆ ಹಾಗೂ ರೈತರಿಂದ ಅಗ್ರಹಾರದಲ್ಲಿ ಪ್ರತಿಭಟನೆ‌ ನಡೆಸಿದ್ದು, ತಮಿಳುನಾಡಿಗೆ ನೀರು ಹರಿಸುತ್ತಿರೋದನ್ನ ಖಂಡಿಸಿದ್ದಾರೆ.
 ಈ ನಡುವೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಕನ್ನಡಪರ ಹೋರಾಟಗಾರು ಭೇಟಿಯಾಗಿದ್ದಾರೆ. ಕಾವೇರಿ ನೀರನ್ನು ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಬಿಡಬಾರದು ಎಂಬ ಆಗ್ರಹದ ಜೊತೆಗೆ ಮೇಕೆದಾಟು ಯೋಜನೆ ಆರಂಭ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮುಖ್ಯಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಕರವೇ ಶಿವರಾಮೇಗೌಡ ಬಣದ‌ ಮುಖಂಡರು ಈ ವೇಳೆ ಉಸಪಸ್ಥಿತರಿದ್ದರು.

Kishor KV

Leave a Reply

Your email address will not be published. Required fields are marked *