ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ – ಆದ್ರೆ ಈ ನಿಯಮ ಅನ್ವಯ!

ಮತದಾನ ದಿನದಂದು ಕಾರ್ಮಿಕರಿಗೆ ವೇತನ ಸಹಿತ ರಜೆ – ಆದ್ರೆ ಈ ನಿಯಮ ಅನ್ವಯ!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಚುನಾವಣಾ ಆಯೋಗ ರಾಜ್ಯದಲ್ಲಿ ಅತೀ ಹೆಚ್ಚು ಮತದಾನವಾಗಬೇಕು ಅಂತಾ ಗುರಿಯನ್ನು ಇಟ್ಟಕೊಂಡಿದೆ. ಆದ್ರೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುವವರು ಕೆಲಸಕ್ಕೆ ರಜೆ ಹಾಕಿ ಮತದಾನಕ್ಕೆ ತೆರಳಿದ್ರೆ ಸಂಬಳ ಕಟ್ ಆಗುತ್ತೆ ಅನ್ನೋ ಭಯ ಇರುತ್ತೆ. ಹೀಗಾಗಿ ಅನೇಕರು ಮತದಾನ ಹಾಕೋದಿಲ್ಲ. ಇದಕ್ಕಾಗಿಯೇ ಕಾರ್ಮಿಕ ಇಲಾಖೆ ಎಲೆಕ್ಷನ್ ದಿನ ಗಾರ್ಮೆಂಟ್ಸ್ ನೌಕರರಿಗೆ, ಕಾರ್ಮಿಕರಿಗೆ ಸಂಬಳ ಸಹಿತ ರಜೆ ನೀಡಲು ಮುಂದಾಗಿದೆ.

ಇದನ್ನೂ ಓದಿ: ಸಾವಿರ ಕೋಟಿಯ ಸರದಾರ ಡಿ.ಕೆ ಶಿವಕುಮಾರ್ – ಕನಕಪುರ ಬಂಡೆ ಬಳಿ ಇರೋ ಆಸ್ತಿ ಎಷ್ಟು ಗೊತ್ತಾ?

ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಶೇ. 50 ಕ್ಕಿಂತಲೂ ಕಡಿಮೆ ಆಗುತ್ತದೆ. ಇದನ್ನು ತಪ್ಪಿಸಲೆಂದೇ ವಾರದ ಮಧ್ಯೆ ಮತದಾನದ ದಿನಾಂಕ ಪ್ರಕಟಿಸಿದ್ದಾರೆ. ಆದ್ರೆ ಈಗ ಚುನಾವಣಾ ಅಧಿಕಾರಿಗಳಿಗೆ ಮತ್ತೊಂದು ತಲೆ ಬಿಸಿ ಎದುರಾಗಿದೆ. ವಾರದ ಮಧ್ಯೆ ಚುನಾವಣೆ ನಡೆಯುವುದರಿಂದಾಗಿ ಮೂರು ಲಕ್ಷಕ್ಕೂ ಅಧಿಕ  ಕಾರ್ಮಿಕರು ಮತದಾನದಿಂದ ವಂಚಿತರಾಗುತ್ತಿದ್ದಾರೆ ಅನ್ನೋ ಮಾತು ಕೇಳಿಬಂದಿದೆ. ಹೀಗಾಗಿ, ಈ ಬಾರಿ ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ, ಪ್ರತಿ ಐಟಿ ಬಿಟಿ ಹಾಗೂ ಗಾರ್ಮೆಂಟ್ಸ್​​​ಗೆ ಭೇಟಿ ನೀಡಿ ವೋಟ್ ಮಾಡಲು ಮನವಿ ಮಾಡ್ತಿದ್ದಾರೆ. ಈ ವೇಳೆ ಗಾರ್ಮೆಂಟ್ಸ್​​ ಸಿಬ್ಬಂದಿ ಮತಹಾಕಲು ಊರಿಗೆ ಹೋದ್ರೆ, ಸಂಬಳ ಕಡಿತವಾಗುವ ಆತಂಕವನ್ನ ವ್ಯಕ್ತಿಪಡಿಸಿದ್ರು. ಇದ್ರಿಂದಾಗಿ ಗಾರ್ಮೆಂಟ್ಸ್ ಕಂಪನಿಗಳಿಗೆ ಸಂಬಳ ಸಹಿತ ರಜೆ ನೀಡುವಂತೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ 3 ಲಕ್ಷಕ್ಕೂ ಅಧಿಕ ಗಾರ್ಮೆಂಟ್ಸ್ ನೌಕರರಿದ್ದು, ಕಾರ್ಖಾನೆಗಳಲ್ಲಿ ದುಡಿಯುವ 1 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಇವ್ರೆಲ್ಲ ವೋಟ್ ಮಾಡಲು ಈಗ ಅವಕಾಶ ಸಿಕ್ಕಿದ್ದು, ಎಲೆಕ್ಷನ್​ಗೆ ರಜೆ ನೀಡಿದ್ರೆ, ವೋಟ್ ಮಾಡ್ದೆ ಇದ್ದವರಿಗೆ ಸಂಬಳ ನೀಡಲ್ವಂತೆ. ಸದ್ಯ ಕಾರ್ಮಿಕ ಇಲಾಖೆ ಕೂಡಾ ಎಲ್ಲಾ ಕಂಪನಿಗಳಿಗೂ ಸೂಚನೆ ನೀಡಿದ್ದು. ವೋಟ್ ಮಾಡಲು ಹೋಗುವ ನೌಕರರಿಗೆ ಸಂಬಳ ಸಹಿತ ರಜೆ ನೀಡಲು ಸೂಚನೆ ನೀಡುತ್ತಾ ಇದೆ ಅಂತಾ ಹೇಳಲಾಗುತ್ತಿದೆ.

suddiyaana