ಪ್ರಚಾರ ಕಣದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಅಬ್ಬರ – ರಾಜಧಾನಿಯಲ್ಲಿ ಮೆಗಾ ರೋಡ್ ಶೋ

ಪ್ರಚಾರ ಕಣದಲ್ಲಿ ಇಂದಿನಿಂದ ಪ್ರಧಾನಿ ಮೋದಿ ಅಬ್ಬರ – ರಾಜಧಾನಿಯಲ್ಲಿ ಮೆಗಾ ರೋಡ್ ಶೋ

ಬೆಂಗಳೂರು: ಮತದಾನಕ್ಕೆ ದಿನಗಣನೆ ಆರಂಭವಾಗುತ್ತಲೇ ಅಂತಿಮ ಹಂತದ ಪ್ರಚಾರಕ್ಕೆ ಪ್ರಧಾನಿ ಮೋದಿ ಮತ್ತೆ ರಾಜ್ಯಕ್ಕೆ ಎಂಟ್ರಿ ಕೊಡಲಿದ್ದಾರೆ. ಏಪ್ರಿಲ್ 29ರಿಂದ ಎರಡು ದಿನಗಳ ಕಾಲ ಮೋದಿ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಮತ ಬೇಟೆಯಾಡಲಿದ್ದಾರೆ. ಎರಡು ದಿನಗಳಲ್ಲಿ ಮೋದಿ ಒಟ್ಟು ಎಂಟು ಜಿಲ್ಲೆಗಳನ್ನ ಪ್ರಚಾರ ನಡೆಸಲಿದ್ದಾರೆ.

ಏಪ್ರಿಲ್ 29 ಬೆಳಗ್ಗೆ 11ಕ್ಕೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಗೆ ಆಗಮಿಸಲಿರುವ ಮೋದಿ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತಬೇಟೆಯಾಡಲಿದ್ದಾರೆ. ಬಳಿಕ ಮಧ್ಯಾಹ್ನ 3.30ಕ್ಕೆ ಬೆಳಗಾವಿಯ ಕುಡಚಿ ಕ್ಷೇತ್ರದಲ್ಲಿ ಪಿ. ರಾಜೀವ್ ಪರ ಮೋದಿ ಕ್ಯಾಂಪೇನ್ ಮಾಡಲಿದ್ದು, ಸಂಜೆ 6ಕ್ಕೆ ಬೆಳಗಾವಿಯಿಂದ ಬೆಂಗಳೂರಿಗೆ ಬರಲಿರುವ ಮೋದಿ, ನೈಸ್ ರೋಡ್​ನಿಂದ ಸುಮ್ಮನಹಳ್ಳಿ ಜಂಕ್ಷನ್​ವರೆಗೆ ಬೃಹತ್ ರೋಡ್ ಶೋ ನಡೆಸಲಿದ್ದು, ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಇದನ್ನೂ ಓದಿ:ಬಿಜೆಪಿ, ಜೆಡಿಎಸ್  ಸಮ್ಮಿಶ್ರ ಸರ್ಕಾರ ರಚನೆಯಾಗುತ್ತಾ? : ದೇವೇಗೌಡ್ರು, ಮೋದಿ ಸಾಹೇಬ್ರು ಮಾತಾಡ್ಕೊಂಡವ್ರೆ – ಪ್ರೀತಂ ಗೌಡ

ನಾಳೆ ಭಾನುವಾರ ಬೆಂಗಳೂರಿನಿಂದ ಕೋಲಾರಕ್ಕೆ ತೆರಳಲಿರುವ ಮೋದಿ, ಬೆಳಗ್ಗೆ 11 ಗಂಟೆಗೆ ಕೋಲಾರದ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.. ಮಧ್ಯಾಹ್ನ 2ಗಂಟೆಗೆ ಕುಮಾರಸ್ವಾಮಿ ಕರ್ಮಭೂಮಿ ಚನ್ನಪಟ್ಟಣದಲ್ಲಿ ಯೋಗೇಶ್ವರ್ ಪರ ಪ್ರಚಾರ ನಡೆಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಬೇಲೂರಿನಲ್ಲಿ ಸಮಾವೇಶ ಮುಗಿಸಿ ಸಂಜೆ 5.30ಕ್ಕೆ ಮೈಸೂರಿಗೆ ಆಗಮಿಸಲಿರುವ ಮೋದಿ ವಿದ್ಯಾಪೀಠ ಸರ್ಕಲ್​ನಿಂದ ಬನ್ನಿಮಂಟಪದ ವರೆಗೆ ರೋಡ್ ಶೋ ನಡೆಸಲಿದ್ದಾರೆ.

ಮೋದಿ ಸಮಾವೇಶಕ್ಕಾಗಿ ವಿಜಯಪುರದ ಸೈನಿಕ ಶಾಲೆಯಲ್ಲಿ 340 ಅಡಿ ಅಗಲದ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, 80,000 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ 9 ಮತಕ್ಷೇತ್ರಗಳಿಂದ 2 ಲಕ್ಷ ಜನರನ್ನ ಕರೆತರುವ ಪ್ಲ್ಯಾನ್ ಮಾಡಲಾಗಿದೆ.

ಮೇ 2ರಂದು ಮತ್ತೆ ಮೋದಿ ರಾಜ್ಯಕ್ಕೆ ಮರಳಲಿದ್ದು, ಎರಡು ದಿನಗಳ ಕಾಲ ಚಿತ್ರದುರ್ಗ, ವಿಜಯನಗರ, ಕಲಬುರಗಿ, ಕಾರವಾರ, ದಕ್ಷಿಣಕನ್ನಡದ ಮೂಡಬಿದಿರೆಯಲ್ಲಿ ಪ್ರಚಾರ ನಡೆಸಲಿದ್ದಾರೆ. ಬಳಿಕ ಮೇ 6 ಮತ್ತು 7ರಂದು ಮೋದಿ ಮತ್ತೊಂದು ಹಂತದಲ್ಲಿ ಬಾದಾಮಿ, ಹಾವೇರಿ ಮತ್ತು ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮತ ಬೇಟೆ ನಡೆಸಲಿದ್ದಾರೆ. ರಾಜ್ಯದಲ್ಲಿ ಪ್ರಧಾನಿ ಮೋದಿ ಒಟ್ಟು 22 ಸಮಾವೇಶಗಳನ್ನುದ್ದೇಶಿ ಮಾತನಾಡುವ ಸಾಧ್ಯತೆ ಇದೆ.  ರಾಜ್ಯ ಬಿಜೆಪಿ ಸಂಪೂರ್ಣವಾಗಿ ಮೋದಿಯನ್ನ ಅವಲಂಬಿಸಿದ್ದು, ಅಖಾಡದಲ್ಲೇ ಹೊಸ ಅಲೆ ಏಳಲಿದೆ ಅಂತಾ ಕೇಸರಿ ಕಲಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

suddiyaana