ಶತಕ ದಾಟಿದ ಕಾಂಗ್ರೆಸ್ – ದೆಹಲಿ ಕಚೇರಿಯಲ್ಲಿ ಸಂಭ್ರಮ
ಬೆಂಗಳೂರು: ಮೇ10 ರಂದು ಒಂದೇ ಹಂತದಲ್ಲಿ ಕರ್ನಾಟಕದ 224 ಕ್ಷೇತ್ರಗಳಿಗೆವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-79, ಕಾಂಗ್ರೆಸ್-108, ಜೆಡಿಎಸ್-32 ಮತ್ತು ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್ ನ ದೆಹಲಿ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.
ಹೈವೋಲ್ಟೇಜ್ ಕ್ಷೇತ್ರವಾಗಿ ಅಥಣಿಯಲ್ಲಿ 4ನೇ ಸುತ್ತಿನ ಮತ ಎಣಿಕೆಯಲ್ಲಿ ಲಕ್ಷ್ಮಣ್ ಸವದಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ – 9849, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 22765 ಮತಗಳನ್ನು ಪಡೆದಿದ್ದಾರೆ. ಇನ್ನು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 8 ನೇ ಸುತ್ತಿನಲ್ಲೂ ಸತೀಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಬಸವರಾಜ ಹುಂದ್ರಿ – 6894 ಮತಗಳು ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಸತೀಶ್ ಜಾರಕಿಹೊಳಿಗೆ 36404 ಮತಗಳು ಜೆಡಿಎಸ್ ಮಾರುತಿ ಅಷ್ಟಗಿಗೆ 10515 ಮತಗಳು ಪಡೆದಿದ್ದಾರೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್ ಅಹ್ಮದ್ ಖಾನ್ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಜಯನಗರ ಕಾಂಗ್ರೆಸ್ ಸೌಮ್ಯಾರೆಡ್ಡಿಗೆ ಹಿನ್ನಡೆಯಾಗಿದೆ. ಮಹದೇವಪುರ ಬಿಜೆಪಿಯ ಮಂಜುಳಾ ಮುನ್ನಡೆ ಸಾಧಿಸಿದ್ದಾರೆ. ಶಿವಾಜಿನಗರ ಕಾಂಗ್ರೆಸ್ ರಿಜ್ವಾನ್ ಗೆ ಮುನ್ನಡೆಯಾಗಿದೆ. ಪದ್ಮನಾಭನಗರ ಬಿಜೆಪಿ ಆರ್.ಅಶೋಕ್ ಮುನ್ನಡೆ ಸಾಧಿಸಿದ್ದಾರೆ.