ಬಿರುಸಿನಿಂದ ನಡೆಯುತ್ತಿರುವ ಮತ ಎಣಿಕೆ ಕಾರ್ಯ – ಯಾರು ಮುನ್ನಡೆ? ಯಾರು ಹಿನ್ನಡೆ?
ಮೇ10 ರಂದು ಒಂದೇ ಹಂತದಲ್ಲಿ ಕರ್ನಾಟಕದ 224 ಕ್ಷೇತ್ರಗಳಿಗೆವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. ಇನ್ನು ಕೆಲವೇ ಹೊತ್ತಲ್ಲಿ ಘಟಾನುಘಟಿ ರಾಜಕೀಯ ನಾಯಕರ ಭವಿಷ್ಯ ಬಯಲಾಗಲಿದೆ. ಕರ್ನಾಟಕದ ರಾಜಕೀಯ ದಿಕ್ಕನ್ನು ಬದಲಿಸುವ ಮಹಾತೀರ್ಪಿಗೆ ಜನ ಕಾಯುತ್ತಿದ್ದಾರೆ. ಯಾವ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯುತ್ತೆ.. ಮತದಾನೋತ್ತರ ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ.. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರುತ್ತಾ.. ರಾಜ್ಯದಲ್ಲಿ ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತಾ. ಜೆಡಿಎಸ್ ಕಿಂಗ್ ಮೇಕರ್ ಆಗುತ್ತಾ ಹೀಗೆ ನಾನಾ ಲೆಕ್ಕಾಚಾರಗಳು ಗರಿಗೆದರಿವೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಯಾರು ಹಿನ್ನಡೆ ಸಾಧಿಸಿದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.
- ರಾಮನಗರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಮುನ್ನಡೆ
- ಜಯನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಹಿನ್ನಡೆ
- ಭಟ್ಕಳದಲ್ಲಿ ಬಿಜೆಪಿ ಸುನಿಲ್ ನಾಯಕ್ 300 ಮತಗಳ ಮುನ್ನಡೆ
- ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಮುನ್ನಡೆ
- ಚಾಮರಾಜಪೇಟೆಯಲ್ಲಿ 20,000 ಮತಗಳಿಂದ ಮುನ್ನಡೆ
- ಶಿಕಾರಿಪುರದಲ್ಲಿ ಬಿಜೆಪಿ ಬಿ.ವೈ ವಿಜಯೇಂದ್ರ ಹಿನ್ನಡೆ
- ಪಕ್ಷೇತರ ಅಭ್ಯರ್ಥಿ ನಾಗರಾಜ್ ಗೌಡ ಮುನ್ನಡೆ
- ಯಲಹಂಕದಲ್ಲಿ ಎಸ್.ಆರ್ ವಿಶ್ವನಾಥ್‌ಗೆ ಮುನ್ನಡೆ
- ಯಲಹಂಕದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
- ಗೋಕಾಕ್ ಬಿಜೆಪಿ ರಮೇಶ್ ಜಾರಕಿಹೊಳಿ ಹಿನ್ನಡೆ
- ನಾಲ್ಕನೇ ಸುತ್ತಿನಲ್ಲೂ ರಮೇಶ್ ಜಾರಕಿಹೊಳಿ ಹಿನ್ನಡೆ
- ಬೈಂದೂರಿನಲ್ಲಿ ಕಾಂಗ್ರೆಸ್ ಗೋಪಾಲ ಪೂಜಾರಿ ಮುನ್ನಡೆ
- ಚಾಮರಾಜನಗರದಲ್ಲಿ ಸೋಮಣ್ಣಗೆ ಭಾರಿ ಹಿನ್ನಡೆ
- 9 ಸಾವಿರ ಮತಗಳ ಅಂತರದಲ್ಲಿ ಸೋಮಣ್ಣಗೆ ಹಿನ್ನಡೆ
- ಪುತ್ತೂರಿನಲ್ಲಿ ಬಿಜೆಪಿಯ ಆಶಾ ತಿಮ್ಮಪ್ಪ ಹಿನ್ನಡೆ
- 2121 ಮತಗಳ ಅಂತರದಿಂದ ಅಶೋಕ್ ಕುಮಾರ್ ರೈ ಮುನ್ನಡೆ
- ಪುತ್ತೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಮುನ್ನಡೆ
- ಚಾಮರಾಜನಗರದಲ್ಲಿ ಕಾಂಗ್ರೆಸ್ ಪುಟ್ಟರಂಗ ಶೆಟ್ಟಿಗೆ ಮುನ್ನಡೆ
- ಅರಸೀಕೆರೆಯಲ್ಲಿ ಜೆಡಿಎಸ್ ಎನ್.ಆರ್ ಸಂತೋಷ್ ಮುನ್ನಡೆ