ವಿಧಾನಸಭಾ ಚುನಾವಣೆ 2023 – ದೊಡ್ಮನೆ ಕುಟುಂಬದಿಂದ ಮತದಾನ

ವಿಧಾನಸಭಾ ಚುನಾವಣೆ 2023 – ದೊಡ್ಮನೆ ಕುಟುಂಬದಿಂದ ಮತದಾನ

ಬಹುಭಾಷಾ ನಟ ಪ್ರಕಾಶ್ ರೈ ತಮ್ಮ ಹಕ್ಕು ಚಲಾಯಿಸಿದರು. ಬೆಂಗಳೂರಿನ ಶಾಂತಿನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ ನಟ ಪ್ರಕಾಶ್ ರೈ ಮತದಾನ ಮಾಡಿದರು.

ದೊಡ್ಮನೆ ಕುಟುಂಬ ಕೂಡಾ ಮತ ಚಲಾಯಿಸಿ, ನೀವೂ ಕೂಡಾ ಮತ ಚಲಾಯಿಸಿ ಎಂದು ಜನರಲ್ಲಿ ಮನವಿ ಮಾಡಿದರು. ರಾಘವೇಂದ್ರ ರಾಜ್​ಕುಮಾರ್ ಹಾಗೂ ಯುವ ರಾಜ್​ಕುಮಾರ್ ಅವರು ಬೆಂಗಳೂರಿನಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮತದಾನ ಮಾಡುವುದು ಬಹಳ ಮುಖ್ಯ ಅದು ನಮ್ಮ ಜವಬ್ದಾರಿ. ಹೀಗಾಗಿ ಮತದಾನ ಮಾಡಲು ನಾನು ಬೆಂಗಳೂರಿನಿಂದ ಬಂದಿದ್ದೇನೆ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆಯ ಶಾಲೆಯಲ್ಲಿ ರಕ್ಷಿತ್ ಶೆಟ್ಟಿ ಮತ ಹಾಕಿದ್ದಾರೆ. ಅವರ ಜೊತೆ ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ ಸಹೋದರ ರಂಜಿತ್ ಶೆಟ್ಟಿ ಆಗಮಿಸಿದ್ದರು.

ಜಗ್ಗೇಶ್ ಅವರು ಮಲ್ಲೇಶ್ವರದಲ್ಲಿ ವೋಟ್ ಮಾಡಿದ್ದಾರೆ. ಜೊತೆಗೆ ತಪ್ಪದೇ ಮತದಾನ ಮಾಡುವಂತೆ ಅವರು ಕೋರಿದ್ದಾರೆ.

ನಟ ವಿನೋದ್ ರಾಜ್ ಮತಚಲಾವಣೆ ಮಾಡಿದ್ದಾರೆ. ನಗರದ ಮೈಲನಹಳ್ಳಿ ಮತಗಟ್ಟೆ 107ರಲ್ಲಿ ನಟ ವಿನೋದ್ ರಾಜ್ ಮತದಾನ ಮಾಡಿದ್ದಾರೆ.  ಕಳೆದ ಬಾರಿ ಮತದಾನ ಪ್ರಮಾಣ ಕಡಿಮೆ‌ ಆಗಿತ್ತು. ಹಾಗೆ ಆಗಬಾರದು. ಹಾಗೆ ಆದರೆ ಬ್ರಿಟಿಷರ್ ತರಹ ದೇಶವನ್ನು ರಾಜ್ಯವನ್ನ ಬೇರೆಯವರು ಆಳ್ವಿಕೆ ಮಾಡೋಕೆ ಅವಕಾಶ ಆಗುತ್ತೆ. ಎಲ್ಲರೂ ಮತದಾನ ಮಾಡಿ ಮನವಿ ಮಾಡಿದರು.

ನಟಿ ಉಮಾಶ್ರೀ ತಮ್ಮ ಹಕ್ಕು ಚಲಾಯಿಸಿದರು. ಬಾಗಲಕೋಟೆ ತೇರದಾಳ ಕ್ಷೇತ್ರ ವ್ಯಾಪ್ತಿಯ ರಬಕವಿಯ ಸರ್ಕಾರಿ ಉರ್ದು ಶಾಲೆಯ ಮತಗಟ್ಟೆ ಸಂಖ್ಯೆ 83ರಲ್ಲಿ ಮಾಜಿ ಸಚಿವೆ, ನಟಿ ಉಮಾಶ್ರೀ ಮತದಾನ ಮಾಡಿದ್ದಾರೆ.

suddiyaana