ವೋಟ್ ಹಾಕಿದ ರಿಯಲ್ ಸ್ಟಾರ್ – ಹಕ್ಕು ಚಲಾಯಿಸಿದ ಜಾವಗಲ್ ಶ್ರೀನಾಥ್

ವೋಟ್ ಹಾಕಿದ ರಿಯಲ್ ಸ್ಟಾರ್ – ಹಕ್ಕು ಚಲಾಯಿಸಿದ ಜಾವಗಲ್ ಶ್ರೀನಾಥ್

ರಿಯಲ್ ಸ್ಟಾರ್ ಉಪೇಂದ್ರ ದಂಪತಿ ಮತದಾನ ಮಾಡಿದ್ದಾರೆ. ಬುಧವಾರ ಬೆಳಗ್ಗೆಯೇ ಕತ್ರಿಗುಪ್ಪೆ ಮತಗಟ್ಟೆಗೆ ಆಗಮಿಸಿದ ನಟ ಉಪೇಂದ್ರ ಮತ್ತು ದಂಪತಿ ಮತದಾನ ಮಾಡಿದ್ದಾರೆ. ನಟ ಉಪೇಂದ್ರ ಉತ್ತಮ ಪ್ರಜಾಕೀಯ ಪಾರ್ಟಿಯ ಸಂಸ್ಥಾಪಕರೂ ಹೌದು.

ಹಿರಿಯ ನಟಿ ಸುಧಾರಾಣಿ ಮತದಾನ ಮಾಡಿದ್ದಾರೆ. ಮಲ್ಲೇಶ್ವರದಲ್ಲಿ ನಟಿ ಸುಧಾರಾಣಿ ಅವರು ತಮ್ಮ ಅಮೂಲ್ಯವಾದ ಮತ ಚಲಾಯಿಸಿದ್ದಾರೆ.

ಮೈಸೂರಿನಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದರು. ಮೈಸೂರು ನಗರದ ಕುವೆಂಪುನಗರದ ಜ್ಞಾನಗಂಗಾ ಶಾಲೆ ಮತಗಟ್ಟೆ ನಂ. 26ರಲ್ಲಿ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ ಮಾಡಿದ್ದಾರೆ. ಮೈಸೂರು ಜಿಲ್ಲಾ ಚುನಾವಣಾ ರಾಯಭಾರಿ ಜಾವಗಲ್ ಶ್ರೀನಾಥ್ ಅವರು ಸರತಿಸಾಲಿನಲ್ಲಿ ಆಗಮಿಸಿ ಮತದಾನ ಮಾಡಿದ್ದಾರೆ.

ಮೈಸೂರಿನಲ್ಲಿ ರಾಜಮನೆತನದವರು ಕೂಡಾ ತಮ್ಮ ಹಕ್ಕು ಚಲಾಯಿಸಿದ್ದಾರೆ. ನಗರದ ಕೆ ಆರ್ ಮೊಹಲ್ಲಾದ ಶ್ರೀಕಾಂತ ಶಾಲೆಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ತ್ರಿಷಿಕಾ ಕುಮಾರಿ ಮತದಾನ ಮಾಡಿದ್ದಾರೆ.

suddiyaana