ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಸಿಎಂ ಬೊಮ್ಮಾಯಿ

ಮತದಾನಕ್ಕೂ ಮುನ್ನ ದೇವರ ಮೊರೆ ಹೋದ ಸಿಎಂ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾವಣೆಗೂ ಮೊದಲು ದೇವರ ಮೊರೆ ಹೋಗಿದ್ದರು. ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ತೆರಳಿದ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಶಿಗ್ಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಬಸವರಾಜ ಬೊಮ್ಮಾಯಿ ತಮ್ಮ ಹಕ್ಕು ಚಲಾಯಿಸಿದರು.

ಇದನ್ನೂ ಓದಿ:ವಿಧಾನಸಭಾ ಚುನಾವಣೆ 2023 – ಸ್ಯಾಂಡಲ್‌ವುಡ್ ಕಲಾವಿದರಿಂದ ಮತದಾನ  

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಮತದಾನ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷ ಸಂಸ್ಥಾಪಕ ಜನಾರ್ದನ ರೆಡ್ಡಿ ಹಕ್ಕು ಚಲಾಯಿಸಿದರು.

ಪಕ್ಷೇತರ ಅಭ್ಯರ್ಥಿ ಅರುಣ ಪುತ್ತಿಲ ತಮ್ಮ ಹಕ್ಕು ಚಲಾವಣೆ ಮಾಡಿದರು. ಪುತ್ತೂರು ತಾಲೂಕು ಮುಂಡೂರು ಗ್ರಾಮದಲ್ಲಿ ವೋಟಿಂಗ್ ಮಾಡಿದ್ದಾರೆ.

ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಜಗದ್ಗುರು ವೀರಸೋಮೇಶ್ವರ ಮಹಾಸ್ವಾಮಿಜಿಗಳು ಸಂದೇಶ ನೀಡಿದ್ದಾರೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಮಠದ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 209ರಲ್ಲಿ ಶ್ರೀಗಳು ಮತದಾನ ಮಾಡಿದರು. ಬಾಳೆಹೊನ್ನೂರಿನ ಮತಗಟ್ಟೆಯಲ್ಲಿ ಶ್ರೀಗಳ ಮತದಾನ ಬಳಿಕ ಉಳಿದವರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಮೊದಲಿನಿಂದಲೂ ಅನುಸರಿಸಿಕೊಂಡು ಬಂದ ಪದ್ಧತಿ. ಅದರಂತೆ ಜನರು ಮತದಾನ ಮಾಡಲಿದ್ದಾರೆ.

 

suddiyaana