ವಿಧಾನಸಭಾ ಚುನಾವಣೆ 2023 – ಸ್ಯಾಂಡಲ್‌ವುಡ್ ಕಲಾವಿದರಿಂದ ಮತದಾನ  

ವಿಧಾನಸಭಾ ಚುನಾವಣೆ 2023 – ಸ್ಯಾಂಡಲ್‌ವುಡ್ ಕಲಾವಿದರಿಂದ ಮತದಾನ  

ನಿಮ್ಮ ಮತ ನಿಮ್ಮ ಹಕ್ಕು ಎಂದು ಹೇಳುತ್ತಿದ್ದ ಕಲಾವಿದರು ಕೂಡಾ ಬುಧವಾರ ಬೆಳಗ್ಗೆಯಿಂದಲೇ ಮತಗಟ್ಟೆಗೆ ಆಗಮಿಸಿದರು. ನಟ ರಮೇಶ್ ಅರವಿಂದ್ ಮತದಾನ ಮಾಡಿದರು. ಪತ್ನಿ ಜೊತೆ ಆಗಮಿಸಿದ ನಟ ರಮೇಶ್ ಅರವಿಂದ್ ಬೆಂಗಳೂರಿನ ಜೆ.ಪಿ ನಗರದಲ್ಲಿ ಸರತಿ ಸಾಲಿನಲ್ಲಿ ನಿಂತು ವೋಟ್ ಮಾಡಿದರು.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ – ಗಣ್ಯರಿಂದ ಮತದಾನ

ಗೋಲ್ಡನ್ ಸ್ಟಾರ್ ಗಣೇಶ್ ಮತದಾನ ಮಾಡಿದರು. ಬೆಂಗಳೂರಿನ ಆರ್.ಆರ್ ನಗರದಲ್ಲಿ ಪತ್ನಿ ಶಿಲ್ಪಾ ಜೊತೆ ಆಗಮಿಸಿದ ನಟ ಗಣೇಶ್ ಮತದಾನ ಮಾಡಿದರು. ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ವೋಟಿಂಗ್ ಮಾಡಿದರು.

ನಟಿ ಅಮೂಲ್ಯ ಅವರು ಮತದಾನ ಮಾಡಿದ್ದಾರೆ. ಬೆಂಗಳೂರಿನ ಆರ್​ಆರ್​​ ನಗರದಲ್ಲಿ ಅಮೂಲ್ಯ ಮತ್ತು ಜಗದೀಶ್ ದಂಪತಿ ಮತ ಚಲಾವಣೆ ಮಾಡಿದ್ದಾರೆ.

 

suddiyaana