ಕರ್ನಾಟಕಕ್ಕೆ ಸಿಗಲಿದೆಯಾ ‘ಹುಲಿ ರಾಜ್ಯ’ ಪಟ್ಟ ? – ಹುಲಿಗಣತಿಯಲ್ಲಿ ಸಿಗುತ್ತಾ ನಂಬರ್ 1 ಸ್ಥಾನ ?

ಕರ್ನಾಟಕಕ್ಕೆ ಸಿಗಲಿದೆಯಾ ‘ಹುಲಿ ರಾಜ್ಯ’ ಪಟ್ಟ ? – ಹುಲಿಗಣತಿಯಲ್ಲಿ ಸಿಗುತ್ತಾ ನಂಬರ್ 1 ಸ್ಥಾನ ?

ದೇಶದಲ್ಲಿ ಅತ್ಯಂತ ಹೆಚ್ಚಿನ ಹುಲಿ ಹೊಂದಿರುವ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮುವ ಸಾಧ್ಯತೆ ಹೆಚ್ಚಾಗಿದೆ. 2018ರಲ್ಲಿ ಬಿಡುಗಡೆಯಾದ ಹುಲಿ ಗಣತಿಯಲ್ಲಿ 526 ಹುಲಿಗಳನ್ನು ಹೊಂದಿದ್ದ ಮಧ್ಯಪ್ರದೇಶ ನಂಬರ್ ಒನ್ ಸ್ಥಾನ ಪಡೆದಿದ್ದರೆ, 524 ಹುಲಿಗಳನ್ನು ಹೊಂದಿದ್ದ ಕರ್ನಾಟಕ 2ನೇ ಸ್ಥಾನದಲ್ಲಿತ್ತು. ಆದರೆ 2021ರಲ್ಲಿ ಮಧ್ಯಪ್ರದೇಶದಲ್ಲಿ 42, ಕರ್ನಾಟಕದಲ್ಲಿ 15 ಹುಲಿಗಳು ಇರುವುದಾಗಿ ವರದಿ ಹೇಳಿತ್ತು. ಇದಾದ ನಂತರ 2022ರಲ್ಲಿ ಮಧ್ಯಪ್ರದೇಶದಲ್ಲಿ 34 ಮತ್ತು ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿವೆ. ಈ ಲೆಕ್ಕಾಚಾರದಲ್ಲಿ ನೋಡಿದರೆ 2022ರಲ್ಲಿ ನಡೆಸಲಾದ ಹುಲಿ ಗಣತಿ ವೇಳೆಗೆ ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿ ಹೊರಹೊಮ್ಮುವ ಎಲ್ಲಾ ಸಾಧ್ಯತೆಗಳೂ ಇವೆ. ಈ ವರದಿ 2023ರಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:  ಅತಿಯಾದರೆ ‘ಔಷಧ’ವೂ ಅಪಾಯ..! – ಕೆಮ್ಮಿನ ಸಿರಪ್ ಸೇವಿಸುವ ಮುನ್ನ ಈ ವಿಚಾರ ಗೊತ್ತಿರಲಿ..!

ದೇಶದ ಹುಲಿ ಗಣತಿ(Tiger Census)ಗಾಗಿ ನಡೆದ ಸಮೀಕ್ಷೆಯಲ್ಲಿ ಈ ಮಾಹಿತಿ ಲಭ್ಯವಾಗಿದೆ. ಸಂಪೂರ್ಣ ವರದಿ ಕೂಡಾ ಈ ವರ್ಷವೇ ಪ್ರಕಟಿಸಲಾಗುತ್ತದೆ.  2018ರ ಗಣತಿ ಪ್ರಕಾರ ಮಧ್ಯಪ್ರದೇಶವು ದಕ್ಷಿಣ ರಾಜ್ಯಕ್ಕಿಂತ ಹೆಚ್ಚಿನ ಸಂಖ್ಯೆಯ ಹುಲಿಗಳನ್ನು ಹೊಂದಿದ್ದರೂ ಕೂಡಾ ಸಾವಿನ ಸಂಖ್ಯೆ ಕೂಡಾ ಯಾಕೆ ಜಾಸ್ತಿಯಾಗಿದೆ ಎಂಬ ಬಗ್ಗೆಯೂ ಕಾರಣ ಹುಡುಕಲಾಗ್ತಿದೆ. ಈ ರಾಷ್ಟ್ರೀಯ ಹುಲಿ ಗಣತಿಯನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಇತ್ತೀಚಿನ ಅಖಿಲ ಭಾರತ ಹುಲಿ ಅಂದಾಜು (AITE) ಅನ್ನು 2022 ರಲ್ಲಿ ನಡೆಸಲಾಯಿತು ಮತ್ತು ಅದರ ವರದಿಯನ್ನು ಈ ವರ್ಷ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಮಾಹಿತಿಯ ಪ್ರಕಾರ, ಮಧ್ಯಪ್ರದೇಶವು 2022 ರಲ್ಲಿ 34 ಹುಲಿಗಳನ್ನು ಕಳೆದುಕೊಂಡಿತು, ಆದರೆ ಹುಲಿ ರಾಜ್ಯ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ, ತೀರಾ ಹತ್ತಿರದ ಪ್ರತಿಸ್ಪರ್ಧಿಯಾಗಿರುವ, ಕರ್ನಾಟಕ 15 ಹುಲಿಗಳನ್ನು ಕಳೆದುಕೊಂಡಿದೆ ಎಂದು ತಿಳಿಸಿದೆ. ಹುಲಿಗಳ ಸರಾಸರಿ ವಯಸ್ಸು 12 ರಿಂದ 18 ವರ್ಷಗಳು. ಕೆಲವೊಮ್ಮೆ ಹುಲಿಗಳು ಕಾಡಿನೊಳಗೆ, ಗುಹೆಯೊಳಗೆ ಸ್ವಾಭಾವಿಕವಾಗಿ ಸಾಯುತ್ತವೆ.

suddiyaana