ವಿದೇಶದಲ್ಲಿದ್ದರೂ ಮತದಾನದ ಹಕ್ಕು ಮರೆಯಲಿಲ್ಲ – ಕತಾರ್‌ ನಿಂದ  ಬಂದು ವೋಟಿಂಗ್ ಮಾಡಿದ ಕೌಂಜೂರಿನ ವ್ಯಕ್ತಿ

ವಿದೇಶದಲ್ಲಿದ್ದರೂ ಮತದಾನದ ಹಕ್ಕು ಮರೆಯಲಿಲ್ಲ – ಕತಾರ್‌ ನಿಂದ  ಬಂದು ವೋಟಿಂಗ್ ಮಾಡಿದ ಕೌಂಜೂರಿನ ವ್ಯಕ್ತಿ

ಲೋಕಸಭೆ ಚುನಾವಣೆ ಎಂಬುದು ಒಂದು ಉತ್ಸವವಿದ್ದಂತೆ. ಈ ಸಂಭ್ರಮದಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಪಾಲ್ಗೊಳ್ಳಬೇಕು. ದೇಶಕ್ಕೆ ಉತ್ತಮ ನಾಯಕನ್ನು ಆರಿಸಬೇಕಾದ್ರೆ ಪ್ರತಿಯೊಬ್ಬ ಭಾರತೀಯನೂ ಕೂಡ ಮತದಾನ ಮಾಡಬೇಕು. ಆದ್ರೆ ಮನೆ ಪಕ್ಕದಲ್ಲೇ ಮತಗಟ್ಟೆಯಿದ್ದರೂ ತೆರಳಿ ಮತದಾನ ಮಾಡದೆ ನಿರ್ಲಕ್ಷ್ಯ ಧೋರಣೆ ತಾಳುವವರು ಬಹಳಷ್ಟು ಮಂದಿ ಇದ್ದಾರೆ. ಅಂಥದ್ದರಲ್ಲಿ ವಿದೇಶದಿಂದ ಆಗಮಿಸಿ ಮತದಾನ ಮಾಡುವುದು ನಿಜಕ್ಕೂ ಮಾದರಿ ಸಂಗತಿ. ಇದೀಗ ಇಲ್ಲೊಬ್ಬರು ವಿದೇಶದಿಂದ ಬಂದು ತಮ್ಮ ಹಕ್ಕು ಚಲಾಯಿಸಿ ಅನೇಕರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣನನ್ನು ವಿದೇಶದಿಂದ ಕರೆ ತಂದು ಕಠಿಣ ಶಿಕ್ಷೆ ನೀಡಬೇಕು –  ಪ್ರಧಾನಿ ಮೋದಿ

ಹೌದು, ಕುಂದಾಪುರ ತಾಲೂಕಿನ ನಾಗರಾಜ್ ಕೌಂಜೂರು ಎಂಬುವವರು ಸದ್ಯ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ವಿದೇಶದಲ್ಲಿ ಇದ್ದರೂ ಕೂಡ ತಮ್ಮ ಜವಾಬ್ದಾರಿ ಮರೆಯಲಿಲ್ಲ. ಮತದಾನದ ಸಲುವಾಗಿ ಭಾರತಕ್ಕೆ ಬಂದು ಮತದಾನ ಮಾಡಿದ್ದಾರೆ. ಗುಲ್ವಾಡಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಮತದಾನ ಮಾಡಿದ ಕೂಡಲೇ ವಿದೇಶಕ್ಕೆ ತೆರಳುವ ಮೂಲಕ ಮಾದರಿಯಾಗಿದ್ದಾರೆ.

ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬೆಳಗ್ಗೆ 11 ಗಂಟೆಯ ವೇಳೆಗೆ 24.48% ಮತದಾನ ನಡೆದಿದೆ. ಎಲ್ಲಾ 14 ಕ್ಷೇತ್ರಗಳಲ್ಲಿ 20% ಹೆಚ್ಚು ಮತದಾನ ದಾಖಲಾಗಿದೆ. ಉತ್ತರ ಕನ್ನಡದಲ್ಲಿ 27.65% ಮತದಾನ ನಡೆದರೆ ಶಿವಮೊಗ್ಗದಲ್ಲಿ 27.22% ಮತದಾನ ದಾಖಲಾಗಿದೆ. ರಾಯಚೂರು 22.05%, ಬೀದರ್‌ನಲ್ಲಿ 22.33% ಮತದಾನ ನಡೆದಿದೆ.

Shwetha M